Indian soldiers : ಸೆರೆ ಸಿಕ್ಕ ಉಗ್ರನಿಗೆ ರಕ್ತದಾನ ಮಾಡಿ ಜೀವ ಉಳಿಸಿ ಮಾನವೀಯತೆ ಮೆರೆದ ಸೈನಿಕರು 

ಜಮ್ಮು ಕಾಶ್ಮೀರದ ಗಡಿ ಜಿಲ್ಲೆಯ ರಜೌರಿಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳಿದ ಪಾಕಿಸ್ತಾನಿ 'ಫಿದಾಯೀನ್' (ಆತ್ಮಾಹುತಿ ಬಾಂಬರ್) ಭಯೋತ್ಪಾದಕನಿಗೆ ನಮ್ಮ ಭಾರತೀಯ ಸೈನಿಕರು ಮೂರು ಬಾಟಲಿ ರಕ್ತ ದಾನ ಮಾಡಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

Written by - Channabasava A Kashinakunti | Last Updated : Aug 25, 2022, 03:24 PM IST
  • ಜಮ್ಮು ಕಾಶ್ಮೀರದ ಗಡಿ ಜಿಲ್ಲೆಯ ರಜೌರಿಯಲ್ಲಿ ನುಸುಳಿದ ಭಯೋತ್ಪಾದಕ
  • ಆತ್ಮಾಹುತಿ ಬಾಂಬರ್ ಭಯೋತ್ಪಾದಕನಿಗೆ ರಕ್ತ ದಾನ
  • ಭಾರತೀಯ ಸೈನಿಕರು ಮೂರು ಬಾಟಲಿ ರಕ್ತ ದಾನ
Indian soldiers : ಸೆರೆ ಸಿಕ್ಕ ಉಗ್ರನಿಗೆ ರಕ್ತದಾನ ಮಾಡಿ ಜೀವ ಉಳಿಸಿ ಮಾನವೀಯತೆ ಮೆರೆದ ಸೈನಿಕರು  title=

ನವದೆಹಲಿ : ಜಮ್ಮು ಕಾಶ್ಮೀರದ ಗಡಿ ಜಿಲ್ಲೆಯ ರಜೌರಿಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳಿದ ಪಾಕಿಸ್ತಾನಿ 'ಫಿದಾಯೀನ್' (ಆತ್ಮಾಹುತಿ ಬಾಂಬರ್) ಭಯೋತ್ಪಾದಕನಿಗೆ ನಮ್ಮ ಭಾರತೀಯ ಸೈನಿಕರು ಮೂರು ಬಾಟಲಿ ರಕ್ತ ದಾನ ಮಾಡಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಕೋಟ್ಲಿ ಜಿಲ್ಲೆಯ ಸಬ್ಜ್‌ಕೋಟ್ ಗ್ರಾಮದ ನಿವಾಸಿ 32 ವರ್ಷದ ತಬಾರಕ್ ಹುಸೇನ್ ಆಗಸ್ಟ್ 21 ರಂದು ತನ್ನ ಸಹಚರರೊಂದಿಗೆ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದ್ದ.

ಇದನ್ನೂ ಓದಿ : PM Modi Security Breach : ಪಂಜಾಬ್​​ನಲ್ಲಿ ಪ್ರಧಾನಿ ಭದ್ರತೆ ಲೋಪ : ಸುಪ್ರೀಂಗೆ ಸಲ್ಲಿಸಿದ ವರದಿಯಲ್ಲಿ ಹೊರಬಿತ್ತು ಸತ್ಯ 

ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಯೋತ್ಪಾದಕ ಹುಸೇನ್ ಎಎನ್‌ಐ ಜೊತೆ ಮಾತನಾಡಿದ, “ನಾನು ಇತರ ನಾಲ್ಕೈದು ಜನರೊಂದಿಗೆ ಆತ್ಮಾಹುತಿ ಬಾಂಬ್ ದಾಳಿ ಕಾರ್ಯಾಚರಣೆಗಾಗಿ ಇಲ್ಲಿಗೆ ಬಂದಿದ್ದೆ. ಪಾಕಿಸ್ತಾನ ಸೇನೆಯ ಕರ್ನಲ್ ಯೂನಸ್ ಚೌಧರಿ ಅವರು ಭಾರತೀಯ ಸೇನೆಯನ್ನು ಗುರಿಯಾಗಿಸಲು 30,000 ರೂಪಾಯಿಗಳನ್ನು ನೀಡಿ ನಮ್ಮನ್ನು ಕಳುಹಿಸಿದ್ದಾರೆ. ನಾವು ಭಾರತೀಯ ಸೇನೆಯ ಒಂದು-ಎರಡು ಪೋಸ್ಟ್‌ಗಳನ್ನು ಹಿಂದೆಗೆದುಕೊಂಡಿದ್ದೇವೆ, ”ಎಂದು ತಿಳಿಸಿದ್ದಾನೆ.

ಹುಸೇನ್ ಭಯೋತ್ಪಾದನೆಯೊಂದಿಗೆ ತಮ್ಮ ಸುದೀರ್ಘ ಒಡನಾಟವನ್ನು ಒಪ್ಪಿಕೊಂಡು, ಭಯೋತ್ಪಾದಕರು ಪಾಕಿಸ್ತಾನದ ಸೇನೆಯ ಮೇಜರ್ ರಜಾಕ್ ಅವರಿಂದ ವಿಶೇಷ ತರಬೇತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.

“ನಾನು ಈ ದೇಶದ್ರೋಹ ಕೆಲಸ ಮಾಡಲು, ನಾನು ಆರು ತಿಂಗಳ ತರಬೇತಿಯನ್ನು ಪಡೆದಿದ್ದೇನೆ ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಸದಸ್ಯರಿಗೆ (ಪಾಕಿಸ್ತಾನ ಸೇನೆಯು ನಡೆಸುತ್ತಿರುವ) ಹಲವಾರು (ಭಯೋತ್ಪಾದಕ) ಶಿಬಿರಗಳಿಗೆ ಭೇಟಿ ನೀಡಿದ್ದೇನೆ" ಎಂದು ಹುಸೇನ್ ಹೇಳಿದ್ದಾನೆ.

ಬಂಧಿತ ಭಯೋತ್ಪಾದಕ ಹುಸೇನ್ ಸಧ್ಯ ಸ್ಥಿತಿ ಚಿಂತಾಜನಕವಾಗಿದ್ದು, ಆತನ ತೊಡೆ ಮತ್ತು ಭುಜದಲ್ಲಿ ಎರಡು ಗುಂಡು ಬಿದ್ದು, ಭಾರೀ ರಕ್ತಸ್ರಾವವಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ರಾಜೌರಿಯ ಮಿಲಿಟರಿ ಆಸ್ಪತ್ರೆಯ ಕಮಾಂಡೆಂಟ್ ಬ್ರಿಗೇಡಿಯರ್ ರಾಜೀವ್ ನಾಯರ್, ನಮ್ಮ ತಂಡದ ಸದಸ್ಯರು ಅವರಿಗೆ ಮೂರು ಬಾಟಲಿ ರಕ್ತ ನೀಡಿ, ಶಸ್ತ್ರಚಿಕಿತ್ಸೆ ಮಾಡಿ ಐಸಿಯುನಲ್ಲಿಟ್ಟರು. ಅವರು ಈಗ ಸ್ಥಿರವಾಗಿದ್ದಾರೆ ಆದರೆ ಸುಧಾರಿಸಲು ಕೆಲವು ವಾರಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Jammu Kashmir : ಕಾಶ್ಮೀರದಲ್ಲಿ ಸೆರೆ ಸಿಕ್ಕ ಉಗ್ರ.. ಪಾಕ್ ಸೇನೆಯ ಹಸ್ತಕ್ಷೇಪಕ್ಕೆ ಕೊಟ್ಟ ಸಾಕ್ಷ್ಯ

"ನಾವು ಆತನನ್ನು ಭಯೋತ್ಪಾದಕ ಎಂದು ಭಾವಿಸಿರಲಿಲ್ಲ. ಆತನ ಜೀವ ಉಳಿಸಲು ನಾವು ಇತರ ರೋಗಿಗಳಂತೆ ಚಿಕಿತ್ಸೆ ನೀಡಿದ್ದೇವೆ. ರಕ್ತ ಹರಿಸಲು ಬಂದಿದ್ದರೂ ಅವರಿಗೆ ತಮ್ಮ ರಕ್ತ ನೀಡಿದ ಹಿರಿಮೆ ಭಾರತೀಯ ಸೇನೆಯ ಅಧಿಕಾರಿಗಳದ್ದು. ಅವರ ರಕ್ತದ ಗುಂಪು ಬಹಳ ವಿರಳವಾಗಿತ್ತು, ಒ ನೆಗೆಟಿವ್ ಆಗಿತ್ತು” ಎಂದು ಭಾರತೀಯ ಸೇನಾ ಅಧಿಕಾರಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News