ಭಾರತದ ಹಿರಿಮೆ ಪ್ರಧಾನಿ ಮೋದಿಗೆ ಫ್ರಾನ್ಸ್ ನಲ್ಲಿ ʼಅತ್ಯುನ್ನತ ಪ್ರಶಸ್ತಿʼ ಗರಿಮೆ..!

Prime Minister Modi In France : ಜುಲೈ 13ರಂದು ಫ್ರಾನ್ಸ್ ನಲ್ಲಿ ರಿಪಬ್ಲಿಕ್​ ಡೇ ಆಚರಿಸಲಾಯಿತು ಆ ವೇಳೆ ಪ್ರಧಾನಿ ಮೋದಿಯವರು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಭಾಗಿಯಾಗಿದ್ದರು. ಆ ವೇಳೆ ಫ್ರಾನ್ಸ್ ನಲ್ಲಿ ʼಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

Written by - Zee Kannada News Desk | Last Updated : Jul 15, 2023, 02:31 PM IST
  • ಪ್ರಧಾನಿ ಮೋದಿಗೆ ಫ್ರಾನ್ಸ್ ನಲ್ಲಿ ʼಅತ್ಯುನ್ನತ ಪ್ರಶಸ್ತಿ
  • ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರಿಂದ ಆತಿಥ್ಯ
  • ಮೋದಿಗೆ ಫ್ರಾನ್ಸ್‌ನ ನಾಗರಿಕ ಮತ್ತು ಮಿಲಿಟರಿ ಗೌರವ
ಭಾರತದ ಹಿರಿಮೆ ಪ್ರಧಾನಿ ಮೋದಿಗೆ ಫ್ರಾನ್ಸ್ ನಲ್ಲಿ ʼಅತ್ಯುನ್ನತ ಪ್ರಶಸ್ತಿʼ ಗರಿಮೆ..!  title=

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಫ್ರೆಂಚ್​ನ ಅತ್ಯುನ್ನತ ಗೌರವ ಗ್ರ್ಯಾಂಡ್​ ಕ್ರಾಸ್​ ಆಫ್​ ದಿ ಲೀಜನ್ ಆಫ್ ಹಾನರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜುಲೈ 13ರಂದು ಫ್ರಾನ್ಸ್ ನಲ್ಲಿ ರಿಪಬ್ಲಿಕ್​ ಡೇ ಆಚರಿಸಲಾಯಿತು ಆ ವೇಳೆ ಪ್ರಧಾನಿಯವರು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಭಾಗಿಯಾಗಿದ್ದರು.

ಆ ಸಮಾರಂಭದಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾರತದ ಪ್ರಧಾನಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಮ್ಯಾಕ್ರನ್ ಹಾಗೂ ಭಾರತದ ಜನತೆಗೆ ಧನ್ಯವಾದ ತಿಳಿಸಿದ್ದಾರೆ. 

ಇದನ್ನೂ ಓದಿ: ʼನಮಸ್ಕಾರ ದೇವ್ರುʼ Dr Bro ವಿಡಿಯೋ ಮಾಡಿದ್ದಕ್ಕೆ ಅಲ್ಲಿನ ಜನ ಏನ್‌ ಮಾಡಿದ್ರು ನೀವೆ ನೋಡಿ..!

ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ, ಕೂಡ ಮೋದಿಯನ್ನು ಶ್ಲಾಘಿಸಿದ್ದಾರೆ. ವಿದೇಶಗಳೊಡನೆ ಉತ್ತಮ ಭಾಂದವ್ಯ ಹೊಂದಲು ಈ ಪ್ರಶಸ್ತಿ ಕೂಡ ಸಹಕಾರ ಎಂದಿದ್ದಾರೆ. ಫ್ರಾನ್ಸ್ ಅಧ್ಯಕ್ಷರಿಂದ ಅತ್ಯುನ್ನತ ಪ್ರಶಸ್ತಿ ಭಾರತದ ಪ್ರಧಾನಿ ಕಾರಣರಾಗಿದ್ದಾರೆ ಎಂದು ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಅರಮನೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಅಲ್ಲಿನ ಅದ್ದೂರಿ ಔತಣಕೂಟದಲ್ಲಿ ಭಾಗಿಯಾಗಿದರು. ಇದೀಗ ಪ್ರಧಾನಿ ಮೋದಿ ಅವರು ಫ್ರಾನ್ಸ್​ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಂದ ಫ್ರೆಂಚ್​ನ ಅತ್ಯುನ್ನತ ಗೌರವ ಗ್ರ್ಯಾಂಡ್​ ಕ್ರಾಸ್​ ಆಫ್​ ದಿ ಲೀಜನ್ ಆಫ್ ಹಾನರ್ ಪ್ರಶಸ್ತಿ  ಸ್ವೀಕಾರ ಮಾಡಿರುವುದು ಭಾರತಿಯರಿಗೆ ಸಂತಸದ ವಿಚಾರಗಳಲ್ಲಿ ಒಂದಾಗಿದೆ.  

ಇದನ್ನೂ ಓದಿ: ಟೊಮ್ಯಾಟೋ ಗೂ ಬಂತು ‘ಟಮ್ ಟಮ್ ಟ್ರೆಂಡಿಗ್ ಸಾಂಗ್‌;‌ ಇಲ್ಲಿದೆ ವಿಡಿಯೋ ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News