ನಾಳೆ ಮಧ್ಯಾಹ್ನ 3 ಗಂಟೆಗೆ ICSE, ISC ಪರೀಕ್ಷೆಯ ಫಲಿತಾಂಶ ಪ್ರಕಟ

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್ಸಿಇ) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ನೋಟಿಸ್‌ನಲ್ಲಿ ಫಲಿತಾಂಶದ ದಿನಾಂಕವನ್ನು ದೃಢಪಡಿಸಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.

Last Updated : Jul 9, 2020, 11:22 PM IST
ನಾಳೆ ಮಧ್ಯಾಹ್ನ 3 ಗಂಟೆಗೆ ICSE, ISC ಪರೀಕ್ಷೆಯ ಫಲಿತಾಂಶ ಪ್ರಕಟ title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್ಸಿಇ) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ನೋಟಿಸ್‌ನಲ್ಲಿ ಫಲಿತಾಂಶದ ದಿನಾಂಕವನ್ನು ದೃಢಪಡಿಸಿದೆ. ನಾಳೆ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.

ಐಸಿಎಸ್‌ಇ (10 ನೇ ತರಗತಿ) ಮತ್ತು ಐಎಸ್‌ಸಿ (12 ನೇ ತರಗತಿ) ಪರೀಕ್ಷೆಗಳ ಫಲಿತಾಂಶಗಳನ್ನು ಕೌನ್ಸಿಲ್‌ನ 'ಕರಿಯರ್ಸ್' ಪೋರ್ಟಲ್, ಕೌನ್ಸಿಲ್‌ನ ಮುಖ್ಯ ವೆಬ್‌ಸೈಟ್ ಮತ್ತು ಎಸ್‌ಎಂಎಸ್ ಮೂಲಕ ಬಿಡುಗಡೆ ಮಾಡಲಾಗುತ್ತದೆ.

CISCE ಗೆ ಸಂಯೋಜಿತವಾಗಿರುವ ಶಾಲೆಗಳು ಪ್ರಾಂಶುಪಾಲರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ CAREERS ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೂಲಕ ತಮ್ಮ ವಿದ್ಯಾರ್ಥಿಗಳ ಫಲಿತಾಂಶಗಳನ್ನು ತಿಳಿಯಬಹುದಾಗಿದೆ.

ಕೌನ್ಸಿಲ್ನ ಅಧಿಕೃತ ವೆಬ್‌ಸೈಟ್ 'cisce.org' ಮತ್ತು 'results.cisce.org' ಗೆ ಲಾಗ್ ಇನ್ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಫಲಿತಾಂಶವು SMS ನಲ್ಲಿಯೂ ಲಭ್ಯವಿರುತ್ತದೆ.

ಎಸ್‌ಎಂಎಸ್‌ನಲ್ಲಿ ಫಲಿತಾಂಶಗಳನ್ನು ಪಡೆಯಲು, ವಿದ್ಯಾರ್ಥಿಗಳು ತಮ್ಮ ವಿಶಿಷ್ಟ ಐಡಿಯನ್ನು ಈ ಕೆಳಗಿನ ಸ್ವರೂಪದಲ್ಲಿ 09248082883 ಗೆ ಕಳುಹಿಸಬೇಕಾಗುತ್ತದೆ:'ICSE/ISC (Unique ID)

Trending News