ಅಮೇರಿಕಾ: 800 ಅಡಿ ಆಳದ ಪ್ರಪಾತಕ್ಕೆ ಬಿದ್ದು ಭಾರತೀಯ ದಂಪತಿ ಸಾವು

ಇತ್ತೀಚೆಗಷ್ಟೇ ಸ್ಯಾನ ಜೋಸ್ ಮೂಲದ ಸಿಸ್ಕೊ ಕಂಪನಿಯಲ್ಲಿ ಸಿಸ್ಟಂ ಎಂಜಿನಿಯರ್ ಆಗಿ ವಿಷ್ಣು ಅವರಿಗೆ ಕೆಲಸ ಸಿಕ್ಕಿದ್ದರಿಂದ ಕ್ಯಾಲಿಪೋರ್ನಿಯಾಗೆ ತೆರಳಿದ್ದರು ಎನ್ನಲಾಗಿದೆ.

Last Updated : Oct 30, 2018, 03:04 PM IST
ಅಮೇರಿಕಾ: 800 ಅಡಿ ಆಳದ ಪ್ರಪಾತಕ್ಕೆ ಬಿದ್ದು ಭಾರತೀಯ ದಂಪತಿ ಸಾವು title=

ನವದೆಹಲಿ/ವಾಶಿಂಗ್ಟನ್: ಅಮೆರಿಕಾದ ಕ್ಯಾಲಿಪೋರ್ನಿಯಾದಲ್ಲಿರುವ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದ ಭಾರತೀಯ ಮೂಲದ ದಂಪತಿ 800 ಅಡಿ ಆಳದ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ನ್ಯೂಯಾರ್ಕ್ನಲ್ಲಿ  ವಾಸವಿರುವ ವಿಷ್ಣು ವಿಶ್ವನಾಥ್ ಹಾಗೂ ಮೀನಾಕ್ಷಿ ಮೂರ್ತಿ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಸ್ಯಾನ ಜೋಸ್ ಮೂಲದ ಸಿಸ್ಕೊ ಕಂಪನಿಯಲ್ಲಿ ಸಿಸ್ಟಂ ಎಂಜಿನಿಯರ್ ಆಗಿ ವಿಷ್ಣು ಅವರಿಗೆ ಕೆಲಸ ಸಿಕ್ಕಿದ್ದರಿಂದ ಕ್ಯಾಲಿಪೋರ್ನಿಯಾಗೆ ತೆರಳಿದ್ದರು ಎನ್ನಲಾಗಿದೆ.

ವಿಶೇಷ ಸ್ಥಳಗಳಿಗೆ ಭೇಟಿ ನಿಡುವ, ಪ್ರವಾಸಕ್ಕೆ ತೆರಳುವ ಹವ್ಯಾಸ ಹೊಂದಿದ್ದಾಗಿ ಈ ದಂಪತಿ ತಮ್ಮ 'Holidays and Happily Ever Afters' ಎಂಬ ಬ್ಲಾಗ್​ನಲ್ಲಿ ಬರೆದಿಕೊಂಡಿದ್ದಾರೆ. ಅಲ್ಲದೆ ತಮ್ಮ ಪ್ರವಾಸದ ಫೋಟೋಗಳನ್ನು ಮತ್ತು ಅನುಭವವನ್ನು ನಿಯಮಿತವಾಗಿ ಬ್ಲಾಗ್ ನಲ್ಲಿ ಬರೆಯುತ್ತಿದ್ದರು ಎನ್ನಲಾಗಿದೆ. 

ಹೀಗಾಗಿ ಯೊಸೆಮೈಟ್ ನ್ಯಾಷನಲ್​ ಪಾರ್ಕ್ ಯೊಸೆಮೈಟ್ ವ್ಯಾಲಿ, ಯೊಸೆಮೈಟ್ ಫಾಲ್ಸ್ ಮತ್ತು ಎಲ್ ಕ್ಯಾಪಿಟನ್ ವೀಕ್ಷಣೆಗೆ ಈ ಜೋಡಿ ತೆರಳಿದ್ದು ಈ ವೇಳೆ ಪಾರ್ಕ್ ನ ತುತ್ತತುದಿಯಲ್ಲಿ ನಿಂತು ಪೋಟೋ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಜಾರಿ ಪ್ರಪಾತಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಸದ್ಯ ಎರಡೂ ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. 

ದಂಪತಿ ವ್ಯೂವ್ ಪಾಯಿಂಟ್​ನಿಂದ ಬೀಳಲು ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ. ಘಟನೆ ಹೇಗೆ  ನಡೆದಿರಬಹುದು ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಇದೊಂದು ದುರಂತ, ಆಕಸ್ಮಿಕವಾಗಿ ಸಂಭವಿಸಿರಬಹುದು ಎಂದು ಶಂಕಿಸಿದ್ದೇವೆ ಎಂದು ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ. 
 

Trending News