IMD Alert! ಮುಂದಿನ 5 ದಿನಗಳು ಆಕಾಶದಿಂದ ಬೆಂಕಿಯ ಸುರಿಮಳೆ, ಈ ರಾಜ್ಯಗಳಿಗೆ ಅಲರ್ಟ್ ಘೋಷಣೆ

Summer Temperature - ಮುಂದಿನ 4 ರಿಂದ 5 ದಿನಗಳಲ್ಲಿ ಬಿಸಿಗಾಳಿ ಬೀಸುವ (Heat Wave) ಸಾಧ್ಯತೆ ಇದೆ. ಸದ್ಯಕ್ಕೆ ಮಳೆಯಾಗುವ ಲಕ್ಷಣಗಳು ಇಲ್ಲ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸದ್ಯಕ್ಕೆ ಹವಾಮಾನ ಶುಷ್ಕತೆಯಿಂದ ಕೂಡಿರಲಿದೆ.  

Written by - Nitin Tabib | Last Updated : Mar 27, 2022, 09:52 PM IST
  • ಹವಾಮಾನ ಶುಷ್ಕವಾಗಿರಲಿದೆ
  • ಬಿರುಬಿಸಿಲಿನಿಂದ ನೆಮ್ಮದಿ ಇಲ್ಲ
  • ಭಾನುವಾರದ ದಿನ ತುಂಬಾ ಬಿಸಿಯಾಗಿರಲಿದೆ
IMD Alert! ಮುಂದಿನ 5 ದಿನಗಳು ಆಕಾಶದಿಂದ ಬೆಂಕಿಯ ಸುರಿಮಳೆ, ಈ ರಾಜ್ಯಗಳಿಗೆ ಅಲರ್ಟ್ ಘೋಷಣೆ title=
summer weather report

ನವದೆಹಲಿ: Summer Weather - ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ರಾಜಸ್ಥಾನ, ಗುಜರಾತ್, ಹರಿಯಾಣ, ಪಂಜಾಬ್, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಸಿಲಿನ ಶಾಖದಿಂದ ಯಾವುದೇ ಪರಿಹಾರ ಸಿಗುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ-CUET (UG) 2022: ಏಪ್ರಿಲ್ 2 ರಿಂದ ನೋಂದಣಿ ಪ್ರಾರಂಭ, ಪರೀಕ್ಷೆಯ ಮಾದರಿ ಬಗ್ಗೆ ಇಲ್ಲಿದೆ ಮಾಹಿತಿ

ಹವಾಮಾನದಲ್ಲಿ ಶುಷ್ಕತೆ ಇರಲಿದೆ
ಇನ್ನು 4 ರಿಂದ 5 ದಿನಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ. ಸದ್ಯಕ್ಕೆ ಮಳೆಯಾಗುವ ಸಾಧ್ಯತೆ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಸದ್ಯಕ್ಕೆ ಹವಾಮಾನ ಶುಷ್ಕವಾಗಿರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ-Amarnath Yatra 2022: ಎರಡು ವರ್ಷಗಳ ಬಳಿಕ ಈ ದಿನಾಂಕದಿಂದ ಅಮರನಾಥ್ ಯಾತ್ರೆ ಆರಂಭ

ಈ ಕ್ಷೇತ್ರಗಳಿಗೆ ನೆಮ್ಮದಿ ಇಲ್ಲ
ಹವಾಮಾನ ಇಲಾಖೆ ಪ್ರಕಾರ, ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಶಾಖದಿಂದ ನೆಮ್ಮದಿಯ ಯಾವುದೇ ಭರವಸೆ ಇಲ್ಲ. ಶುಷ್ಕ ವಾತಾವರಣದ ನಡುವೆ, ಹಗಲಿನಲ್ಲಿ ಬಿಸಿಲಿನ ತಾಪದಿಂದ ಉಷ್ಣತೆಯು ಹೆಚ್ಚಾಗುತ್ತದೆ. ರಾಜಸ್ಥಾನದ ಬನ್ಸ್ವಾರಾದಲ್ಲಿ ದಿನದ ಗರಿಷ್ಠ ತಾಪಮಾನ 42.1 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಏತನ್ಮಧ್ಯೆ, ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಬಿಸಿಗಾಳಿ ಬೀಸುವ ಕುರಿತು ಎಚ್ಚರಿಕೆ ನೀಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News