ನವದೆಹಲಿ: ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿ) ದೇಶದಲ್ಲೇ ನಂಬರ್ ಒನ್ ಯೂನಿವರ್ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಲ್ಲಿನ ವಿಜ್ಞಾನ ಭವನದಲ್ಲಿ ಮಂಗಳವಾರ ನ್ಯಾಷನಲ್ ಇನ್'ಸ್ಟಿಟ್ಯೂಷನಲ್ ರ್ಯಾಂಕಿಂಗ್ (ಎನ್ಐಆರ್ಎಫ್) ಶ್ರೇಯಾಂಕ ಪಟ್ಟಿ ಬಿಡುಗಡೆ ಮಾಡಿದ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಕಡೇಕರ್ ದೇಶದ 10 ಅಗ್ರ ವಿಶ್ವವಿದ್ಯಾಲಯಗಳ ಮಾಹಿತಿ ತಿಳಿಸಿದರು. ಬೆಂಗಳೂರಿನ ಐಐಎಸ್ ಸಿ ಪ್ರಥಮ ಸ್ಥಾನದಲ್ಲಿದ್ದರೆ, ನವದೆಹಲಿಯ ಜವಾಹರ ನೆಹರು ವಿಶ್ವವಿದ್ಯಾಲಯ 2ನೇ ಸ್ಥಾನ, ವಾರಣಾಸಿಯ ಬಸಾರಸ್ ಹಿಂದೂ ವಿಶ್ವವಿದ್ಯಾಲಯ 3ನೇ ಸ್ಥಾನ ಪಡೆದಿದೆ.
Congratulations! Indian Institute of Science, Bengaluru @iiscbangalore topped in overall category in #IndiaRankings2018#NIRF2018 #TransformingIndia
— Ministry of HRD (@HRDMinistry) April 3, 2018
ಟಾಪ್ 10 ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮೊದಲ ಸ್ಥಾನ, ಚಂಡೀಘಡದ ಪೋಸ್ಟ್ ಗ್ರಾಜುಯೇಶನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ 2ನೇ ಸ್ಥಾನ, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು 3ನೇ ಸ್ಥಾನ ಪಡೆದಿದೆ.
ಟಾಪ್ 10 ಕಾಲೇಜುಗಳ ಪಟ್ಟಿಯಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಮರಿಂದಾ ಹೌಸ್ 1ನೇ ಸ್ಥಾನ, ಚೆನೈನ ಪ್ರೆಸಿಡೆನ್ಸಿ ಕಾಲೇಜು 2ನೇ ಸ್ಥಾನ, ದೆಹಲಿಯ ಶ್ರೀ ರಾಮ ಕಾಲೇಜ್ ಆಫ್ ಕಾಮರ್ಸ್ 3ನೇ ಸ್ಥಾನ ಪಡೆದಿದೆ.
ಟಾಪ್ 10 ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಶನ್'ಗಳಲ್ಲಿ ಅಹಮದಾಬಾದ್'ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮೊದಲ ಸ್ಥಾನ, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ 2ನೇ ಸ್ಥಾನ ಮತ್ತು 3ನೇ ಸ್ಥಾನದಲ್ಲಿ ಕಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇದೆ.
ಟಾಪ್ 10 ಕಾನೂನು ಕಾಲೇಜುಗಳಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಮೊದಲ ಸ್ಥಾನ ಪಡೆದಿದ್ದರೆ, ನವದೆಹಲಿಯ ನ್ಯಾಷನಲ್ ಲಾ ಯುನಿವರ್ಸಿಟಿ 2ನೇ ಸ್ಥಾನ, ಹೈದರಾಬಾದ್'ನ ನಲ್ಸಾರ್ ಯುನಿವರ್ಸಿಟಿ ಆಫ್ ಲಾ 3ನೇ ಸ್ಥಾನ ಪಡೆದಿದೆ.
Congratulations! National Law School of India University, Bengaluru topped in Law Institutions category in #IndiaRankings2018#NIRF2018 #TransformingIndia
— Ministry of HRD (@HRDMinistry) April 3, 2018
ಟಾಪ್ 10 ಫಾರ್ಮಸಿ ಕಾಲೇಜುಗಳಲ್ಲಿ ಮೊಹಾಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಕ್ಯುತಿಕಲ್ ಎಜುಕೇಶನ್ ಅಂಡ್ ರಿಸರ್ಚ್ ಮೊದಲ ಸ್ಥಾನ, ದೆಹಲಿಯ ಜಾಮಿಯಾ ಹಮ್ದಾರ್ದ್ 2ನೇ ಸ್ಥಾನ, ಚಂಡೀಗಡದ ಯುನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಕ್ಯುಟಿಕಲ್ ಸೈನ್ಸಸ್ 3ನೇ ಸ್ಥಾನ ಹೊಂದಿದ್ದರೆ ಮೈಸೂರಿನ ಜೆಎಸ್ಎಸ್ ಫಾರ್ಮಸಿ ಕಾಲೇಜು 10ನೇ ಸ್ಥಾನ ಪಡೆದಿದೆ.