LAC ಮೇಲೆ ಚೀನಾ ದರ್ಪ: ತಕ್ಕ ಪ್ರತ್ಯುತ್ತರ ನೀಡಲು ಈ ವಿಶೇಷ 'ಯೋಜನೆ' ರೂಪಿಸಿದ ಭಾರತೀಯ ಸೇನೆ

India-China Relations: ಈ ಎರಡು ವರ್ಷಗಳ ಕೋರ್ಸ್‌ ನಲ್ಲಿ 10 ಅಧಿಕಾರಿಗಳು ಮತ್ತು 30 ಸೈನಿಕರಿಗೆ ಮ್ಯಾಂಡರಿನ್ ಭಾಷೆಯನ್ನು ಕಲಿಸಲಾಗುತ್ತದೆ. ಆದರೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಂತರ, ಸೇನೆಯು ಈಗ ಅಂತಹ ಕೋರ್ಸ್‌ ಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿದೆ.

Written by - Bhavishya Shetty | Last Updated : Jul 29, 2023, 12:56 PM IST
    • ಚೀನಾದ ದುರಹಂಕಾರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆ ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ
    • ಭಾಷೆಯನ್ನು ಅಸ್ತ್ರವನ್ನಾಗಿಸುವ ಅಭಿಯಾನವನ್ನೂ ಸೇನೆ ಆರಂಭಿಸಿದೆ
    • ಚೈನೀಸ್ ಭಾಷೆ ಮ್ಯಾಂಡರಿನ್ ಕಲಿಸುವ ಕೋರ್ಸ್‌ ಗಳ ಸಂಖ್ಯೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದೆ
LAC ಮೇಲೆ ಚೀನಾ ದರ್ಪ: ತಕ್ಕ ಪ್ರತ್ಯುತ್ತರ ನೀಡಲು ಈ ವಿಶೇಷ 'ಯೋಜನೆ' ರೂಪಿಸಿದ ಭಾರತೀಯ ಸೇನೆ title=
India-China Border

India-China Relations: ಭಾರತ-ಚೀನಾ ಗಡಿಯ ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾದ ದುರಹಂಕಾರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತೀಯ ಸೇನೆ ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ. ಎಲ್‌ಎಸಿಯಲ್ಲಿ ಸೈನಿಕರ ನಿಯೋಜನೆ ಮತ್ತು ಆಧುನಿಕ ಶಸ್ತ್ರಾಸ್ತ್ರಗಳ ಜೊತೆಗೆ, ಭಾಷೆಯನ್ನು ಅಸ್ತ್ರವನ್ನಾಗಿಸುವ ಅಭಿಯಾನವನ್ನೂ ಸೇನೆ ಆರಂಭಿಸಿದೆ. ಮಾಹಿತಿಯ ಪ್ರಕಾರ, ಭಾರತೀಯ ಸೇನೆಯು ತನ್ನ ಸೈನಿಕರಿಗೆ ಚೈನೀಸ್ ಭಾಷೆ ಮ್ಯಾಂಡರಿನ್ ಕಲಿಸುವ ಕೋರ್ಸ್‌ ಗಳ ಸಂಖ್ಯೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಇಲ್ಲಿಯವರೆಗೆ, ಪಂಚಮರ್ಹಿಯಲ್ಲಿರುವ ಆರ್ಮಿಯ ಎಜುಕೇಷನಲ್ ಕಾರ್ಪ್ಸ್‌ ನ ಪ್ರಧಾನ ಕಛೇರಿಯಲ್ಲಿ ಮ್ಯಾಂಡರಿನ್ ಭಾಷೆಯ ಒಂದು ಕೋರ್ಸ್ ಅನ್ನು ಮಾತ್ರ ನಡೆಸಲಾಗುತ್ತಿತ್ತು.

ಇದನ್ನೂ ಓದಿ: ವಿಶ್ವಕಪ್ ಮುನ್ನವೇ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಬೌಲರ್?

ಚೀನಾ ವಿರುದ್ಧ ‘ಭಾಷೆ’ ಅಸ್ತ್ರ:

ಈ ಎರಡು ವರ್ಷಗಳ ಕೋರ್ಸ್‌ ನಲ್ಲಿ 10 ಅಧಿಕಾರಿಗಳು ಮತ್ತು 30 ಸೈನಿಕರಿಗೆ ಮ್ಯಾಂಡರಿನ್ ಭಾಷೆಯನ್ನು ಕಲಿಸಲಾಗುತ್ತದೆ. ಆದರೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಂತರ, ಸೇನೆಯು ಈಗ ಅಂತಹ ಕೋರ್ಸ್‌ ಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸಿದೆ. ಕೋರ್ಸ್ ಮುಗಿದ ನಂತರ, ಕೆಲವು ಅಧಿಕಾರಿಗಳು ಮತ್ತು ಜವಾನರನ್ನು ಸ್ನಾತಕೋತ್ತರ ಕೋರ್ಸ್‌ ಗೆ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ.

ಈ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ…

ಸೈನ್ಯವು ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯ, ಗುಜರಾತ್‌ನ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ತೇಜ್‌ಪುರ ವಿಶ್ವವಿದ್ಯಾಲಯದೊಂದಿಗೆ ಸ್ನಾತಕೋತ್ತರ ಕೋರ್ಸ್‌ಗಾಗಿ ಒಪ್ಪಂದ ಮಾಡಿಕೊಂಡಿದೆ. ಭಾರತ ಮತ್ತು ಚೀನಾ ನಡುವೆ 3,400 ಕಿಲೋಮೀಟರ್ ಉದ್ದದ ಗಡಿಯಿದ್ದು, ಹಲವು ಸ್ಥಳಗಳಲ್ಲಿ ವ್ಯತ್ಯಾಸಗಳಿವೆ. ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಹಲವು ಬಾರಿ ಹಿಂಸಾತ್ಮಕ ಘರ್ಷಣೆಗಳು ನಡೆದಿವೆ.

ಉಭಯ ದೇಶಗಳ ನಡುವಿನ ವಿಭಿನ್ನ ಒಪ್ಪಂದಗಳಿಂದಾಗಿ ವಿವಾದ ಉಂಟಾದಾಗಲೂ ಶಸ್ತ್ರಾಸ್ತ್ರಗಳನ್ನು ಬಳಸಲಾಗುವುದಿಲ್ಲ. ಆದರೆ ಉಭಯ ದೇಶಗಳ ಸೈನಿಕರು ಆಗಾಗ ಚರ್ಚೆಯಲ್ಲಿ ಸಿಕ್ಕು ಜಗಳವಾಡುತ್ತಾರೆ. ಅದಕ್ಕಾಗಿಯೇ ಭಾರತೀಯ ಸೈನಿಕರಿಗೆ ಮ್ಯಾಂಡರಿನ್ ಕಲಿಸಲಾಗುತ್ತಿದೆ. ಇದರಿಂದಾಗಿ ಗಡಿಯಲ್ಲಿ ಚೀನಾದ ಸೈನಿಕರೊಂದಿಗೆ ಸಂಘರ್ಷ ಉಂಟಾದಾಗ, ನಮ್ಮ ಸೈನಿಕರು ಅವರೊಂದಿಗೆ ಉತ್ತಮ ರೀತಿಯಲ್ಲಿ ಚರ್ಚಿಸಬಹುದು ಮತ್ತು ವಿವಾದಗಳನ್ನು ತಪ್ಪಿಸಬಹುದು.

ಇದನ್ನೂ ಓದಿ: ಇನ್ನೊಂದು ತಿಂಗಳಲ್ಲಿ ಈ ರಾಶಿಯವರ ಅಂಗೈಯಲ್ಲಿ ನಲಿದಾಡುವಳು ಧನಲಕ್ಷ್ಮೀ-ಒಲಿದು ಬರುವುದು ಸುಖದ ಸುಪ್ಪತ್ತಿಗೆ

ಭಾರತ-ಚೀನಾ ಗಡಿ ವಿವಾದ ಎಂದರೇನು?

ಭಾರತ ಮತ್ತು ಚೀನಾ ಗಡಿಯಲ್ಲಿ ಯಾವುದೇ ತಂತಿಗಳನ್ನು ಎಳೆಯಲಾಗಿಲ್ಲ. ಭದ್ರತೆಗಾಗಿ ಎರಡೂ ದೇಶಗಳ ಸೇನೆಗಳು ಗಸ್ತು ತಿರುಗುತ್ತಿವೆ. ಭಾರತವು ಪಶ್ಚಿಮ ವಲಯದಲ್ಲಿ ಅಕ್ಸಾಯ್ ಚಿನ್ ಮೇಲೆ ಹಕ್ಕು ಹೊಂದಿದೆ, ಆದರೆ ಈ ಪ್ರದೇಶವು ಪ್ರಸ್ತುತ ಚೀನಾದ ವಶದಲ್ಲಿದೆ. ಪೂರ್ವ ವಲಯದಲ್ಲಿ, ಭಾರತವು ಅರುಣಾಚಲ ಪ್ರದೇಶದ ಕೆಲವು ಭಾಗವನ್ನು ಪ್ರತಿಪಾದಿಸುತ್ತದೆ. ಇದು ದಕ್ಷಿಣ ಟಿಬೆಟ್‌ನ ಭಾಗ ಎಂದು ಚೀನಾ ಹೇಳುತ್ತದೆ. ಗಡಿ ವಿವಾದ ಬಗೆಹರಿಸಲು ಭಾರತ-ಚೀನಾ ಹಲವು ಸುತ್ತಿನ ಮಾತುಕತೆ ನಡೆಸಿವೆ. ಆದರೆ ಈ ವಿಷಯ ಇನ್ನೂ ಕ್ಲಿಷ್ಟವಾಗಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News