ಕುಪ್ವಾರಾ ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರ ಹತ್ಯೆ, ಐವರು ಭದ್ರತಾ ಸಿಬ್ಬಂಧಿ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾದಲ್ಲಿ ಸುಮಾರು 56 ಗಂಟೆಗಳ ಕಾಲ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ದಾಳಿ ಭಾನುವಾರ ಕೊನೆಗೊಂಡಿದ್ದು.ಇದರಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.ಅಲ್ಲದೆ ದಾಳಿಯ ವೇಳೆ ಮೂವರು ಸಿಆರ್ಪಿಎಫ್ ಸೈನಿಕರು ಹಾಗೂ ಇಬ್ಬರು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹುತಾತ್ಮರಾಗಿದ್ದಾರೆ ಎನ್ನಲಾಗಿದೆ.

Last Updated : Mar 3, 2019, 01:22 PM IST
ಕುಪ್ವಾರಾ ಎನ್ಕೌಂಟರ್ ನಲ್ಲಿ ಇಬ್ಬರು ಉಗ್ರರ ಹತ್ಯೆ, ಐವರು ಭದ್ರತಾ ಸಿಬ್ಬಂಧಿ ಹುತಾತ್ಮ title=
file photo

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರಾದಲ್ಲಿ ಸುಮಾರು 56 ಗಂಟೆಗಳ ಕಾಲ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ದಾಳಿ ಭಾನುವಾರ ಕೊನೆಗೊಂಡಿದ್ದು.ಇದರಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.ಅಲ್ಲದೆ ದಾಳಿಯ ವೇಳೆ ಮೂವರು ಸಿಆರ್ಪಿಎಫ್ ಸೈನಿಕರು ಹಾಗೂ ಇಬ್ಬರು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹುತಾತ್ಮರಾಗಿದ್ದಾರೆ ಎನ್ನಲಾಗಿದೆ.

ಸಿಆರ್ಪಿಎಫ್ ಸೈನಿಕರು ಮತ್ತು ಪೊಲೀಸರು ಶುಕ್ರವಾರ ಗುಂಡಿನ ಸ್ಫೋಟದಲ್ಲಿ ಸಾವನ್ನಪ್ಪಿದರು. ಉಗ್ರನೊಬ್ಬ ಏಕಾಏಕಿ ಮನೆಯ ಅವಶೇಷಗಳಿಂದ ಎದ್ದು ಭದ್ರತಾ ಪಡೆಗಳ ಮೇಲೆ ನಿರಂತರ ಗುಂಡು ಹಾರಿಸಿದ್ದರ ಪರಿಣಾಮವಾಗಿ ಸೈನಿಕರು ಮೃತಪಟ್ಟಿದ್ದರು.ಈ ಗುಂಡಿನ ಚಕಮಕಿಯಲ್ಲಿ ಓರ್ವ ನಾಗರಿಕನೊಬ್ಬ ಸಹಿತ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ

ಮಾಧ್ಯಮ ವರದಿ ಪ್ರಕಾರ ಉಗ್ರರು ಸ್ಥಳ ಬದಲಾವಣೆ ಮಾಡುತ್ತಿದ್ದ ಪರಿಣಾಮವಾಗಿ  ಭದ್ರತಾ ಪಡೆಗಳು ಗುಂಡಿನ ದಾಳಿ ಗೈದ ಪರಿಣಾಮವಾಗಿ ಎರಡು ಮನೆ ಮತ್ತು ದನದ ಕೊಟ್ಟಿಗೆಗಳು ನಾಶವಾಗಿವೆ.

Trending News