ನವದೆಹಲಿ: ಮುಂದಿನ ದಿನಗಳಲ್ಲಿ ಒಂದು ವೇಳೆ ನೀವು ರೈಲಿನಲ್ಲಿ ಪ್ರಯಾಣಿಸಲು ಯೋಜನೆ ರೂಪಿಸುತ್ತಿದ್ದಾರೆ. ನಿಮಗಾಗಿ ಒಂದು ಒಳ್ಳೆಯ ಸುದ್ದಿ ಬಂದಿದೆ. ಸೆಪ್ಟೆಂಬರ್ 12 ರಿಂದ 80 ಹೊಸ ರೈಲುಗಳು ಚಲಾಯಿಸಲಾಗುವುದು ಎಂದು ರೈಲ್ವೆ ಮಂಡಳಿ (Indian Railways) ಅಧ್ಯಕ್ಷ ವಿ.ಕೆ. ಯಾದವ್ ಶನಿವಾರ ತಿಳಿಸಿದ್ದಾರೆ. ಇದಕ್ಕಾಗಿ ರಿಸರ್ವೇಶನ್ ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗಲಿದೆ. ರೈಲುಗಳಿಗೆ ಸಂಬಂಧಿಸಿದ ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
'80 ಹೊಸ ವಿಶೇಷ ರೈಲುಗಳು ಅಥವಾ 40 ಜೋಡಿ ರೈಲುಗಳು ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗಲಿವೆ. ಇವುಗಳಿಗಾಗಿ ರಿಸರ್ವೇಶನ್ ಸೆಪ್ಟೆಂಬರ್ 10 ರಿಂದ ಪ್ರಾರಂಭವಾಗಲಿದೆ. ಈಗಾಗಲೇ ಚಲಿಸುತ್ತಿರುವ 230 ರೈಲುಗಳಿಗೆ ಹೆಚ್ಚುವರಿಯಾಗಿ ಈ ರೈಲುಗಳು ಇರಲಿವೆ. ಪ್ರಸ್ತುತ ಚಾಲನೆಯಲ್ಲಿರುವ ಎಲ್ಲಾ ರೈಲುಗಳನ್ನು ರೈಲ್ವೆ ನಿಗಾ ವಹಿಸಲಿದೆ ಮತ್ತು ಯಾವ ರೈಲುಗಳು ದೀರ್ಘ ಕಾಯುವ ಪಟ್ಟಿಯನ್ನು ಹೊಂದಿವೆ ಎಂಬುದನ್ನು ಕಂಡುಹಿಡಿಯಲಾಗುವುದು ಎಂದು ಯಾದವ್ ಹೇಳಿದ್ದಾರೆ.
ವಿಶೇಷ ರೈಲಿಗಾಗಿ ಎಲ್ಲಿಯೇ ಆವಶ್ಯಕತೆ ಇದ್ದರೂ ಅಥವಾ ಎಲ್ಲಿಯೇ ವೇಟಿಂಗ್ ಲಿಸ್ಟ್ ಹೆಚ್ಚಾಗಿರಲಿದೆಯೋ ಅಲ್ಲಿ ಮೂಲ ರೈಲಿನ ಬಳಿಕ ಕ್ಲೋನ್ ರೈಲುಗಳನ್ನು ಓದಿಸಲಿದ್ದೇವೆ. ಇದರಿಂದ ಯಾತ್ರಿಗಳಿಗೆ ಯಾತ್ರೆಯಲ್ಲಿ ಯಾವುದೇ ತೊಂದರೆಯಾಗಬಾರದು ಎಂಬುದು ಉದ್ದೇಶ ಎಂದು ಯಾದವ್ ಹೇಳಿದ್ದಾರೆ. ಪರೀಕ್ಷೆ ಹಾಗೂ ಇತರ ಯಾವುದೇ ಕಾರಣಗಳಿಗೆ ರಾಜ್ಯಗಳಿಂದ ಬೇಡಿಕೆ ಬಂದರೆ ಮಾತ್ರ ರೇಲ್ವೆ ವಿಭಾಗ ರೈಲುಗಳನ್ನು ಓದಿಸಲಿದೆ ಎಂದೂ ಕೂಡ ಅವರು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ರೈಲು ಇಲಾಖೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ವಿಶೇಷ ರೈಲುಗಳನ್ನು ಸಹ ಓಡಿಸುತ್ತಿದೆ. ಬಿಹಾರದಲ್ಲಿ ಪ್ರವೇಶ ಪರೀಕ್ಷೆಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.