ನವದೆಹಲಿ: ಸದ್ಯ ಕರೋನಾ ವೈರಸ್ ವಿಶ್ವಾದ್ಯಂತ ಕೋಲಾಹಲವನ್ನೇ ಸೃಷ್ಟಿಸಿದೆ. ದೇಶದಲ್ಲಿ ಸುಮಾರು ಒಂಬತ್ತು ಸಾವಿರ ಕರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಇದೇ ಸಮಯದಲ್ಲಿ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು ಮತ್ತು ಭಾರತದ ಪ್ರೆಸ್ ಕೌನ್ಸಿಲ್‌ನ ಮಾಜಿ ಅಧ್ಯಕ್ಷರು ಆಗಿದ್ದ ಮಾರ್ಕಂಡೆಯ್ ಕಾಟ್ಜು ಅವರು ಟ್ವೀಟ್ ಮಾಡಿ ದೇವರ ಅಸ್ತಿತ್ವವನ್ನೇ ಪ್ರಶ್ನಿಸಿದ್ದಾರೆ.
ಕಾಟ್ಜು ಅವರು ಮಾಡಿರುವ ಈ ಟ್ವೀಟ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. "ದೇವರು ಇದ್ದರೆ, ಅವನು ಕರೋನಾವನ್ನು ಏಕೆ ತೊಡೆದುಹಾಕುವುದಿಲ್ಲ" ಎಂದು ಟ್ವೀಟ್ ಮಾಡುವ ಮೂಲಕ ಮಾರ್ಕಂಡೆಯ್ ಕಾಟ್ಜು ಪ್ರಶ್ನಿಸಿದ್ದಾರೆ. ಅವರ ಟ್ವೀಟ್‌ಗೆ ಅನೇಕ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಲಾಕ್ ಡೌನ್ ಅವಧಿ ವಿಸ್ತರಣೆಯನ್ನು ವಿರೋಧಿಸಿ ಈ ಹಿಂದೆಯೂ ಕೂಡ ಕಾಟ್ಜು ಟ್ವೀಟ್ ಮಾಡಿದ್ದರು ಎಂಬುದು ಇಲ್ಲಿ ಗಮನಾರ್ಹ.
If there is a God why does he not eradicate corona ?
— Markandey Katju (@mkatju) April 13, 2020
ಕೊರೊನಾ ಪ್ರಕೋಪ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ
ದೇಶದಲ್ಲಿ ಲಾಕ್ ಡೌನ್ ಮುಕ್ತಾಯಗೊಳ್ಳಲು ಕೇವಲ ಒಂದು ದಿನ ಮಾತ್ರ ಉಳಿದಿದೆ. ದೇಶಾದ್ಯಂತ ಇದುವರೆಗೆ ಸುಮಾರು 8447 ಜನರು ಕರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಇದೇ ವೇಳೆ ಸುಮಾರು 273 ಜನರು ಈ ಮಾರಕ ವೈರಸ್ ದಾಳಿಗೆ ತುತ್ತಾಗಿದ್ದಾರೆ . 800ಕ್ಕೂ ಅಧಿಕ ಜನರು ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಮಾರಕ ವೈರಸ್ ದಾಳಿಗೆ ಅತಿ ಹೆಚ್ಚು ಜನರು ಬಲಿಯಾಗಿದ್ದಾರೆ.. ದೇಶಾದ್ಯಂತ ಸುಮಾರು 90 ವೈದ್ಯರು ಮತ್ತು ಪ್ಯಾರಾ ವೈದ್ಯಕೀಯ ಸಿಬ್ಬಂದಿಗಳು ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.