ಭಾರತೀಯ ನೌಕರ ವರ್ಗದವರಿಗೊಂದು ಸಂತಸದ ಸುದ್ದಿ, ಈ ವರ್ಷ ವೇತನ ಎಷ್ಟು ಹೆಚ್ಚಾಗಲಿದೆ ಗೊತ್ತಾ?

Aon Plc Survey -  ಭಾರತದಲ್ಲಿನ ಕಂಪನಿಗಳು (Indian Companies) 2021 ರಲ್ಲಿ ಶೇ 7.7 ರಷ್ಟು ವೇತನ ಹೆಚ್ಚಳ (Salary Increament) ನೀಡುವ ನಿರೀಕ್ಷೆಯಿದೆ. 

Written by - Nitin Tabib | Last Updated : Feb 23, 2021, 08:22 PM IST
  • ಭಾರತೀಯ ಕಂಪನಿಗಳು 2021 ರಲ್ಲಿ ಶೇ.7.7 ರಷ್ಟು ಹೆಚ್ಚಾಗಲಿದೆ.
  • ಇದು ಬ್ರಿಕ್ ರಾಷ್ಟ್ರಗಳಲ್ಲಿ ಅತಿ ಹೆಚ್ಚು. ಮತ್ತು 2020 ರಲ್ಲಿ ಕಂಡುಬರುವ ಸರಾಸರಿ 6.1 ಶೇಕಡಾಕ್ಕಿಂತ ಹೆಚ್ಚಾಗಿದೆ.
  • ಜಾಗತಿಕ ವೃತ್ತಿಪರ ಸೇವೆಗಳ ಕಂಪನಿ Aon Plc ಭಾರತದಲ್ಲಿ ವೇತನ ಹೆಚ್ಚಳ ಕುರಿತು ಈ ಸಮೀಕ್ಷೆ ನಡೆಸಿದೆ.
ಭಾರತೀಯ ನೌಕರ ವರ್ಗದವರಿಗೊಂದು ಸಂತಸದ ಸುದ್ದಿ, ಈ ವರ್ಷ ವೇತನ ಎಷ್ಟು ಹೆಚ್ಚಾಗಲಿದೆ ಗೊತ್ತಾ? title=
Aon Plc Survey 2021 (File Photo)

ನವದೆಹಲಿ: Aon Plc Survey - ಭಾರತದಲ್ಲಿನ ಕಂಪನಿಗಳು (Indian Companies) 2021 ರಲ್ಲಿ ಶೇ 7.7 ರಷ್ಟು ವೇತನ ಹೆಚ್ಚಳ (Salary Increament) ನೀಡುವ ನಿರೀಕ್ಷೆಯಿದೆ. ಸಮೀಕ್ಷೆಯೊಂದರ ಪ್ರಕಾರ, ಇದು ಬ್ರಿಕ್ ರಾಷ್ಟ್ರಗಳಲ್ಲಿ ಅತಿ ಹೆಚ್ಚು. ಮತ್ತು 2020 ರಲ್ಲಿ ಕಂಡುಬರುವ ಸರಾಸರಿ 6.1 ಶೇಕಡಾಕ್ಕಿಂತ ಹೆಚ್ಚಾಗಿದೆ. ಜಾಗತಿಕ ವೃತ್ತಿಪರ ಸೇವೆಗಳ ಕಂಪನಿ Aon Plc ಭಾರತದಲ್ಲಿ ವೇತನ ಹೆಚ್ಚಳ ಕುರಿತು ತನ್ನ ಇತ್ತೀಚಿನ ಸಮೀಕ್ಷೆಯನ್ನು (Survey 2021) ಮಂಗಳವಾರ ಬಿಡುಗಡೆ ಮಾಡಿದೆ. ಇದರ ಪ್ರಕಾರ, ಸಮೀಕ್ಷೆ ನಡೆಸಿದ ಶೇ. 88 ಕಂಪನಿಗಳು 2021 ರಲ್ಲಿ ವೇತನವನ್ನು ಹೆಚ್ಚಿಸಲು ಬಯಸುತ್ತಿವೆ ಎಂದು ಹೇಳಿದೆ. ಈ ಅಂಕಿ ಅಂಶವು 2020 ರಲ್ಲಿ ಶೇ.75 ರಷ್ಟಾಗಿತ್ತು. ಇದು ಸಕಾರಾತ್ಮಕ ವ್ಯವಹಾರ ಪ್ರಜ್ಞೆಯನ್ನು ಹೊಂದಿದೆ.

ಸಮೀಕ್ಷೆಯಲ್ಲಿ ಶಾಮೀಲಾದ 1,200 ಕಂಪನಿಗಳು
ಈ ಅಧ್ಯಯನದಲ್ಲಿ ಒಟ್ಟು 20 ಉದ್ಯೋಗಗಳ ಸುಮಾರು 1200 ಕಂಪನಿಗಳು ಶಾಮೀಲಾಗಿವೆ. ವೇತನ ಹೆಚ್ಚಳವು ಬಲವಾದ ಚೇತರಿಕೆಗೆ ಸೂಚಿಸುತ್ತದೆಯಾದರೂ, ಕೋಡ್ ಆಫ್ ವೆಜ್ ಗೇಮ್ ಚೆಂಜರ್ (Code Of Wage) ಎಂದು ಸಾಬೀತಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ.  ಮುಖ್ಯ ಕಾರ್ಯನಿರ್ವಾಹಕ ಕಚೇರಿ ಮತ್ತು ಭಾರತದ ಅಯಾನ್‌ನ ಕಾರ್ಯಕ್ಷಮತೆ ಮತ್ತು ಪ್ರತಿಫಲ ವ್ಯವಹಾರದ ಪಾಲುದಾರ ನಿತಿನ್ ಸೇಥಿ, ಅನಿಶ್ಚಿತತೆ ಮತ್ತು ಮುಂಬರುವ ಬದಲಾವಣೆಗಳ ಪರಿಣಾಮದಿಂದಾಗಿ 2021 ರ ಬೆಳವಣಿಗೆಯು ದೀರ್ಘಾವಧಿಯದ್ದಾಗಿರಲಿದೆ ಎಂದು ಅವರು ನಿರೀಕ್ಷಿಸಿದ್ದಾರೆ.

ಹೊಸ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಸಂಬಳದ ಪ್ರಸ್ತಾವಿತ ವ್ಯಾಖ್ಯಾನ ಹೆಚ್ಚುವರಿ ಪರಿಹಾರವನ್ನು ಒದಗಿಸುವ ನಿರೀಕ್ಷೆ ಇದೆ ಎಂದು ನಿತೀನ್ ಸೇಥಿ ಹೇಳಿದ್ದಾರೆ. ಇದು ಗ್ರ್ಯಾಚುಟಿ, ರಜೆ ಎನ್‌ಕ್ಯಾಶ್‌ಮೆಂಟ್ ಮತ್ತು ಭವಿಷ್ಯ ನಿಧಿಗಳಂತಹ ಲಾಭದ ಯೋಜನೆಗಳಿಗೆ ಹೆಚ್ಚಿನ ನಿಬಂಧನೆಯ ರೂಪದಲ್ಲಿರಬಹುದು. ಕಾರ್ಮಿಕ ಸಂಹಿತೆಯ ಆರ್ಥಿಕ ಪರಿಣಾಮವು ತಿಳಿದುಬಂದಾಗ, ವರ್ಷದ ಎರಡನೇ ಭಾಗದಲ್ಲಿ ಸಂಸ್ಥೆಗಳು ತಮ್ಮ ಪರಿಹಾರ ಬಜೆಟ್ ಅನ್ನು ಪರಿಶೀಲಿಸುತ್ತವೆ ಎಂಬುದನ್ನು ತಾವು ಆಶಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ- ಈ One Rupee Coin ನಿಮ್ಮ ಬಳಿ ಇದ್ದರೆ ನೀವೂ 10 ಲಕ್ಷ ರೂ. ಸಂಪಾದಿಸಬಹುದು!

ಇ-ಕಾಮರ್ಸ್, ಐಟಿಯಲ್ಲಿ ಅತಿ ಹೆಚ್ಚು ವೇತನ ವೃದ್ಧಿಯಾಗುವ ಸಾಧ್ಯತೆ
ಸಂಸ್ಥೆಗಳು ವೇತನದ ಹೊಸ ವ್ಯಾಖ್ಯಾನದ ಮೇಲೆ ಹೆಚ್ಚಿನ ಭವಿಷ್ಯ ನಿಧಿಯನ್ನು ಪಾವತಿಸಲು ನಿರ್ಧರಿಸಿದರೆ, ಕೆಲವು ಏರಿಕೆಗಳು ಕಾರ್ಮಿಕರಿಗೆ ಕೈಯಲ್ಲಿರುವ ಹಣವನ್ನು ಹೆಚ್ಚಿಸುವುದಿಲ್ಲ ಎಂದು ಸೇಥಿ ಹೇಳಿದ್ದಾರೆ.

ಇದನ್ನೂ ಓದಿ-ಬಿಗ್ ನ್ಯೂಸ್! EPF ಬಡ್ಡಿ ಮೇಲಿನ ತೆರಿಗೆ ಬಗ್ಗೆ ವಿತ್ತ ಸಚಿವರ ಮಹತ್ವದ ಹೇಳಿಕೆ

ಸಮೀಕ್ಷೆಯ ಪ್ರಕಾರ, ಹೆಚ್ಚು ವೇತನ ಏರಿಕೆಯ ನಿರೀಕ್ಷೆಯ ಕ್ಷೇತ್ರಗಳಲ್ಲಿ ಇ-ಕಾಮರ್ಸ್ ಮತ್ತು ವೆಂಚರ್ ಕ್ಯಾಪಿಟಲ್, ಹೈಟೆಕ್ / ಮಾಹಿತಿ ತಂತ್ರಜ್ಞಾನ, ಐಟಿಇಎಸ್, ಜೀವ ವಿಜ್ಞಾನ ಕ್ಷೇತ್ರಗಳು ಶಾಮೀಲಾಗಿವೆ. ಮತ್ತೊಂದೆಡೆ, ಕನಿಷ್ಠ ವೇತನ ಅಭಿವೃದ್ಧಿ  ನಿರೀಕ್ಷಿಸುವ ಕ್ಷೇತ್ರಗಳಲ್ಲಿ ಆತಿಥ್ಯ / ರೆಸ್ಟೋರೆಂಟ್‌ಗಳು, ರಿಯಲ್ ಎಸ್ಟೇಟ್ / ಮೂಲಸೌಕರ್ಯ, ಎಂಜಿನಿಯರಿಂಗ್ ಸೇವೆಗಳು ಶಾಮೀಲಾಗಿವೆ.

ಇದನ್ನೂ ಓದಿ- ಪಿಎಫ್ ಖಾತೆದಾರರೇ EPFOದ ಹೊಸ ಮಾರ್ಗಸೂಚಿಗಳನ್ನು ತಪ್ಪದೇ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News