ಶ್ರೀಹರಿಕೋಟ: ಚಂದ್ರಯಾನ-3ರ ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯು(ISRO) ಮತ್ತೊಂದು ಸಾಹಸಕ್ಕೆ ಕೈಹಾಕಿದ್ದು, ‘ಸೂರ್ಯನ ಶಿಕಾರಿ’ ಮಾಡಲು ಹೊರಟಿದೆ. ಬಾಹ್ಯಾಕಾಶದಲ್ಲಿ ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆಯ ಭಾಗವಾಗಿ ಇಂದು ಬೆಳಗ್ಗೆ 11.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ PSLV-C57 ರಾಕೆಟ್‌ನಲ್ಲಿ Aditya L1 ಉಪಗ್ರಹವನ್ನು ಉಡಾವಣೆ ಮಾಡಲಿದೆ.
ಇನ್ನು ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ರೂಪಿಸಲಾಗಿದೆ. ಈ Aditya L1 ಗಗನ ನೌಕೆ 120-125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. Aditya L1 ಯೋಜನೆಯ ಅವಧಿ 4 ತಿಂಗಳಾಗಿದ್ದು, ಜನವರಿ ಮೊದಲ ವಾರದಲ್ಲಿ ಸೂರ್ಯಯಾನದ ನೌಕೆ L1ಗೆ ಸೇರುವ ನಿರೀಕ್ಷೆಯಿದೆ. ಸೂರ್ಯನ ಮೇಲಿರುವ ವಿವಿಧ ಪದರಗಳ ಸಂಶೋಧನೆ, ವಿದ್ಯುತ್ ಕಾಂತೀಯ ಸೇರಿ ಹಲವು ವಲಯಗಳ ಅಧ್ಯಯನ ಹಾಗೂ L1 ಪಾಯಿಂಟ್‌ನಲ್ಲಿ ಕಣಗಳ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ Aditya L1 ಗಗನ ನೌಕೆಯನ್ನು ಸೂರ್ಯನತ್ತ ಕಳುಹಿಸುತ್ತಿದೆ.
#WATCH | Aditya-L1 Mission will be launched today by the Indian Space Research Organisation (ISRO) from Sriharikota
(Visuals from Satish Dhawan Space Centre in Sriharikota, Andhra Pradesh) pic.twitter.com/wvJZTyE0iW
— ANI (@ANI) September 2, 2023
ಇದನ್ನೂ ಓದಿ: 538 ಕೋಟಿ ರೂ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ
Aditya L1 ನೌಕೆಯನ್ನು ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿರುವ L1(ಲಾಗ್ರಾಂಜಿಯನ್ ಪಾಯಿಂಟ್ -1) ಸ್ಥಳದಲ್ಲಿ ನಿಯೋಜಿಸಲಾಗುತ್ತದೆ. ಈ ಸ್ಥಳಕ್ಕೆ ತಲುಪಲು ಅದಕ್ಕೆ 4 ತಿಂಗಳು ಹಿಡಿಯಲಿದೆ. ಬಳಿಕ ಅದು ಅಲ್ಲಿಂದಲೇ ಸೂರ್ಯನ ಕುರಿತು ಸಂಶೋಧನೆ ನಡೆಸಿ ಭೂಮಿಗೆ ಮಾಹಿತಿ ರವಾನಿಸಲಿದೆ.
ಚೆಂಗಾಲಮ್ಮನಿಮಗೆ ಇಸ್ರೋ ಮುಖ್ಯಸ್ಥರ ವಿಶೇಷ ಪೂಜೆ
ಸೂರ್ಯಯಾನದ ಯಶಸ್ಸಿಗಾಗಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರು ಶುಕ್ರವಾರ ತಿರುಪತಿ ಜಿಲ್ಲೆಯ ಪ್ರಸಿದ್ಧ ಸೂಳ್ಳೂರು ಪೇಟ ಚೆಂಗಾಲಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚಂದ್ರಯಾನ-3ಕ್ಕೂ ಸಹ ಎಸ್.ಸೋಮನಾಥ್ ಅವರು ಇದೇ ಚಂಗಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.
ಇದನ್ನೂ ಓದಿ: ಜಿ-20 ಶೃಂಗಸಭೆ ಹಿನ್ನೆಲೆ ದೆಹಲಿಯಲ್ಲಿ ʼಮಿನಿ ಲಾಕ್‌ಡೌನ್ʼ..!
Chairman S. Somnath ji and a team of scientists performed puja at Chengalamma Parameshwari Temple in Sullurupeta, Andhra Pradesh for India's first solar observatory mission #AdityaL1 🧡 pic.twitter.com/IHtrfEdXZP
— Sunanda Roy 👑 (@SaffronSunanda) September 1, 2023
2ನೇ ಲಾಂಚ್ ಪ್ಯಾಡ್‍ನಲ್ಲಿ ಉಡಾವಣೆ
ಸತೀಶ್ ಧವನ್ ಉಡಾವಣಾ ಕೇಂದ್ರದ 2ನೇ ಲಾಂಚ್‍ಪ್ಯಾಡ್‍ನಲ್ಲಿ ಉಪಗ್ರಹ ಉಡಾವಣೆಗೊಳ್ಳಲಿದೆ. 1,475KG ತೂಕದ ಈ ರಾಕೆಟ್ 4 ಹಂತಗಳಲ್ಲಿ ಉಡಾವಣೆಗೊಳ್ಳಲಿದೆ. ಇಸ್ರೋ ಈಗಾಗಲೇ ಉಡಾವಣೆಗೆ ಸಂಬಂಧಿಸಿದ ರಿಹರ್ಸಲ್ ನಡೆಸಿದೆ. ಮೇಲ್ಮೈ ಸೌರ ವಾತಾವರಣ ಅಧ್ಯಯನ ನಡೆಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಚಂದ್ರಯಾನ-3ರಂತೆ Aditya L1 ಯಶಸ್ಸಿಗೂ ದೇಶದಾದ್ಯಂತ ಜನರು ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.