ರೈಲ್ವೆ ಪ್ರಯಾಣಿಕರಿಗೆ ಪ್ರಮುಖ ಸುದ್ದಿ: ರದ್ದಾದ ರೈಲುಗಳ ಬಗ್ಗೆ IRCTC ನೀಡಿದೆ ಈ ಮಾಹಿತಿ

ಭಾರತದಲ್ಲಿ  ಲಾಕ್‌ಡೌನ್(LOCKDOWN) ಸಮಯದಲ್ಲಿ, ಐಆರ್‌ಸಿಟಿಸಿ (IRCTC)ರೈಲ್ವೆ ಪ್ರಯಾಣಿಕರಿಗೆ ದೊಡ್ಡ ಸೌಲಭ್ಯವನ್ನು ಘೋಷಿಸಿದೆ.  

Written by - Yashaswini V | Last Updated : Mar 25, 2020, 08:23 AM IST
ರೈಲ್ವೆ ಪ್ರಯಾಣಿಕರಿಗೆ ಪ್ರಮುಖ ಸುದ್ದಿ: ರದ್ದಾದ ರೈಲುಗಳ ಬಗ್ಗೆ IRCTC ನೀಡಿದೆ ಈ ಮಾಹಿತಿ title=

ನವದೆಹಲಿ : ಭಾರತದಲ್ಲಿ  ಲಾಕ್‌ಡೌನ್(LOCKDOWN) ಸಮಯದಲ್ಲಿ, ಐಆರ್‌ಸಿಟಿಸಿ (IRCTC) ರೈಲ್ವೆ ಪ್ರಯಾಣಿಕರಿಗೆ ದೊಡ್ಡ ಸೌಲಭ್ಯವನ್ನು ಘೋಷಿಸಿದೆ. ಕರೋನವೈರಸ್ COVID-19   ಸಕಾರಾತ್ಮಕ ಪ್ರಕರಣಗಳ ಉಲ್ಬಣಗೊಂಡ ಮಧ್ಯೆ, ಐಆರ್‌ಸಿಟಿಸಿ ಮಂಗಳವಾರ ಪ್ರಯಾಣಿಕರಿಗೆ ಆನ್‌ಲೈನ್‌ನಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳನ್ನು ರದ್ದುಗೊಳಿಸದಂತೆ ಕೇಳಿಕೊಂಡಿದೆ ಮತ್ತು ರದ್ದುಗೊಂಡಿರುವ ರೈಲುಗಳಿಗೆ ಸ್ವಯಂಚಾಲಿತವಾಗಿ ಪೂರ್ಣ ಮರುಪಾವತಿ ಸಿಗುತ್ತದೆ ಎಂದು ಭರವಸೆ ನೀಡಿದರು. ಈ ಮೊದಲು, ರೈಲ್ವೆ ಜೂನ್ 21 ರವರೆಗೆ ಕೌಂಟರ್ ಟಿಕೆಟ್ ರದ್ದುಗೊಳಿಸುವ ಸಮಯವನ್ನು ಮೂರು ತಿಂಗಳವರೆಗೆ ವಿಸ್ತರಿಸಿದೆ.

Coronavirus:ಲಾಕ್‌ಡೌನ್‌ ವೇಳೆ ಅನಗತ್ಯವಾಗಿ ಹೊರಬಂದರೆ ಹುಷಾರ್

ಲಾಕ್ ಡೌನ್ ಸಮಯದಲ್ಲಿ ರದ್ದುಗೊಂಡ ರೈಲುಗಳಿಗೆ ಆನ್‌ಲೈನ್‌ನಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳನ್ನು ರದ್ದು ಮಾಡದಂತೆ ಐಆರ್‌ಸಿಟಿಸಿ ಪ್ರಯಾಣಿಕರಿಗೆ ಮನವಿ ಮಾಡಿರುವ ರೈಲ್ವೆ ಇಲಾಖೆ, ಆ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುವುದು ಮತ್ತು ಪ್ರಯಾಣಿಕರ ಟಿಕೆಟ್ ಖರೀದಿಗೆ ನೀಡಿದ ಸಂಪೂರ್ಣ ಹಣವನ್ನು ಅವರು ಪಡೆಯುತ್ತಾರೆ ಎಂದು ಪ್ರಯಾಣಿಕರಿಗೆ ಭರವಸೆ ನೀಡಲಾಗಿದೆ.

ರೈಲ್ವೆ ಪ್ಯಾಸೆಂಜರ್ ರೈಲುಗಳನ್ನು ಸ್ಥಗಿತಗೊಳಿಸಿದ ನಂತರ ಇ-ಟಿಕೆಟ್ ರದ್ದತಿ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ ಎಂದು ರೈಲ್ವೆ ಅಂಗಸಂಸ್ಥೆ ಐಆರ್‌ಸಿಟಿಸಿ (IRCTC) ಹೇಳಿಕೆಯಲ್ಲಿ ತಿಳಿಸಿದೆ. ಇದೇ ಸಂದರ್ಭದಲ್ಲಿ ಪ್ರಯಾಣಿಕರ ಪರವಾಗಿ ಟಿಕೆಟ್ ರದ್ದುಗೊಳಿಸುವ ಅಗತ್ಯವಿಲ್ಲ ಎಂದು ಐಆರ್‌ಸಿಟಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರಯಾಣಿಕನು ತನ್ನ ಟಿಕೆಟ್ ಅನ್ನು ರದ್ದುಗೊಳಿಸಿದರೆ, ಅವನು ಕಡಿಮೆ ಹಣವನ್ನು ಪಡೆಯುವ ಸಾಧ್ಯತೆಯಿದೆ. ಹಾಗಾಗಿ ರೈಲ್ವೆ ರದ್ದುಪಡಿಸಿದ ರೈಲುಗಳಿಗೆ ಇ-ಟಿಕೆಟ್ ರದ್ದು ಮಾಡದಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ದೇಶಕ್ಕೆ ಕರೋನಾ ವೈರಸ್ ಎಷ್ಟು ಅಪಾಯಕಾರಿ: ಭಾರತೀಯ ರೈಲ್ವೆಯ ಈ ಟ್ವೀಟ್‌ನಿಂದ ಅರ್ಥಮಾಡಿಕೊಳ್ಳಿ

"ಮರುಪಾವತಿ ಮೊತ್ತವನ್ನು ಸ್ವಯಂಚಾಲಿತವಾಗಿ ಇ-ಟಿಕೆಟ್ ಕಾಯ್ದಿರಿಸಲು ಬಳಸುವ ಬಳಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ರೈಲು ರದ್ದತಿಯ ಸಂದರ್ಭದಲ್ಲಿ ಯಾವುದೇ ಶುಲ್ಕವನ್ನು ರೈಲ್ವೆ ಕಡಿತಗೊಳಿಸುವುದಿಲ್ಲ" ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಕರೋನವೈರಸ್ (Coronavirus) ಹರಡುವಿಕೆಯನ್ನು ತಡೆಗಟ್ಟುವ ದೃಷ್ಟಿಯಿಂದ ರೈಲ್ವೆ ಮಾರ್ಚ್ 31 ರವರೆಗೆ ಎಲ್ಲಾ ರೈಲುಗಳನ್ನು ರದ್ದುಗೊಳಿಸಿದೆ.

Trending News