ಮಧ್ಯಂತರ ಬಜೆಟ್ 2024: ರಕ್ಷಣಾ ಸಾಮರ್ಥ್ಯ ಮತ್ತು ಮೂಲಭೂತ ಸೌಕರ್ಯಗಳ ವರ್ಧನೆ

ಹಣಕಾಸು ಸಚಿವಾಲಯದ 2024ರ ಆರ್ಥಿಕ ವಿಮರ್ಶೆಯ ಪ್ರಕಾರ, ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ಅಸಮತೋಲನ ಮತ್ತು ಸಮಸ್ಯೆಗಳನ್ನು ಹೊಂದಿದ್ದ ಆರ್ಥಿಕ ವಲಯದ ಹೊರತಾಗಿಯೂ, ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಭಾರತ ಪ್ರಸ್ತುತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಬಹುತೇಕ 3.7 ಟ್ರಿಲಿಯನ್ ಡಾಲರ್ (2024ನೇ ಆರ್ಥಿಕ ವರ್ಷದ ಅಂದಾಜಿನ ಪ್ರಕಾರ) ಜಿಡಿಪಿ ಹೊಂದಿದೆ. ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಎಂದರೆ ಬಹುತೇಕ ಒಂದು ಲಕ್ಷ ಕೋಟಿ ರೂಪಾಯಿಗಳಿಗೆ ಸಮನಾಗಿರುತ್ತದೆ.

Written by - Girish Linganna | Last Updated : Feb 2, 2024, 10:58 AM IST
  • ಭಾರತ 2024-25ರ ತನ್ನ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ 6.21 ಲಕ್ಷ ಕೋಟಿ ರೂಪಾಯಿ ಒದಗಿಸಿದೆ.
  • ಇದು ಕಳೆದ ವರ್ಷದ ಆರಂಭಿಕ ಬಜೆಟ್‌ನಿಂದ 4.72% ಹೆಚ್ಚಾದರೂ, 2023-24ರ ಪರಿಷ್ಕೃತ ಬಜೆಟ್‌ನಿಂದ ಸ್ವಲ್ಪ (0.37%) ಕಡಿಮೆಯಾಗಿದೆ.
 ಮಧ್ಯಂತರ ಬಜೆಟ್ 2024: ರಕ್ಷಣಾ ಸಾಮರ್ಥ್ಯ ಮತ್ತು ಮೂಲಭೂತ ಸೌಕರ್ಯಗಳ ವರ್ಧನೆ title=

Defense budget allocation 2024 : ಹಣಕಾಸು ಸಚಿವಾಲಯದ 2024ರ ಆರ್ಥಿಕ ವಿಮರ್ಶೆಯ ಪ್ರಕಾರ, ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ಅಸಮತೋಲನ ಮತ್ತು ಸಮಸ್ಯೆಗಳನ್ನು ಹೊಂದಿದ್ದ ಆರ್ಥಿಕ ವಲಯದ ಹೊರತಾಗಿಯೂ, ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಭಾರತ ಪ್ರಸ್ತುತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಬಹುತೇಕ 3.7 ಟ್ರಿಲಿಯನ್ ಡಾಲರ್ (2024ನೇ ಆರ್ಥಿಕ ವರ್ಷದ ಅಂದಾಜಿನ ಪ್ರಕಾರ) ಜಿಡಿಪಿ ಹೊಂದಿದೆ. ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಎಂದರೆ ಬಹುತೇಕ ಒಂದು ಲಕ್ಷ ಕೋಟಿ ರೂಪಾಯಿಗಳಿಗೆ ಸಮನಾಗಿರುತ್ತದೆ.

ತಜ್ಞರ ಅಭಿಪ್ರಾಯದ ಪ್ರಕಾರ, ಮೋದಿ ಸರ್ಕಾರದ 47.66 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಜೆಟ್ 2047ರ ವೇಳೆಗೆ ಭಾರತವನ್ನು 'ವಿಕಸಿತ ಭಾರತ' ಅಥವಾ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಉದ್ದೇಶಕ್ಕೆ ಭದ್ರವಾದ ತಳಹದಿ ಹಾಕಲಿದೆ. ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಗುರುವಾರ 47.66 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಜೆಟ್ ಅನ್ನು ಮಂಡಿಸಿದ್ದು, ದೇಶದ ಎಲ್ಲ ವಲಯಗಳನ್ನೂ ಅಭಿವೃದ್ಧಿ ಪಡಿಸುವ ಗುರಿ ಹೊಂದಿದೆ.

ಭಾರತ 2024-25ರ ತನ್ನ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ 6.21 ಲಕ್ಷ ಕೋಟಿ ರೂಪಾಯಿ ಒದಗಿಸಿದೆ. ಇದು ಕಳೆದ ವರ್ಷದ ಆರಂಭಿಕ ಬಜೆಟ್‌ನಿಂದ 4.72% ಹೆಚ್ಚಾದರೂ, 2023-24ರ ಪರಿಷ್ಕೃತ ಬಜೆಟ್‌ನಿಂದ ಸ್ವಲ್ಪ (0.37%) ಕಡಿಮೆಯಾಗಿದೆ.

ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ವಲಯದಲ್ಲಿ ಆಧುನಿಕ ತಂತ್ರಜ್ಞಾನ ಅಥವಾ ಡೀಪ್ ಟೆಕ್ನಾಲಜಿಯನ್ನು ಹೆಚ್ಚಿಸಲು ಹೊಸ ಯೋಜನೆಯನ್ನು ಪರಿಚಯಿಸಿದ್ದಾರೆ.

ಈ ಡೀಪ್ ಟೆಕ್ನಾಲಜಿ ಎನ್ನುವುದು ಆಧುನಿಕ ವೈಜ್ಞಾನಿಕ ಮತ್ತು ತಾಂತ್ರಿಕ ನಾವೀನ್ಯತೆಯಾಗಿದ್ದು, ಇದು ವಿವಿಧ ಉದ್ಯಮಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರಲಿದೆ. ಈ ತಂತ್ರಜ್ಞಾನಗಳು ಬಹಳಷ್ಟು ಬಾರಿ ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಬ್ಲಾಕ್ ಚೇನ್, ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ವಿಶೇಷ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಒಳಗೊಂಡಿದೆ. ಇವುಗಳ ಪರಿಣಾಮ ಅತ್ಯಂತ ಆಳವೂ, ದೀರ್ಘವ್ಯಾಪಿಯೂ ಆಗಿದ್ದು, ನಾವು ಜೀವಿಸುವ, ಕೆಲಸ ಮಾಡುವ, ಮತ್ತು ನಮ್ಮ ಸುತ್ತಲಿನ ಜಗತ್ತಿನೊಡನೆ ಪ್ರತಿಕ್ರಿಯಿಸುವ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿವೆ.

ಈ ವರ್ಷದ ರಕ್ಷಣಾ ಬಜೆಟ್ 2024-25ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯ 1.89% ಭಾಗವನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಈ ಬಾರಿಯ ರಕ್ಷಣಾ ಬಜೆಟ್‌ನಲ್ಲಿ 2.82 ಲಕ್ಷ ಕೋಟಿ ರೂಪಾಯಿಗಳ ಖರ್ಚು, 1.72 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ, ಮತ್ತು 1.41 ಲಕ್ಷ ಕೋಟಿ ರೂಪಾಯಿಗಳ ಪಿಂಚಣಿ ಮೊತ್ತ ಸೇರಿದೆ. ಮಿಲಿಟರಿ ಸಾಮರ್ಥ್ಯಗಳನ್ನು ಹೆಚ್ಚಿಸಲು ಇರುವ ಬಂಡವಾಳ ಕಳೆದ ವರ್ಷಕ್ಕಿಂತ 5.78% ಹೆಚ್ಚಾಗಿದೆ. ಭಾರತ ನೂತನ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಯುದ್ಧ ನೌಕೆಗಳು, ಟ್ಯಾಂಕ್‌ಗಳು, ಆರ್ಟಿಲರಿ ವ್ಯವಸ್ಥೆಗಳು, ರಾಕೆಟ್‌ಗಳು, ಕ್ಷಿಪಣಿಗಳು, ಮಾನವರಹಿತ ವ್ಯವಸ್ಥೆಗಳು, ಹಾಗೂ ವಿವಿಧ ಯುದ್ಧ ತಂತ್ರಜ್ಞಾನಗಳ ಮೂಲಕ ತನ್ನ ಸೇನೆಯನ್ನು ಮೇಲ್ದರ್ಜೆಗೆ ಏರಿಸುತ್ತಿದೆ.

"ಪ್ರಸ್ತುತ ಜಾಗತಿಕ ರಾಜಕಾರಣದ ಸ್ಥಿತಿಗತಿಗಳು ಮತ್ತು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಮತ್ತು ರಕ್ಷಣಾ ರಫ್ತು ಹೆಚ್ಚಿಸುವ ಎರಡು ಗುರಿಗಳನ್ನು ಸಾಧಿಸುವ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು, ರಕ್ಷಣಾ ಬಜೆಟ್ 2024-25ರ ಹಣಕಾಸು ವರ್ಷದಲ್ಲಿ 6,21,540.85 ಕೋಟಿ ರೂಪಾಯಿ ತಲುಪಿದೆ‌. ಈ ಮೊತ್ತ ಒಟ್ಟಾರೆ ಬಜೆಟ್‌ನ 13.04% ಆಗಿದೆ" ಎಂದು ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ.

ಈ ಹೇಳಿಕೆಯ ಪ್ರಕಾರ, ಹೆಚ್ಚಾದ ರಕ್ಷಣಾ ಬಂಡವಾಳ ವೆಚ್ಚ ಆಧುನೀಕರಣದ ಮೂಲಕ ಪ್ರಮುಖ ಕೊರತೆಗಳನ್ನು ನೀಗುವ ಗುರಿಯನ್ನು ಹೊಂದಿದೆ. ಅದರೊಡನೆ, ಈ ಪ್ರಮಾಣದ ಹೂಡಿಕೆ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಕೊಡುಗೆ ನೀಡಲಿದೆ.

ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಈ ಬಜೆಟ್ ಪ್ರಸ್ತುತ ಸುಖೋಯಿ-30 ಪಡೆಯನ್ನು ಆಧುನೀಕರಿಸುವ, ಹೆಚ್ಚುವರಿ ವಿಮಾನಗಳನ್ನು ಖರೀದಿಸುವ, ಮಿಗ್-29 ವಿಮಾನಗಳಿಗೆ ಆಧುನಿಕ ಇಂಜಿನ್‌ಗಳನ್ನು ಖರೀದಿಸುವ, ಸಿ-295 ಸಾಗಾಣಿಕಾ ವಿಮಾನಗಳು, ಕ್ಷಿಪಣಿ ವ್ಯವಸ್ಥೆಗಳು, ಡೆಕ್ ಆಧಾರಿತ ಯುದ್ಧ ವಿಮಾನಗಳು ಮತ್ತು ಸಬ್‌ಮರೀನ್‌ಗಳನ್ನು ಖರೀದಿಸುವ ಉದ್ದೇಶಗಳಿಗೆ ನೆರವಾಗಲಿದೆ.

ಕಳೆದ ವರ್ಷದ ಭಾರತದ ರಕ್ಷಣಾ ಬಜೆಟ್ 5.93 ಲಕ್ಷ ಕೋಟಿ ರೂಪಾಯಿ ಆಗಿತ್ತು. ಇದರಲ್ಲಿ 1.62 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ವೆಚ್ಚವೂ ಸೇರಿತ್ತು.

ಬಜೆಟ್ ಮಂಡನೆಯ ಸಂದರ್ಭದಲ್ಲಿ, ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಉದ್ದೇಶಗಳಿಗೆ ಮತ್ತು ಸ್ವಾವಲಂಬನೆ ಸಾಧನೆಗೆ ವೇಗ ನೀಡುವ ಸಲುವಾಗಿ ‌ನೂತನ ಡೀಪ್ ಟೆಕ್ ಯೋಜನೆಯನ್ನು ಘೋಷಿಸಿದರು. ಆದರೆ, ಈ ಯೋಜನೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾಹಿತಿಗಳು ಇನ್ನೂ ಅಧಿಕೃತವಾಗಿ ಲಭ್ಯವಾಗಿಲ್ಲ.

ಈ ಯೋಜನೆ ರಕ್ಷಣಾ ವಲಯಕ್ಕೆ, ಅದರಲ್ಲೂ ರಕ್ಷಣಾ ವಲಯದಲ್ಲಿ ತೊಡಗಿಕೊಂಡಿರುವ ಸ್ಟಾರ್ಟಪ್‌ಗಳಿಗೆ ಮತ್ತು ಎಂಎಸ್ಎಂಇಗಳಿಗೆ ಅವಶ್ಯಕವಾದ ಹೂಡಿಕೆ, ಸಹಾಯಧನ, ಬೆಂಬಲವನ್ನು ಒದಗಿಸಲಿದೆ.

ಬಜೆಟ್ ದಾಖಲಾತಿಗಳ ಪರಿಷ್ಕೃತ ಅಂದಾಜಿನ ಪ್ರಕಾರ, ಕಳೆದ ವರ್ಷ ಸೇನಾಪಡೆಗಳಿಗೆ ಒದಗಿಸಲಾದ 1.62 ಲಕ್ಷ ಕೋಟಿ ರೂಪಾಯಿಗಳ ಪೈಕಿ 5,372 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ಸಾಧ್ಯವಾಗಿರಲಿಲ್ಲ. 2022-23ನೇ ಸಾಲಿನಲ್ಲಿ, ಚೀನಾದ ಜೊತೆಗೆ ನಡೆದ ಗಡಿ ಉದ್ವಿಗ್ನತೆಗಳ ಕಾರಣದಿಂದ ಭಾರತೀಯ ಸೇನಾಪಡೆಗಳು ಹಿಂದಿನ ಬಾರಿಯ ಬಜೆಟ್‌ನಲ್ಲಿ ನೀಡಿದ ಮೊತ್ತಕ್ಕಿಂತ ಹೆಚ್ಚುವರಿಯಾಗಿ 21,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿವೆ. ಇದು ತುರ್ತು ಖರೀದಿಗಳನ್ನು ನಡೆಸಲು ಮತ್ತು ಮುಂಚೂಣಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಡೆಸಲು ಮಾಡಿದ ವೆಚ್ಚವಾಗಿತ್ತು.

2023-24ನೇ ಸಾಲಿನ ಹಣಕಾಸು ವರ್ಷಕ್ಕೆ ಪರಿಷ್ಕೃತ ಅಂದಾಜಿನ ಪ್ರಕಾರ, ಸೈನಿಕರಿಗೆ ಒದಗಿಸುವ ವೆಚ್ಚ ಕಳೆದ ಬಾರಿ ಒದಗಿಸಿದ ಮೊತ್ತಕ್ಕಿಂತ 28,548 ಕೋಟಿ ಹೆಚ್ಚಾಗಿತ್ತು. ಈ ಹೆಚ್ಚಳಕ್ಕೆ ಸಂಬಳ ಮತ್ತು ಭತ್ಯೆಗಳು, ಸಾಗಾಣಿಕೆ, ನಿವೃತ್ತ ಸೈನಿಕರಿಗೆ ಒದಗಿಸುವ ಆರೋಗ್ಯ ಯೋಜನೆಗಳು, ರಾಷ್ಟ್ರೀಯ ರೈಫಲ್ಗೆ ಸಂಬಂಧಿಸಿದ ವೆಚ್ಚಗಳು ಕಾರಣವಾಗಿವೆ.

2022-23ರಲ್ಲಿ, ಭಾರತ ಮಿಲಿಟರಿ ವೆಚ್ಚಗಳಿಗಾಗಿ 5.25 ಲಕ್ಷ ಕೋಟಿ ರೂಪಾಯಿ ಒದಗಿಸಿತ್ತು. ಅದರ ಹಿಂದಿನ ವರ್ಷ, ಅಂದರೆ 2021-22ರಲ್ಲಿ 4.78 ಲಕ್ಷ ಕೋಟಿ ಒದಗಿಸಲಾಗಿತ್ತು. ಇದಕ್ಕೆ ಹಿಂದಿನ ವರ್ಷದ ಮಿಲಿಟರಿ ವೆಚ್ಚ, ಅಂದರೆ 2020-21ರ ವೆಚ್ಚ 4.71 ಲಕ್ಷ ಕೋಟಿ ಆಗಿತ್ತು.

ಈ ವರ್ಷ ಒದಗಿಸಿರುವ ಮೊತ್ತವನ್ನು ಸ್ಥಳೀಯವಾಗಿ ನಿರ್ಮಿಸಲಾಗುವ ಆಧುನಿಕ ಆಯುಧ ವ್ಯವಸ್ಥೆಗಳನ್ನು ಖರೀದಿಸಲು ಬಳಸಲಾಗುತ್ತದೆ. ಇದು ಭಾರತದ ಒಟ್ಟಾರೆ ಜಿಡಿಪಿಯ ಮೇಲೆ ಧನಾತ್ಮಕ ಪರಿಣಾಮ ಬೀರಿ, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಬಂಡವಾಳ ಹೂಡಿಕೆಯನ್ನು ಉತ್ತೇಜಿಸಿ, ದೇಶೀಯ ಆರ್ಥಿಕತೆಯನ್ನು ಉದ್ದೇಶಿಸಲಿದೆ.

ಭಾರತದ ಗಡಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಸಲುವಾಗಿ ಕಾರ್ಯ ನಿರ್ವಹಿಸುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ಗೆ (ಬಿಆರ್‌ಒ) 6,500 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಈ ಮೊತ್ತ 2023-24ನೇ ಹಣಕಾಸು ವರ್ಷದ ಮೊತ್ತಕ್ಕಿಂತ 30% ಹೆಚ್ಚಾಗಿದ್ದು, 2021-22ನೇ ಹಣಕಾಸು ವರ್ಷಕ್ಕಿಂತ 160% ಹೆಚ್ಚಾಗಿದೆ. ಈ ಹೆಚ್ಚಳಕ್ಕೆ ಗಡಿ ಪ್ರದೇಶದಲ್ಲಿ ಭಾರತ ಮತ್ತು ಚೀನಾಗಳ ನಡುವಿನ ಉದ್ವಿಗ್ನತೆ ಕಾರಣವಾಗಿದೆ ಎನ್ನಲಾಗಿದೆ. ಇದು ಗಡಿ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸಿದೆ.

-ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News