ಜನವರಿಯಲ್ಲಿ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶ ?

    

Last Updated : Nov 30, 2017, 11:29 AM IST
ಜನವರಿಯಲ್ಲಿ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶ ? title=

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತಾಗಿ ಮಾಧ್ಯಮಗಳಲ್ಲಿ ದಿನನಿತ್ಯ ಒಂದಿಲ್ಲೊಂದು ಸುದ್ದಿ ಬರುತ್ತಲೇ ಇವೆ, ಅದಕ್ಕೆ ಈಗ ಸರಣಿ ರೂಪವಾಗಿ ಮತ್ತೊಂದು ಸುದ್ದಿ ಸೇರ್ಪಡೆಯಾಗಿದೆ.ಹಾಗಾದರೆ ಅದೇನ್ ಅಂತಿರಾ? ಈ ಕೆಳಗಿನ ಸುದ್ದಿ ನೋಡಿ.

ಜನವರಿ ವೇಳೆಗೆ ರಜನಿಕಾಂತ್ ರವರು ರಾಜಕಾರಣಕ್ಕೆ ಪ್ರವೇಶಿಸುತ್ತಾರೆ ಎಂದು ಸ್ವತಃ ಅವರ ಸಹೋದರಾದ ಸತ್ಯನಾರಾಯಣ ರಾವ್ ಗಾಯಕವಾಡ್ ಇಲ್ಲಿ  ಬುಧವಾರದಂದು ರಜನಿಕಾಂತ ಅಭಿಮಾನಿಗಳ ಸಂಘದ ಜಿಲ್ಲಾ ಕಾರ್ಯದರ್ಶಿಯ ಪುತ್ರನ ಮದುವೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂಧರ್ಭದಲ್ಲಿ  ರಜನಿಯ ರಾಜಕೀಯ ಪ್ರವೇಶದ ಕುರಿತ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮಗಳಲ್ಲಿ  ರಜನಿಕಾಂತ್ ತನ್ನ ಹುಟ್ಟುಹಬ್ಬವಾದ ಡಿಸೆಂಬರ್ 12 ರಂದು ರಾಜಕೀಯ ಪ್ರವೇಶಿಸುತ್ತಾರೆ ಎನ್ನುವ ಸುದ್ದಿಗೆ ಪ್ರತಿಕ್ರಯಿಸಿರುವ ಅವರು ಆ ದಿನದಂದು ಅವರು ಈ ನಿರ್ಧಾರ ಕೈಗೊಳ್ಳುವುದಿಲ್ಲ ಬದಲಾಗಿ ಜನವರಿಯಂದು ಅಭಿಮಾನಿಗಳ ಜೊತೆ ಅವರು ಫೋಟೋಶೂಟ್ ಮಾಡಲಿದ್ದಾರೆ.ಆ ಸಂಧರ್ಭದಲ್ಲಿ ಅವರು ರಾಜಕೀಯ ಪ್ರವೇಶದ ಕುರಿತಾದ ತಿರ್ಮಾನವನ್ನು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. ಈ ದೇಶದಲ್ಲಿ ರಜನಿಯನ್ನು ಎಲ್ಲರು ಪ್ರೀತಿಸುತ್ತಾರೆ ಆದ್ದರಿಂದ ಅವರು ರಾಜಕೀಯ ಬಂದರೆ ಜನರಿಗಾಗಿ ಒಳ್ಳೆಯ ಕೆಲಸವನ್ನೇ ಕೈಗೊಳ್ಳುತ್ತಾರೆ ಎಂದು ಅವರು ರಜನಿಯ ರಾಜಕೀಯ ಪ್ರವೇಶಕ್ಕೆ ಈ ರೀತಿ ಅಭಿಪ್ರಾಯಪಟ್ಟರು. 

Trending News