ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2018-19ರ ಸಾಮಾನ್ಯ ಬಜೆಟ್ಗೆ ಮೊದಲು ರಾಜ್ಯಸಭೆಯಲ್ಲಿಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು. ಆರ್ಥಿಕ ಸಮೀಕ್ಷೆಯು 2019-20ನೇ ಸಾಲಿನಲ್ಲಿ ತೈಲ ಬೆಲೆಗಳನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಅಲ್ಲದೆ, ಆರ್ಥಿಕ ಸಮೀಕ್ಷೆಯಲ್ಲಿ, 2019-20ರ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಆರ್ಥಿಕ ಸಮೀಕ್ಷೆಯ ಮುಖ್ಯ ಅಂಶಗಳು ಇಲ್ಲಿವೆ:
1. 2019-20ರ ಆರ್ಥಿಕ ವರ್ಷದಲ್ಲಿ ಗ್ರೋಥ್ ಹೆಚ್ಚಾಗುವ ನಿರೀಕ್ಷೆ.
2. 2019-20ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ದರ 7% ಎಂದು ಅಂದಾಜಿಸಲಾಗಿದೆ
3. 2019-20ರ ಆರ್ಥಿಕ ವರ್ಷದಲ್ಲಿ ಹೂಡಿಕೆ ಹೆಚ್ಚಾಗುವ ನಿರೀಕ್ಷೆ.
4. ಕಚ್ಚಾ ತೈಲ ಬೆಲೆಗಳು ಕಡಿಮೆಯಾಗುವ ನಿರೀಕ್ಷೆ.
5. 2018 ರಿಂದ ವೇಗ ಪಡೆದುಕೊಂಡ ಗ್ರಾಮೀಣಾಭಿವೃದ್ಧಿ
6. ಬೇಡಿಕೆ ಹೆಚ್ಚಿರುವುದರಿಂದ ಹೂಡಿಕೆಯೂ ಹೆಚ್ಚಾಗುತ್ತದೆ.
7. ಕಳೆದ 5 ವರ್ಷಗಳ ಸರಾಸರಿ ಜಿಡಿಪಿ ಬೆಳವಣಿಗೆಯ ದರ 7.5%
8. ತೈಲ ಬೆಲೆಗಳ ಇಳಿಕೆಯಿಂದ ಬಳಕೆ ಹೆಚ್ಚಾಗುತ್ತದೆ.
9. ಜಾಗತಿಕ ವ್ಯಾಪಾರ ಉದ್ವೇಗದ ಪರಿಣಾಮವು ರಫ್ತಿನ ಮೇಲೆ ಪರಿಣಾಮ ಬೀರುತ್ತದೆ.
10. 2025 ಹಣಕಾಸು ವರ್ಷದ ವೇಳೆಗೆ ಜಿಡಿಪಿ ಬೆಳವಣಿಗೆಯ ದರ 8% ಆಗಲಿದೆ.
11. 2025 ರ ಆರ್ಥಿಕ ವರ್ಷದ ವೇಳೆಗೆ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಹೆಚ್ಚಿಸುವ ಗುರಿ.
12. ಎನ್ಬಿಎಫ್ಸಿ ವಲಯದ ಮೇಲೆ ಒತ್ತಡದ ಪ್ರಭಾವ
13. ಫೈನಾನ್ಸಿಯಲ್ ಇಯರ್ 20 ರಲ್ಲಿ ಆರ್ಥಿಕತೆಗೆ ಆರ್ಥಿಕ ಸವಾಲುಗಳು
14. ಆರ್ಥಿಕ ವರ್ಷ19-20 ರಲ್ಲಿ ಆರ್ಥಿಕತೆಗೆಸವಾಲುಗಳು-ನಿಧಾನಗತಿಯ ಬೆಳವಣಿಗೆ, ಜಿಎಸ್ಟಿ, ಕೃಷಿ ಯೋಜನೆಗಳು ಪರಿಣಾಮ ಬೀರುತ್ತವೆ.
15. 2021 ರ ಹಣಕಾಸು ವರ್ಷದಲ್ಲಿ 3% ವಿತ್ತೀಯ ಕೊರತೆ.
16. ಹಣಕಾಸಿನ ವರ್ಷ 19-20ರಲ್ಲಿ ಬೆಳವಣಿಗೆ ನಿಧಾನವಾಗಿದ್ದರೆ, ಆದಾಯದ ಮೇಲೆ ಪರಿಣಾಮ ಬೀರುತ್ತದೆ.