ಆರೆಸೆಸ್ಸ್ ತಟಸ್ಥ ಸಂಘಟನೆಯಲ್ಲ, ಯಾವಾಗಲೂ ಬಿಜೆಪಿ ಜೊತೆ ಇದೆ- ಮಲ್ಲಿಕಾರ್ಜುನ್ ಖರ್ಗೆ

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಹತ್ತಿರವಿರುವುದರಿಂದ ಬಿಜೆಪಿಗೆ ಸಹಾಯಮಾಡಲು ರಾಮಮಂದಿರ ವಿಷಯವನ್ನು ಮತ್ತೆ  ಮುಖ್ಯವಾಹಿನಿ ತಂದಿದೆ ಎಂದು ಅವರು ತಿಳಿಸಿದರು. 

Last Updated : Dec 2, 2018, 06:59 PM IST
ಆರೆಸೆಸ್ಸ್ ತಟಸ್ಥ ಸಂಘಟನೆಯಲ್ಲ, ಯಾವಾಗಲೂ ಬಿಜೆಪಿ ಜೊತೆ ಇದೆ- ಮಲ್ಲಿಕಾರ್ಜುನ್ ಖರ್ಗೆ  title=

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಹತ್ತಿರವಿರುವುದರಿಂದ ಬಿಜೆಪಿಗೆ ಸಹಾಯಮಾಡಲು ರಾಮಮಂದಿರ ವಿಷಯವನ್ನು ಮತ್ತೆ  ಮುಖ್ಯವಾಹಿನಿ ತಂದಿದೆ ಎಂದು ಅವರು ತಿಳಿಸಿದರು. 

ಸುದ್ದಿಗಾರರು ಆರೆಸೆಸ್ಸ್ ಸಂಘಟನೆಯು ಸಂಕಲ್ಪಯಾತ್ರೆ ಹಮ್ಮಿಕೊಂಡಿರುವ ಬಗ್ಗೆ ಪ್ರಶ್ನಿಸಿದಾಗ "ಚುನಾವಣೆಗೆ ಇನ್ನು ಕೇವಲ ಮೂರು ತಿಂಗಳು ಬಾಕಿ ಇದೆ.ಆದ್ದರಿಂದ ಇದು ಅವರ ಕೆಲಸ. ಮತಗಳ ಧ್ರುವೀಕರಣಕ್ಕೆ ಅಂತಹ ವಿವಾದಗಳನ್ನು ಬೆಳೆಸುವುದು ಅವರಿಗೆ ಸ್ವಾಭಾವಿಕವಾಗಿದೆ. ಆದರೆ ಆರ್ಎಸ್ಎಸ್ ಯಾವಾಗಲೂ ಬಿಜೆಪಿಯೊಂದಿಗಿದೆ.ಆರ್ಎಸ್ಎಸ್ ಒಂದು ಸಾಂಸ್ಕೃತಿಕ ಮತ್ತು ತಟಸ್ಥ ಸಂಘಟನೆ ಎಂದು ಕರೆಯುತ್ತಿದ್ದರೂ, ಅದು ತಟಸ್ಥ ಸಂಸ್ಥೆಯಲ್ಲ, ಬಿಜೆಪಿಗೆ ಸಹಾಯ ಮಾಡಲು ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ" ಎಂದು ಖರ್ಗೆ ಪಿಟಿಐಗೆ ತಿಳಿಸಿದರು.

ಈ ಮೊದಲು ಯುನೈಟೆಡ್ ಕ್ರಿಶ್ಚಿಯನ್ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಖರ್ಗೆ ಬಿಜೆಪಿ ಶಾಸಕ ಗೋಪಾಲ್ ಶೆಟ್ಟಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕ್ರಿಶ್ಚಿಯನ್ನರು ಕೊಡುಗೆ ನೀಡಲಿಲ್ಲ ಎನ್ನುವ ಹೇಳಿಕೆಯನ್ನು ಉಲ್ಲೇಖಿಸುತ್ತಾ ಆರ್ಎಸ್ಎಸ್ ಅಥವಾ ಬಿಜೆಪಿಯ ಎಷ್ಟು ಜನರು ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ? ಎಂದು ಪ್ರಶ್ನಿಸಿದರು. ಅಲ್ಲದೆ ಸಮಾಜದ ಎಲ್ಲಾ ವರ್ಗಗಳು ಸಂವಿಧಾನದ ಹಕ್ಕುಗಳನ್ನು ಕಾಪಾಡಿಕೊಳ್ಳಲು ಮೂಲಭೂತ ಹಕ್ಕುಗಳನ್ನು ಕಾಪಾಡುವುದು ಮುಖ್ಯವಾಗಿದೆ" ಎಂದು ಅವರು ಹೇಳಿದರು.

 

Trending News