ನವದೆಹಲಿ: ಮಾರ್ಚ್ 31, 2020, ಇದು ನಿಮ್ಮ ಪ್ಯಾನ್ ಕಾರ್ಡ್‌ಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ನಿಲ್ಲಿಸುವ ದಿನಾಂಕವಾಗಿದೆ. ನಿಮ್ಮ ಪ್ಯಾನ್ ಕಾರ್ಡ್ ರದ್ದುಗೊಳಿಸಬಹುದು. ವಾಸ್ತವವಾಗಿ, ಒಂದು ವೇಳೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್(Pan-Aadhaar Linking) ಮಾಡಿಲ್ಲದಿದ್ದರೆ, ಪ್ಯಾನ್ ಕಾರ್ಡ್ ರದ್ದುಗೊಳ್ಳುತ್ತದೆ. ಏತನ್ಮಧ್ಯೆ, ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ರೀತಿಯ ತಪ್ಪು ಸಂಭವಿಸಿದಲ್ಲಿ, ಅದನ್ನು ನವೀಕರಿಸಲು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು.
ಪ್ಯಾನ್ ಕಾರ್ಡ್ ಹಣಕಾಸಿನ ವಹಿವಾಟು ಮತ್ತು ತೆರಿಗೆ ರಿಟರ್ನ್ಗಾಗಿ ಕಡ್ಡಾಯ ದಾಖಲೆಯಾಗಿದೆ. ಅನೇಕ ಜನರ ಪ್ಯಾನ್ ಕಾರ್ಡ್ ವಿವರಗಳನ್ನು ತಪ್ಪಾಗಿ ಮುದ್ರಿಸಲಾಗಿರುತ್ತದೆ. ಇದರಲ್ಲಿ, ಹೆಸರು, ತಂದೆಯ ಹೆಸರು ಅಥವಾ ಹುಟ್ಟಿದ ದಿನಾಂಕವನ್ನು ತಪ್ಪಾಗಿ ಮುದ್ರಿಸಿರಬಹುದು. ನಿಮ್ಮ ವಿಷಯದಲ್ಲೂ ಇದೇ ರೀತಿ ಸಂಭವಿಸಿದ್ದರೆ, ಅದನ್ನು ಕೂಡಲೇ ಸರಿಪಡಿಸಿ. ನೀವು ಅದನ್ನು ಸರಿ ಮಾಡದಿದ್ದರೆ, ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಐಟಿಆರ್ ಕೂಡ ಸಾಧ್ಯವಾಗದಿರಬಹುದು.
ಮನೆಯಲ್ಲೇ ಕುಳಿತು ಸರಿಪಡಿಸಿ:
ಪ್ಯಾನ್ ಕಾರ್ಡ್ ನವೀಕರಿಸಲು ಎಲ್ಲಿಯೂ ಹೋಗಬೇಕಾದ ಅಗತ್ಯವಿಲ್ಲ, ಅದನ್ನು ಮನೆಯಲ್ಲಿಯೇ ಕುಳಿತು ಕೆಲವೇ ನಿಮಿಷಗಳಲ್ಲಿ ನವೀಕರಿಸಬಹುದು. ಆದಾಗ್ಯೂ, ಇದಕ್ಕಾಗಿ ನಿಮ್ಮ ಸರಿಯಾದ ಮಾಹಿತಿಯನ್ನು ಹೊಂದಿರುವುದು ಮುಖ್ಯವಾಗಿದೆ. ಆದ್ದರಿಂದ, ನಿಮ್ಮ ಪ್ಯಾನ್ ಕಾರ್ಡ್ ಅನ್ನು ಹೇಗೆ ನವೀಕರಿಸುವುದು ಎಂದು ನಾವು ನಿಮಗೆ ಹೇಳುತ್ತಿದ್ದೇವೆ.
ನಿಮ್ಮ ಪ್ಯಾನ್ ಕಾರ್ಡ್ ಅನ್ನು ಈ ರೀತಿ ನವೀಕರಿಸಿ:
PAN ಕಾರ್ಡ್‌ನಲ್ಲಿ ತಪ್ಪಾಗಿದೆಯೇ? ಮಾರ್ಚ್ 31 ರ ಮೊದಲು ಸರಿಪಡಿಸಿ!