Indian Railways: ರೈಲ್ವೆಯ ಈ ಪ್ರಮುಖ ನಿಯಮ 6 ತಿಂಗಳವರೆಗೆ ವಿಸ್ತರಣೆ, ಉಲ್ಲಂಘಿಸಿದರೆ ಬೀಳುತ್ತೆ ದಂಡ

Railway Rules For Mask: ಭಾರತೀಯ ರೈಲ್ವೆ ಮತ್ತೊಮ್ಮೆ ಕರೋನಾ ನಿಯಮಗಳನ್ನು ಬಿಗಿಗೊಳಿಸಿದೆ. ರೈಲ್ವೆಯ ಈ ಕೋವಿಡ್ ಮಾರ್ಗಸೂಚಿ ಅಕ್ಟೋಬರ್ 16 ರಂದು ಕೊನೆಗೊಳ್ಳಬೇಕಿತ್ತು, ಆದರೆ ಅದಕ್ಕೂ ಮುನ್ನ ಇದನ್ನು ವಿಸ್ತರಿಸಲಾಗಿದೆ.

Written by - Yashaswini V | Last Updated : Oct 8, 2021, 10:45 AM IST
  • ಇನ್ನೂ 6 ತಿಂಗಳು ರೈಲ್ವೆ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ
  • ಮಾಸ್ಕ್ ಧರಿಸದಿದ್ದಲ್ಲಿ 500 ರೂಪಾಯಿ ದಂಡ
  • ಮಾರ್ಗಸೂಚಿಗಳನ್ನು 16 ಏಪ್ರಿಲ್ 2022 ರವರೆಗೆ ವಿಸ್ತರಿಸಲಾಗಿದೆ
Indian Railways: ರೈಲ್ವೆಯ ಈ ಪ್ರಮುಖ ನಿಯಮ 6 ತಿಂಗಳವರೆಗೆ ವಿಸ್ತರಣೆ, ಉಲ್ಲಂಘಿಸಿದರೆ ಬೀಳುತ್ತೆ ದಂಡ title=
Indian Railways extended covid guidelines- ಈ ನಿಯಮಗಳನ್ನು ಮತ್ತೊಮ್ಮೆ ವಿಸ್ತರಿಸಿದ ಭಾರತೀಯ ರೈಲ್ವೇ

Indian Railways Rules: ದೇಶದಲ್ಲಿ ಕರೋನಾವೈರಸ್ ಪ್ರಕರಣಗಳು ಮೊದಲಿಗಿಂತ ಕಡಿಮೆಯಾಗಿವೆ. ಆದರೂ ಅದರ ಅಪಾಯ ಇನ್ನೂ ಸಂಪೂರ್ಣವಾಗಿ ತಪ್ಪಿಲ್ಲ. ಹಾಗಾಗಿ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುವುದು ಅಗತ್ಯವೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಕೋವಿಡ್ ಪ್ರೋಟೋಕಾಲ್ (Covid Protocal) ಅನ್ನು ಹೆಚ್ಚಿಸಲು ನಿರ್ಧರಿಸಿದೆ. ಮುಂದಿನ 6 ತಿಂಗಳವರೆಗೆ ರೈಲ್ವೆ ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲುಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ಈ ನಿಯಮವನ್ನು ಯಾರಾದರೂ ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ವಾಸ್ತವವಾಗಿ, ಈ ವರ್ಷದ ಏಪ್ರಿಲ್ ತಿಂಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ (Railway Stations) ಮತ್ತು ಪ್ರಯಾಣದ ಸಮಯದಲ್ಲಿ ಮಾಸ್ಕ್ಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಿತು. ಇದಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಏಪ್ರಿಲ್ 17 ರಿಂದ ಅಕ್ಟೋಬರ್ 16 ರವರೆಗೆ ಜಾರಿಯಲ್ಲಿರಲಿವೆ ಎಂದು ಹೇಳಲಾಗಿತ್ತು. ಮಾರ್ಗಸೂಚಿಗಳ ಪ್ರಕಾರ,  ಮಾಸ್ಕ್ (Mask) ಧರಿಸದಿದ್ದಲ್ಲಿ 500 ರೂ.ವರೆಗೆ ದಂಡ ವಿಧಿಸಲು ಅವಕಾಶವಿತ್ತು. 

ಇದನ್ನೂ ಓದಿ- Easy Way To Get DL: ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ, ಶುಲ್ಕ ಕೇವಲ 350 ರೂ.

ಕೋವಿಡ್ ಮಾರ್ಗಸೂಚಿಯನ್ನು 6 ತಿಂಗಳು ವಿಸ್ತರಿಸಲಾಗಿದೆ:
ಭಾರತೀಯ ರೈಲ್ವೆಯ (Indian Railways) ಈ ಕೋವಿಡ್ ಮಾರ್ಗಸೂಚಿಗಳು ಅಕ್ಟೋಬರ್ 16 ರಂದು ಕೊನೆಗೊಳ್ಳಬೇಕಿತ್ತು, ಆದರೆ ಅದಕ್ಕೂ ಮೊದಲು ಕೋವಿಡ್ ಮಾರ್ಗಸೂಚಿಯನ್ನು ಮತ್ತೆ 6 ತಿಂಗಳುಗಳವರೆಗೆ ವಿಸ್ತರಿಸಲಾಗಿದೆ. ಹೊಸ ನಿಯಮದ ಅನ್ವಯ ಇದೀಗ ರೈಲ್ವೆ ಪ್ರಯಾಣದ ವೇಳೆ ಮಾಸ್ಕ್ ಗಳನ್ನು ಧರಿಸುವುದರ ಅಗತ್ಯವನ್ನು 16 ಏಪ್ರಿಲ್ 2022 ರವರೆಗೆ ವಿಸ್ತರಿಸಲಾಗಿದೆ. ಈ ಕುರಿತಂತೆ ರೈಲ್ವೆ ತನ್ನ ಅಧಿಸೂಚನೆಯನ್ನು ಹೊರಡಿಸಿದೆ. ದೇಶದಲ್ಲಿ ಇನ್ನೂ ಕೂಡ ಕರೋನಾವೈರಸ್ ಪ್ರಕರಣಗಳ ಸಂಖ್ಯೆ ಸಂಪೂರ್ಣವಾಗಿ ಕಡಿಮೆ ಆಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೇ ಸ್ಪಷ್ಟಪಡಿಸಿದೆ.

Railway Rules For Mask notice

ಮಾಸ್ಕ್ ಧರಿಸುವುದು ಕಡ್ಡಾಯ, ಇಲ್ಲವೇ ಬೀಳುತ್ತೆ ದಂಡ:
ಮಾಸ್ಕ್ (Mask) ಧರಿಸುವುದು ಕಡ್ಡಾಯ, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಈಗ ಭಾರತೀಯ ರೈಲ್ವೇಯ (ರೈಲ್ವೆ ಆವರಣದಲ್ಲಿ ಸ್ವಚ್ಛತೆಯ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳಿಗೆ ಶಿಕ್ಷೆ) ನಿಯಮಗಳು 2012 ರ ಅಡಿಯಲ್ಲಿ ಪಟ್ಟಿ ಮಾಡಲಾಗುವುದು. ಇದು ರೈಲ್ವೇ ಆವರಣದಲ್ಲಿ ಉಗುಳುವವರಿಗೆ ದಂಡ ವಿಧಿಸುವುದನ್ನು ಸಹ ಒಳಗೊಂಡಿದೆ. ಸಿಕ್ಕ ಸಿಕ್ಕಲ್ಲಿ ಉಗುಳಿದರೆ ಅಥವಾ ರೈಲ್ವೆ ನಿಲ್ದಾಣ ಅಥವಾ ರೈಲಿನ ಒಳಗೆ ಗಲೀಜು ಮಾಡುವವರಿಗೆ 500 ರೂ. ದಂಡ ವಿಧಿಸಲಾಗುವುದು. ಆದಾಗ್ಯೂ, ಈ ಸಮಯದಲ್ಲಿ ಹೊರಡಿಸಲಾಗಿರುವ ಅಧಿಸೂಚನೆಯಲ್ಲಿ ಉಗುಳುವ ಅಥವಾ ಕೊಳಕನ್ನು ಹರಡುವವರ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಆದರೆ ಕಾನೂನಿನ ಪ್ರಕಾರ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಈ ನಿಯಮವನ್ನು ಅನುಸರಿಸದವರಿಗೆ 500 ರೂ. ದಂಡ ವಿಧಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ- PM Gifts for Auction : ಪ್ರಧಾನಿ ಮೋದಿಯವರ ಉಡುಗೊರೆಗಳ ಬಿಡ್ ನಲ್ಲಿ ಅತೀ ದುಬಾರಿ ಬೆಲೆಗೆ ನೀರಜ್ ಚೋಪ್ರಾ ಜಾವೆಲಿನ್!

ಒಂದೇ ದಿನದಲ್ಲಿ ಕರೋನಾ ಪ್ರಕರಣಗಳಲ್ಲಿ 19% ಹೆಚ್ಚಳ:
ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 22431 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಸಮಯದಲ್ಲಿ 318 ಜನರು ಕರೋನಾದಿಂದ ಸಾವನ್ನಪ್ಪಿದ್ದಾರೆ. ಬುಧವಾರ ವರದಿಯಾದ ಪ್ರಕರಣಗಳಿಗಿಂತ ಈ ಪ್ರಕರಣಗಳು 19% ಹೆಚ್ಚು. ಬುಧವಾರ, ದೇಶಾದ್ಯಂತ 18833 ಕರೋನಾ ಪ್ರಕರಣಗಳು ವರದಿಯಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News