ಅಕ್ಟೋಬರ್‌ನಲ್ಲಿ ಶೇ 4.62 ಕ್ಕೆ ಹೆಚ್ಚಿದ ಚಿಲ್ಲರೆ ಹಣದುಬ್ಬರ

  ಹೆಚ್ಚಿನ ಆಹಾರ ಬೆಲೆಗಳಿಂದಾಗಿ ಭಾರತದ ಚಿಲ್ಲರೆ ಹಣದುಬ್ಬರ ದರವು ಅಕ್ಟೋಬರ್‌ನಲ್ಲಿ ಶೇ 4.62 ಕ್ಕೆ ಏರಿದೆ ಎಂದು ಸರ್ಕಾರ ತಿಳಿಸಿದೆ. 

Last Updated : Nov 13, 2019, 07:53 PM IST
 ಅಕ್ಟೋಬರ್‌ನಲ್ಲಿ ಶೇ 4.62 ಕ್ಕೆ ಹೆಚ್ಚಿದ ಚಿಲ್ಲರೆ ಹಣದುಬ್ಬರ title=
ಸಾಂದರ್ಭಿಕ ಚಿತ್ರ

ನವದೆಹಲಿ:  ಹೆಚ್ಚಿನ ಆಹಾರ ಬೆಲೆಗಳಿಂದಾಗಿ ಭಾರತದ ಚಿಲ್ಲರೆ ಹಣದುಬ್ಬರ ದರವು ಅಕ್ಟೋಬರ್‌ನಲ್ಲಿ 4.62% ಕ್ಕೆ ಏರಿದೆ ಎಂದು ಸರ್ಕಾರ ತಿಳಿಸಿದೆ. 

ಹಿಂದಿನ ತಿಂಗಳಲ್ಲಿ 3.99% ಕ್ಕೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ವಾರ್ಷಿಕ ಚಿಲ್ಲರೆ ಹಣದುಬ್ಬರ ಹೆಚ್ಚಾಗಿದೆ ಮತ್ತು ವಿಶ್ಲೇಷಕರು ಹೇಳಿದ್ದಾರೆ. ರಾಯಿಟರ್ಸ್ ಸಮೀಕ್ಷೆ ನಡೆಸಿದ ವಿಶ್ಲೇಷಕರು ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ದರವನ್ನು 4.25% ಎಂದು ಊಹಿಸಿದ್ದರು. 

ಮಾನ್ಸೂನ್ ನಲ್ಲಿ ಭಾರಿ ಮಳೆ ಸುರಿದಿದ್ದರಿಂದಾಗಿ ಸರಬರಾಜಿನಲ್ಲಿ ಅಡ್ಡಿಯುಂಟಾಗಿ ಹೆಚ್ಚಿನ ತರಕಾರಿಗಳ ಬೆಲೆಗಳು ಕಳೆದ ತಿಂಗಳು ಏರಿಕೆ ಕಂಡಿದ್ದವು. ನವೆಂಬರ್ 4 ಮತ್ತು 9 ರ ನಡುವೆ ಸುದ್ದಿ ಸಂಸ್ಥೆ ರಾಯಿಟರ್ಸ್ ನಡೆಸಿದ 39 ಅರ್ಥಶಾಸ್ತ್ರಜ್ಞರ ಸಮೀಕ್ಷೆಯಲ್ಲಿ ವಾರ್ಷಿಕ ಗ್ರಾಹಕ ಬೆಲೆ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇಕಡಾ 4.25 ಕ್ಕೆ ಏರಿಕೆಯಾಗಿತ್ತು.

ಗ್ರಾಹಕ ಹಣದುಬ್ಬರವನ್ನು ಹೆಚ್ಚಿಸುವುದು ಕೇಂದ್ರೀಯ ಬ್ಯಾಂಕಿಗೆ ವಿತ್ತೀಯ ನೀತಿಯನ್ನು ಇನ್ನಷ್ಟು ಸರಾಗಗೊಳಿಸುವ ಅವಕಾಶವನ್ನು ನೀಡುತ್ತದೆ. ಆರ್‌ಬಿಐ ಈ ವರ್ಷ ಇಲ್ಲಿಯವರೆಗೆ ರೆಪೊ ದರವನ್ನು ಅಥವಾ ವಾಣಿಜ್ಯ ಬ್ಯಾಂಕುಗಳಿಗೆ ಅಲ್ಪಾವಧಿಯ ಹಣವನ್ನು ಸಾಲ ನೀಡುವ ಪ್ರಮುಖ ಬಡ್ಡಿದರವನ್ನು 135 ಪಾಯಿಂಟ್‌ಗಳಿಂದ (1.35 ಶೇಕಡಾ ಪಾಯಿಂಟ್‌ಗಳು) 5.15 ಕ್ಕೆ ಇಳಿಸಿದೆ.

ಸೋಮವಾರ ಬಿಡುಗಡೆಯಾದ ಪ್ರತ್ಯೇಕ ದತ್ತಾಂಶದಲ್ಲಿ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ಯಿಂದ ಅಳೆಯಲ್ಪಟ್ಟ ಕೈಗಾರಿಕಾ ಉತ್ಪಾದನೆಯು ಸೆಪ್ಟೆಂಬರ್‌ನಲ್ಲಿ ಸತತವಾಗಿ ಎರಡನೇ ತಿಂಗಳು ಸಂಕುಚಿತಗೊಂಡಿದ್ದರಿಂದ ದೇಶದ ಆರ್ಥಿಕ ಕುಸಿತವು ಮುಂದುವರೆದಿದೆ.

ಕೈಗಾರಿಕಾ ಉತ್ಪಾದನೆಯ ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ ಶೇಕಡಾ 4.3 ರಷ್ಟು ಕುಗ್ಗಿದೆ, ಇದು ಆರು ವರ್ಷಗಳಲ್ಲಿ ಅದರ ವೇಗದ ಕುಸಿತವಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
 

Trending News