'ಭಾರತದ ಕೊರೊನಾ ಲಸಿಕೆ Covaxin ಜಗತ್ತಿನ ಗಮನ ಸೆಳೆದಿದೆ'

ಕೋವಿಕ್ಸಿನ್ ಎಂಬ ಕೊರೊನಾ ಭಾರತೀಯ ಲಸಿಕೆ ಜಾಗತಿಕ ಗಮನ ಸೆಳೆದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

Last Updated : Dec 25, 2020, 05:09 PM IST
'ಭಾರತದ ಕೊರೊನಾ ಲಸಿಕೆ Covaxin ಜಗತ್ತಿನ ಗಮನ ಸೆಳೆದಿದೆ' title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಕ್ಸಿನ್ ಎಂಬ ಕೊರೊನಾ ಭಾರತೀಯ ಲಸಿಕೆ ಜಾಗತಿಕ ಗಮನ ಸೆಳೆದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.

ಬ್ರಿಟನ್‌ನಿಂದ ಭಾರತಕ್ಕೆ ಬಂದವರೆಲ್ಲರನ್ನೂ ಪತ್ತೆ ಹಚ್ಚಿ RT-PCR ಟೆಸ್ಟ್ ಮಾಡಿಸಲು ಸೂಚನೆ

'ಐಸಿಎಂಆರ್-ಭಾರತ್ ಬಯೋಟೆಕ್ ಸಹಯೋಗದ ಉತ್ಪನ್ನವಾದ ಕೊವಾಕ್ಸಿನ್ ಲಸಿಕೆ ದತ್ತಾಂಶವು ಕೊವಾಕ್ಸಿನ್‌ನ ಪ್ರಭಾವಶಾಲಿ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಪ್ರೊಫೈಲ್ ಅನ್ನು ಒತ್ತಿ ಹೇಳುತ್ತದೆ ಮತ್ತು ಅವುಗಳನ್ನು ಪ್ರಕಟಿಸುವಲ್ಲಿ ಲ್ಯಾನ್ಸೆಟ್‌ನ ಆಸಕ್ತಿಯನ್ನು ಹುಟ್ಟುಹಾಕುತ್ತದೆ' ಎಂದು ಐಸಿಎಂಆರ್ ಟ್ವೀಟ್ ನಲ್ಲಿ ಉಲ್ಲೇಖಿಸಿದೆ.

BIG NEWS: ಸ್ಥಳೀಯ ಲಸಿಕೆ 'Covaxin' ಸುರಕ್ಷಿತ ಮತ್ತು ಪರಿಣಾಮಕಾರಿ ಎಂದ ICMR

'ಹಂತ 1 ಮತ್ತು ಎರಡನೇ ಹಂತದ ಕೋವಾಕ್ಸಿನ್ ಪ್ರಯೋಗ ಫಲಿತಾಂಶಗಳು ಭಾರತದಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ದಾರಿ ಮಾಡಿಕೊಟ್ಟಿವೆ, ಇದು ಪ್ರಸ್ತುತ 22 ತಾಣಗಳಲ್ಲಿ ನಡೆಯುತ್ತಿದೆ"ಎಂದು ಹೇಳಿದೆ.ದೆಹಲಿಯ ಏಮ್ಸ್ ಆಸ್ಪತ್ರೆ ಗುರುವಾರ 'ಕೋವಾಕ್ಸಿನ್ ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಸ್ವಯಂಸೇವಕರನ್ನು ಆಹ್ವಾನಿಸಿದೆ.

Good News: ಆಕ್ಸ್‌ಫರ್ಡ್‌ COVID-19 ಲಸಿಕೆಯ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಾಧ್ಯತೆ

ಕೋವಾಕ್ಸಿನ್ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕಾಗಿ 'ಏಮ್ಸ್ ಪ್ರಮುಖ ತಾಣವಾಗಿದೆ. ಇದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ಭಾರತ್ ಬಯೋಟೆಕ್ ಸಹ-ಪ್ರಾಯೋಜಿಸಿದ ಸಂಪೂರ್ಣ-ವೈರಿಯನ್ ನಿಷ್ಕ್ರಿಯ ಲಸಿಕೆಯಾಗಿದೆ" ಎಂದು ಏಮ್ಸ್ ಜಾಹೀರಾತಿನಲ್ಲಿ ತಿಳಿಸಿದೆ.

ಏಮ್ಸ್ ಸೆಂಟರ್ ಫಾರ್ ಕಮ್ಯುನಿಟಿ ಮೆಡಿಸಿನ್, ಡಾ. ಸಂಜಯ್ ಕೆ ರೈ ಅವರು ಮೊದಲ ಹಂತದ ಪರೀಕ್ಷೆಗಳು (ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ) ಈಗಾಗಲೇ ಪೂರ್ಣಗೊಂಡಿದೆ ಎಂದು ಜಾಹೀರಾತಿನ ಮೂಲಕ ಮಾಹಿತಿ ನೀಡಿದರು.

Trending News