ರೈತರು ಈಗ ಎದ್ದು ನಿಲ್ಲದಿದ್ದರೆ, ಅವರನ್ನು ಶಾಶ್ವತವಾಗಿ ಮೌನಗೊಳಿಸಲಾಗುತ್ತದೆ'-ರಾಹುಲ್ ಗಾಂಧಿ

ಇತ್ತೀಚೆಗೆ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಎನ್‌ಸಿಪಿ (ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ) ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ವಿರೋಧ ಪಕ್ಷಗಳ ನಿಯೋಗ ಬುಧವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿತು.

Last Updated : Dec 10, 2020, 12:09 AM IST
ರೈತರು ಈಗ ಎದ್ದು ನಿಲ್ಲದಿದ್ದರೆ, ಅವರನ್ನು ಶಾಶ್ವತವಾಗಿ ಮೌನಗೊಳಿಸಲಾಗುತ್ತದೆ'-ರಾಹುಲ್ ಗಾಂಧಿ title=
file photo

ನವದೆಹಲಿ: ಇತ್ತೀಚೆಗೆ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಎನ್‌ಸಿಪಿ (ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ) ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ವಿರೋಧ ಪಕ್ಷಗಳ ನಿಯೋಗ ಬುಧವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿತು.

ಲಡಾಖ್‌ನಲ್ಲಿ ಚೀನಾದ ಉದ್ದೇಶಗಳನ್ನು ಎದುರಿಸಲು ಮೋದಿ ಸರ್ಕಾರ ಹೆದರುತ್ತಿದೆ-ರಾಹುಲ್ ಗಾಂಧಿ

ಕೃಷಿ ಕಾನೂನುಗಳನ್ನು ರೈತ ವಿರೋಧಿ ಕಾನೂನು ಎಂದು ಕರೆದ ರಾಹುಲ್ ಗಾಂಧಿ ವಿರೋಧ ಪಕ್ಷಗಳು ಮತ್ತು ರೈತರೊಂದಿಗೆ ಸಮಾಲೋಚಿಸದೆ ಕಾನೂನುಗಳನ್ನು ಅಂಗೀಕರಿಸಿದ್ದಾರೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಈ ಮೂರು ಮಸೂದೆಗಳನ್ನು ಯಾವುದೇ ಚರ್ಚೆಯಿಲ್ಲದೆ, ವಿರೋಧ ಪಕ್ಷಗಳೊಂದಿಗೆ ಯಾವುದೇ ಸಂಭಾಷಣೆ ಇಲ್ಲದೆ ಅಂಗೀಕರಿಸಿದ ರೀತಿ, ಮತ್ತು ಭಾರತವನ್ನು ನಿರ್ಮಿಸಿರುವ ಈ ದೇಶದ ರೈತರೊಂದಿಗೆ ಚರ್ಚಿಸದೆ ಕಾಯ್ದೆ ಗಳನ್ನು ಜಾರಿಗೆ ತಂದಿರುವುದು ಈ ದೇಶದ ರೈತರಿಗೆ ಮಾಡಿದ ಅವಮಾನ ಎಂದು ಹೇಳಿದರು.

'ರೈತ ಸರ್ಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾನೆ.ಸರ್ಕಾರವು ಅವರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ ಎನ್ನುವ ನಂಬಿಕೆಯನ್ನು ಕಳೆದುಕೊಂಡಿದ್ದಾನೆ ಅದಕ್ಕಾಗಿಯೇ ಲಕ್ಷಾಂತರ ರೈತರು ಬೀದಿಗೆ ಇಳಿದಿದ್ದಾರೆ.ಇಂತಹ ಚಳಿಯಲ್ಲಿ ಅವರು ಹೆಣಗಾಡುತ್ತಿದ್ದಾರೆ, ಆದ್ದರಿಂದ ಈ ಮಾಸೂದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದು ನಿರ್ಣಾಯಕ ಎಂದು ನಾವು ರಾಷ್ಟ್ರಪತಿಗೆ ತಿಳಿಸಿದ್ದೇವೆ' ಎಂದು ಅವರು ಹೇಳಿದರು.

ಬುಧವಾರ ರಾಷ್ಟ್ರಪತಿ ರಾಮನಾಥ್ ಕೊವಿಂದ್ ರನ್ನು ಭೇಟಿಯಾದ ಪ್ರತಿಪಕ್ಷ ನಾಯಕರ ಐವರು ಸದಸ್ಯರ ನಿಯೋಗದಲ್ಲಿ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮತ್ತು ಡಿಎಂಕೆ ನಾಯಕ ಟಿಕೆಎಸ್ ಎಲಂಗೋವನ್ ಅವರು ಇದ್ದರು.

Trending News