ಸರ್ಕಾರದ ಚಿಂತೆ ಹೆಚ್ಚಿಸಿದ ಕರೋನವೈರಸ್‌ನ ಹೊಸ ರೂಪಾಂತರ

ಕರೋನಾವೈರಸ್‌ನ ಈ ಹೊಸ ರೂಪಾಂತರದ ಬಗ್ಗೆ ಚರ್ಚಿಸಲು ಭಾರತೀಯ ಆರೋಗ್ಯ ಸಚಿವಾಲಯವು ಜಂಟಿ ಮಾನಿಟರಿಂಗ್ ಗ್ರೂಪ್‌ನೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಅದನ್ನು ಎದುರಿಸುವ ಕಾರ್ಯತಂತ್ರ ರೂಪಿಸುವ ಬಗ್ಗೆ ಕೂಲಂಕುಷವಾಗಿ ಸಮಾಲೋಚನೆ ನಡೆಸಿತು. ಹೊಸ ಅವತಾರದಿಂದಾಗಿ ಬ್ರಿಟನ್‌ನಲ್ಲಿನ ಕರೋನಾ ಪ್ರಕರಣಗಳು ಮತ್ತೆ ತಾರಕಕ್ಕೇರಿದೆ.

Written by - Yashaswini V | Last Updated : Dec 21, 2020, 07:25 AM IST
  • ಬ್ರಿಟನ್‌ನಲ್ಲಿ ತಲ್ಲಣ ಸೃಷ್ಟಿಸಿದ ಕರೋನವೈರಸ್‌ನ ಹೊಸ ರೂಪಾಂತರ
  • ಕರೋನಾವೈರಸ್‌ನ ಹೊಸ ಅವತಾರದಿಂದಾಗಿ ಬ್ರಿಟನ್‌ನಲ್ಲಿನ ಕರೋನಾ ಪ್ರಕರಣಗಳು ಮತ್ತೆ ತಾರಕಕ್ಕೇರಿದೆ
  • ಈ ವೈರಸ್‌ನ ಅಪಾಯಕಾರಿ ಪರಿಣಾಮಗಳನ್ನು ಕಂಡು ಕಳವಳ ವ್ಯಕ್ತಪಡಿಸಿದ ಭಾರತ ಸರ್ಕಾರ
ಸರ್ಕಾರದ ಚಿಂತೆ ಹೆಚ್ಚಿಸಿದ ಕರೋನವೈರಸ್‌ನ ಹೊಸ ರೂಪಾಂತರ title=
New coronavirus mutation (File Image)

ನವದೆಹಲಿ: ಕ್ರಿಸ್‌ಮಸ್ ಆಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಇದಕ್ಕೂ ಮೊದಲೇ ಕರೋನವೈರಸ್‌ನ ಹೊಸ ರೂಪಾಂತರ ಬ್ರಿಟನ್‌ನಲ್ಲಿ ತಲ್ಲಣ ಸೃಷ್ಟಿಸಿದೆ. ಆಲಂ ಎಂದರೆ ಅನೇಕ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ವಿಧಿಸಲಾಗಿದೆ. ಈ ವೈರಸ್‌ನ ಅಪಾಯಕಾರಿ ಪರಿಣಾಮಗಳನ್ನು ನೋಡಿದ ಭಾರತ ಸರ್ಕಾರವೂ ಕಳವಳ ವ್ಯಕ್ತಪಡಿಸಿದೆ.

ಬ್ರಿಟನ್‌ನಲ್ಲಿ ಕರೋನಾವೈರಸ್‌ನ ಈ ಹೊಸ ರೂಪಾಂತರವು ನಿಯಂತ್ರಣದಲ್ಲಿಲ್ಲ ಎಂದು ಎಚ್ಚರಿಸಿದ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್, ಕೋವಿಡ್ ಲಸಿಕೆ (Covid Vaccine) ಬರುವವರೆಗೂ ಇಂಗ್ಲೆಂಡ್‌ನ ಕೆಲವು ಭಾಗಗಳಲ್ಲಿ ಹೊಸ, ಅತ್ಯುನ್ನತ ಶ್ರೇಣಿಯ ಲಾಕ್‌ಡೌನ್  ಜಾರಿಗೆ ತರುವ ಬಗ್ಗೆ ಮಾಹಿತಿ ನೀಡಿದರು.

ಲಂಡನ್ ಮತ್ತು ಆಗ್ನೇಯ ಇಂಗ್ಲೆಂಡ್‌ನಲ್ಲಿ ಭಾನುವಾರ ಲಾಕ್‌ಡೌನ್ ಜಾರಿಗೆ ಬಂದ ನಂತರ 16 ದಶಲಕ್ಷಕ್ಕೂ ಹೆಚ್ಚು ಜನರು ಈಗ ಮನೆಯಲ್ಲಿಯೇ ಇರಬೇಕಾಗಿದೆ ಮತ್ತು ಕ್ರಿಸ್‌ಮಸ್‌ನಲ್ಲಿ (Christmas) ಸಾಮಾಜಿಕವಾಗಿ ನಿಯಮಗಳನ್ನು ಸಡಿಲಿಸುವ ಯೋಜನೆಯನ್ನು ಸರ್ಕಾರ ರದ್ದುಗೊಳಿಸಿತು. ದೇಶಾದ್ಯಂತದ ನಿವಾಸಿಗಳಿಗೆ ತಮ್ಮ ಸ್ಥಳೀಯ ಪ್ರದೇಶಗಳಿಗೆ ತೆರಳುವಂತೆ ಸಲಹೆ ನೀಡಲಾಗಿದೆ ಮತ್ತು ಜನರು ಲಂಡನ್‌ನಿಂದ ಹೊರಹೋಗುವುದನ್ನು ತಡೆಯಲು ರೈಲು ನಿಲ್ದಾಣಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಒಂದು ಕೋಟಿ ದಾಟಿದ Covid 19 ಪ್ರಕರಣ

ಬ್ರಿಟನ್‌ನಲ್ಲಿ (Britain) ಕರೋನಾ ರೂಪಾಂತರಗಳ ಆಗಮನದ ನಂತರ ಈ ಪ್ರಕರಣದಲ್ಲಿ ಹಠಾತ್ ಹೆಚ್ಚಳ ಕಂಡುಬಂದಿದೆ. ಬ್ರಿಟನ್‌ನಲ್ಲಿನ ಈ ಬೆಳವಣಿಗೆಯು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಕರೋನಾ ಪ್ರಕರಣಗಳಿಗೆ ಸಾಕ್ಷಿಯಾಗಿರುವ ಭಾರತದ ಕಳವಳವನ್ನು ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಕರೋನಾವೈರಸ್‌ನ ಈ ಹೊಸ ರೂಪಾಂತರಗಳ ಕುರಿತು ಚರ್ಚಿಸಲು ಭಾನುವಾರ ಸಂಜೆ ಭಾರತೀಯ ಆರೋಗ್ಯ ಸಚಿವಾಲಯ ಜಂಟಿ ಮಾನಿಟರಿಂಗ್ ಗ್ರೂಪ್‌ನೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿತು. ಸಭೆಯಲ್ಲಿ ಕರೋನವೈರಸ್‌ನ ಹೊಸ ರೂಪಾಂತರ ಭಾರತಕ್ಕೆ ಲಗ್ಗೆ ಇಡುವ ಮೊದಲು ಈ ರೀತಿಯ ಅನಾಹುತವನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜಿಸಲು ಒತ್ತು ನೀಡಲಾಯಿತು. 

ವೈರಸ್ ರೂಪಾಂತರಗಳು:
ಯಾವುದೇ ವೈರಸ್‌ನಲ್ಲಿ ರೂಪಾಂತರಗಳು ನಿರಂತರವಾಗಿ ಸಂಭವಿಸುತ್ತವೆ. ಹೆಚ್ಚಿನ ರೂಪಾಂತರಗಳು ಸ್ವಂತವಾಗಿ ರೂಪಾಂತರಗೊಂಡ ನಂತರ ಸಾಯುತ್ತವೆ. ಆದರೆ ಕೆಲವೊಮ್ಮೆ ರೂಪಾಂತರಗೊಂಡ ನಂತರ ವೈರಸ್‌ಗಳು ಮೊದಲಿಗಿಂತ ಹಲವಾರು ಪಟ್ಟು ಹೆಚ್ಚು ಬಲವಾದ ಮತ್ತು ಹೆಚ್ಚು ಅಪಾಯಕಾರಿಯಾಗಿ ಹೊರಹೊಮ್ಮುತ್ತವೆ. ಈ ಪ್ರಕ್ರಿಯೆಯು ಎಷ್ಟು ಬೇಗನೆ ಸಂಭವಿಸುತ್ತದೆ ಎಂದರೆ ವಿಜ್ಞಾನಿಗಳು ಸಹ ಅರ್ಥಮಾಡಿಕೊಳ್ಳಲು ಮತ್ತು ಸಂಶೋಧಿಸಲು ಸಮಯ ತೆಗೆದುಕೊಳ್ಳುತ್ತಾರೆ ಮತ್ತು ಆ ಹೊತ್ತಿಗೆ ವೈರಸ್ ಹೆಚ್ಚಿನ ಜನರನ್ನು ಅಪಾಯಕ್ಕೆ ಒಳಪಡಿಸಿರುತ್ತದೆ.

ವೈರಸ್ನಲ್ಲಿ 4 ಸಾವಿರ ಬಾರಿ ರೂಪಾಂತರ: 
ಬ್ರಿಟನ್‌ನಲ್ಲಿ ಕಂಡುಬರುವ ಕರೋನಾವೈರಸ್‌ನ (Coronavirus) ಈ ಹೊಸ ರೂಪಾಂತರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ದೆಹಲಿ ಏಮ್ಸ್‌ನ ಕರೋನಾ ಕೇಂದ್ರದ ಮುಖ್ಯಸ್ಥ ಡಾ.ರಾಜೇಶ್ ಮಲ್ಹೋತ್ರಾ, ಕರೋನಾವೈರಸ್ ಬಂದಾಗಿನಿಂದ ಇದು 4 ಸಾವಿರ ಬಾರಿ ರೂಪಾಂತರಗೊಂಡಿದೆ ಎಂದು ಹೇಳಿದರು. ಆದಾಗ್ಯೂ ಯುಕೆನಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಗೆ ನಿಜವಾಗಿಯೂ ವೈರಸ್ ನ ಹೊಸ ರೂಪಾಂತರವೇ ಕಾರಣ ಎಂಬುದಕ್ಕೆ ಯಾವುದೇ ಸ್ಪಷ್ಟ ಕಾರಣಗಳಿಲ್ಲ. 

ಇದನ್ನೂ ಓದಿ: ಶಾಲೆ ಆರಂಭಕ್ಕೆ ಆರೋಗ್ಯ ಇಲಾಖೆಯಿಂದ ಗ್ರೀನ್ ಸಿಗ್ನಲ್

ಲಸಿಕೆ ಕಡಿಮೆ ಪರಿಣಾಮಕಾರಿಯಾಗಿರುತ್ತದೆ!
ಕರೋನಾವೈರಸ್‌ನ ಹೊಸ ರೂಪಾಂತರಗಳ ಜೀನೋಮ್‌ನಲ್ಲಿ ಬದಲಾವಣೆ ಕಂಡುಬಂದಿದೆಯೆ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಈಗ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಬದಲಾವಣೆ ಸಂಭವಿಸಿದಲ್ಲಿ ಪ್ರಸ್ತುತ ಸಿದ್ದವಾಗುತ್ತಿರುವ ಲಸಿಕೆ ಕಡಿಮೆ ಪರಿಣಾಮಕಾರಿಯಾಗುವ ಅಪಾಯ ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದಾಗ್ಯೂ ಇಲ್ಲಿಯವರೆಗೆ ಕಂಡುಬಂದ ಎಲ್ಲಾ ಹೊಸ ಪ್ರಕಾರದ ಕರೋನಾವೈರಸ್ ಅವುಗಳ ಜೀನೋಮ್ ರಚನೆಯಲ್ಲಿ ಯಾವುದೇ ಬದಲಾವಣೆಯನ್ನು ತೋರಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News