ನವದೆಹಲಿ: ಭಾರತೀಯ ಅಂಚೆ ಗ್ರಾಮೀಣ ಡಾಕ್ ಸೇವಕ್ (India Post GDS Recruitment 2021) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಇಂಡಿಯಾ ಪೋಸ್ಟ್ ತನ್ನ ಜಮ್ಮು ಮತ್ತು ಕಾಶ್ಮೀರ ಅಂಚೆ ವೃತ್ತಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮೂಲಕ ಭಾರತೀಯ ಅಂಚೆ ಇಲಾಖೆ ಒಟ್ಟು 250 ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (MBPM) ಮತ್ತು ಡಕ್ ಸೇವಕ್(Dak Sevaks) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ನ ಅಧಿಕೃತ ವೆಬ್‌ಸೈಟ್ appost.inಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 29 ಆಗಿದೆ.
ಇದನ್ನೂ ಓದಿ: Char Dham Yatra: ಹಿಮಪಾತದ ನಡುವೆಯೇ ಉತ್ತರಾಖಂಡದಲ್ಲಿ ಮುಂದುವರಿದ ಚಾರ್ ಧಾಮ್ ಯಾತ್ರೆ
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ: ಹುದ್ದೆಯ ವಿವರಗಳು
- ಶಾಖೆಯ ಪೋಸ್ಟ್ ಮಾಸ್ಟರ್ (ಬಿಪಿಎಂ)
- ಸಹಾಯಕ ಶಾಖೆಯ ಪೋಸ್ಟ್ ಮಾಸ್ಟರ್ (ABPM)
- ಡಾಕ್ ಸೇವಕ್ ಹುದ್ದೆಗಳು
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ: ವಯಸ್ಸಿನ ಮಿತಿ
ಅಭ್ಯರ್ಥಿಯು ಸೆಪ್ಟೆಂಬರ್ 30, 202ರಂತೆ 18 ಮತ್ತು 40 ವರ್ಷಗಳ ನಡುವೆ ಇರಬೇಕು. ಕಾಯ್ದಿರಿಸಿದ ವರ್ಗಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ನೇಮಕಾತಿಗೆ ಹೇಗೆ ಅರ್ಜಿ ಸಲ್ಲಿಸಬೇಕು
ಹಂತ 1) ಆನ್‌ಲೈನ್ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.
ಹಂತ 2) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು https://indiapost.gov.in ಅಥವಾ https://appost.in/gdsonline ಮೂಲಕ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ಹಂತ 3) ಪೋರ್ಟಲ್‌ನಲ್ಲಿ ಅಭ್ಯರ್ಥಿಯು ತನ್ನ ಹೆಸರು, ತಂದೆಯ ಹೆಸರು, ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕ, ಲಿಂಗ, ಸಮುದಾಯ, 10ನೇ ತರಗತಿಯಲ್ಲಿ ಉರ್ತೀರ್ಣರಾಗಿರುವ ಮಾಹಿತಿ ಜೊತೆಗೆ ಇನ್ನಿತರ ವಿವರಗಳನ್ನು ಒದಗಿಸಬೇಕಾಗುತ್ತದೆ.
ಇದನ್ನೂ ಓದಿ: PhonePe ಬಳಕೆದಾರರೇ ಗಮನಿಸಿ, UPI ಪೇಮೆಂಟ್ ಮಾಡಿದರೆ ಖಾತೆಯಿಂದ ಕಡಿತಗೊಳ್ಳುತ್ತದೆ ಇಷ್ಟು ಹಣ
ನೇಮಕಾತಿಯ ಅರ್ಹತಾ ಮಾನದಂಡ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು 10ನೇ ತರಗತಿಯ ಮಾಧ್ಯಮಿಕ ಶಾಲಾ ಪರೀಕ್ಷೆಯ ಪಾಸಿಂಗ್ ಸರ್ಟಿಫಿಕೇಟ್ ಹೊಂದಿರಬೇಕು. ಕಡ್ಡಾಯವಾಗಿ ಗಣಿತ, ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ನಲ್ಲಿ ಉತ್ತೀರ್ಣರಾಗಿರಬೇಕು.
ಇದಲ್ಲದೆ ಅಭ್ಯರ್ಥಿಯು ಕನಿಷ್ಠ 10ನೇ ತರಗತಿಯವರೆಗೆ ಸ್ಥಳೀಯ ಭಾಷೆ(ಕಡ್ಡಾಯ ಅಥವಾ ಚುನಾಯಿತ ವಿಷಯಗಳಾಗಿ)ಯನ್ನು ಅಧ್ಯಯನ ಮಾಡಿರಬೇಕು. ಯಾವುದೇ ಕಂಪ್ಯೂಟರ್ ತರಬೇತಿ ಸಂಸ್ಥೆಯಿಂದ ಕನಿಷ್ಠ 60 ದಿನಗಳ ಅವಧಿಯ ಬೇಸಿಕ್ ಕಂಪ್ಯೂಟರ್ ತರಬೇತಿ ಕೋರ್ಸ್ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ.
ನೇಮಕಾತಿಯ ಅರ್ಜಿ ಶುಲ್ಕ
ಅಧಿಸೂಚನೆ ಪ್ರಕಾರ ಒಬಿಸಿ, ಇಡಬ್ಲ್ಯೂಎಸ್ ಮತ್ತು ಪುರುಷ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ಇರುತ್ತದೆ. ಎಸ್ಸಿ, ಎಸ್ಟಿ, ಪಿಡಬ್ಲೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ಆನ್‌ಲೈನ್ ಮೋಡ್ ಮತ್ತು ಆಫ್ಲೈನ್ ಮೋಡ್ ಎರಡರಲ್ಲೂ ಅರ್ಜಿ ಶುಲ್ಕ ಪಾವತಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ