ಇಂದು ಬಿಡುಗಡೆಯಾಗಲಿದೆ ದೇಶದ ಮೊಟ್ಟಮೊದಲ 5G ಸ್ಮಾರ್ಟ್ ಫೋನ್

ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಹೊಂದಿರುವ ಭಾರತದ ಮೊದಲ 5G ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ IQOO3 ಪಾತ್ರವಾಗಲಿದೆ.

Last Updated : Feb 25, 2020, 05:56 PM IST
ಇಂದು ಬಿಡುಗಡೆಯಾಗಲಿದೆ ದೇಶದ ಮೊಟ್ಟಮೊದಲ 5G ಸ್ಮಾರ್ಟ್ ಫೋನ್ title=

ಚೀನಾದ ಸ್ಮಾರ್ಟ್ ಫೋನ್ ತಯಾರಕ ಕಂಪನಿ iQOO ತನ್ನ ಮೊಟ್ಟಮೊದಲ 5G ಸ್ಮಾರ್ಟ್ ಫೋನ್ ಅನ್ನು ಇಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. iQOO 3 ಹಲವು ವಿಧಗಳಲ್ಲಿ ವಿಶೇಷತೆಗಳಿಂದ ಕೂಡಿದೆ. ಈ ಸ್ಮಾರ್ಟ್ ಫೋನ್ ಬೆಲೆ ಕೂಡ ತುಂಬಾ ಆಕರ್ಷಕವಾಗಿ ಇರಲಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಬಿಡುಗಡೆಯಾದ Realme X50 Pro 5G ಸ್ಮಾರ್ಟ್ ಫೋನ್ ಬೆಲೆ ರೂ.37,999 ನಿಂದ ಆರಂಭಗೊಳ್ಳುತ್ತದೆ. ಏತನ್ಮಧ್ಯೆ iQOO 3 ಬೆಲೆಯೂ ಕೂಡ 35000 ರೂ.ಗಳ ಆಸುಪಾಸು ಇರಲಿದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ, ಕಂಪನಿ ಸ್ಮಾರ್ಟ್ ಫೋನ್ ಬೆಲೆ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ.

ಈ ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳೇನು?
iQOO3 5G ಸ್ಮಾರ್ಟ್ ಫೋನ್ ಮೊಬೈಲ್ ಗೇಮ್ ಆಡುವವರನ್ನು ಹೆಚ್ಚು ಆಕರ್ಷಿಸಲಿದೆ. ಹೀಗಾಗಿ ಇದರಲ್ಲಿ ವಿಶೇಷವಾಗಿ ಪ್ರೆಶರ್ ಸೆನ್ಸಿಟಿವ್ ಗೇಮಿಂಗ್ ಗುಂಡಿಯನ್ನು ಅಳವಡಿಸಲಾಗಿದೆ. ಈ ಫೋನ್ 8 GB RAM ಹೊಂದಿರಲಿದ್ದು, ಅಂಡ್ರಾಯಿಡ್ 10 OS ಸಂಚಾಲಿತವಾಗಿರಲಿದೆ. iQOO3 ಸ್ಮಾರ್ಟ್ ಫೋನ್ 6.4 ಇಂಚಿನ ಫುಲ್ HD+AMOLED ದಿಸ್ಪ್ಲೆಇರಲಿದ್ದು, ಇದು 1080 x 2400 ಪಿಕ್ಸಲ್ ಸ್ಕ್ರೀನ್ ರೆಸೊಲ್ಯೂಶನ್ ಹೊಂದಿರಲಿದೆ.

 ಫೋನ್ ನ ಒಟ್ಟು ಮೂರು ಆವೃತ್ತಿಗಳು ಬಿಡುಗಡೆಯಾಗುವ ಸಾಧ್ಯತೆ ಇದೆ, ಇದರಲ್ಲಿ 6GB, 8GB ಹಾಗೂ 12GB RAM ಗಳ ಮೂರು ಆವೃತ್ತಿಗಳು ಇರಲಿದ್ದು, ಇದು 128GB ಹಾಗೂ 256GB ಆಂತರಿಕ ಶೇಖರಣಾ ಸಾಮರ್ಥ್ಯದೊಂದಿಗೆ ಬಿಡುಗಡೆಯಾಗಲಿವೆ ಎನ್ನಲಾಗಿದೆ. ಫೋಟೋಗಳನ್ನು ಕ್ಲಿಕ್ಕಿಸಲು ಈ ಫೋನ್ ನಲ್ಲಿ ಕ್ವಾಡ್ ರಿಯರ್ ಕ್ಯಾಮೆರಾ ಇರಲಿದ್ದು, ಸೇಲ್ಫಿಗಾಗಿ 16MP ಮುಂಭಾಗದ ಕ್ಯಾಮೆರಾ ಇರುವ ಸಾಧ್ಯತೆ ಇದೆ. ಸುಮಾರು 4,370ಎಂಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಫೋನ್ ಫೋಟೋಗ್ರಾಫಿ ಹವ್ಯಾಸ ಇರುವ ಗ್ರಾಹಕರನ್ನು ಕೂಡ  ಆಕರ್ಷಿಸಲಿದೆ ಎನ್ನಲಾಗಿದೆ.

Trending News