ಮೂರು ದಿನಗಳ ಪಶ್ಚಿಮ ಏಷ್ಯಾ ರಾಷ್ಟ್ರಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರದ ಕಟ್ಟಡಗಳು, ಸೇತುವೆಗಳು ತ್ರಿವರ್ಣದಿಂದ ಕಂಗೊಳಿಸುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಭೇಟಿ ನೀಡಿದ ಏಕೈಕ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಎರಡನೇ ಬಾರಿಗೆ ಗಲ್ಫ್ ರಾಜ್ಯಕ್ಕೆ ತೆರಳಲು ಸಿದ್ಧರಾಗಿದ್ದಾರೆ.
When pictures speak louder than words pic.twitter.com/5JP3EVvte1
— IndAmbUAE (@navdeepsuri) February 10, 2018
ಈ ಹಿನ್ನಲೆಯಲ್ಲಿ ಭಾರತೀಯ ತ್ರಿವರ್ಣದ ಬೃಹತ್ ಚಿತ್ರಣಗಳು ಯುಎಇಯ ಎರಡು ದೊಡ್ಡ ನಗರಗಳ ಸಿಟಿ ಸ್ಕೇಪ್ಸ್ನಲ್ಲಿ ಪ್ರಾಬಲ್ಯ ಮೆರೆದಿವೆ. ದುಬೈ ಆಕರ್ಷಣೀಯ ಕೇಂದ್ರ, ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾ ತ್ರಿವರ್ಣ ಧ್ವಜ ಬಣ್ಣದಿಂದ ಕಂಗೊಳಿಸುವುದರೊಂದಿಗೆ, 828 ಮೀಟರ್ ಎತ್ತರದಲ್ಲಿ ಭಾರತೀಯ ಧ್ವಜದ ಅತಿದೊಡ್ಡ ಪ್ರದರ್ಶನವಾಗಿದೆ.
ಬುರ್ಜ್ ಖಲೀಫಾ ಮೋದಿ ಸ್ವಾಗತಕ್ಕಾಗಿ ದುಬೈನಲ್ಲಿ ಅಲಂಕೃತಗೊಂಡ ಏಕೈಕ ಕಟ್ಟಡವಾಗಿತ್ತು. ನಗರದ ಇತ್ತೀಚಿನ ಆಕರ್ಷಣೆಯಾದ ದುಬೈ ಫ್ರೇಮ್ ಕೂಡಾ ಅದರ ಚೌಕಟ್ಟಿನ ಮೇಲೆ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿತು.
ದುಬೈ ಫ್ರೇಮ್ ಒಂದು ರಚನೆಯಾಗಿದ್ದು, 'ಗ್ರಹದ ಮೇಲಿನ ದೊಡ್ಡ ಚಿತ್ರ ಚೌಕಟ್ಟು' ಎಂದು ಕರೆಯಲ್ಪಡುತ್ತದೆ. ಅದು 150 ಮೀಟರ್ ಎತ್ತರದ ಮತ್ತು 105 ಮೀಟರ್ ಅಗಲದ, ಮಧ್ಯದಲ್ಲಿ ಏನೂ ಇಲ್ಲದ ಒಂದು ಸಾಮಾನ್ಯ ರಚನೆಯಾಗಿದ್ದು, ಒಂದು ಬದಿಯಿಂದ ನೋಡಿದರೆ ತ್ರಿವರ್ಣ-ಹೊದಿಕೆಯ ಬುರ್ಜ್ ಖಲೀಫಾ ಸೇರಿದಂತೆ ದುಬೈನ ಮಿನುಗುತ್ತಿರುವ ಮತ್ತು ಎತ್ತರದ ಗಗನಚುಂಬಿಗಳ ಒಂದು ನೋಟ ದೊರೆಯುತ್ತದೆ.
ದುಬೈ ಮಾತ್ರವಲ್ಲ, ಯುಎಇ ರಾಜಧಾನಿ ಅಬುಧಾಬಿ ಕೂಡ ಭಾರತೀಯ ಪ್ರಧಾನಿ ಭೇಟಿಗೆ ಅಲಂಕೃತಗೊಂಡಿದೆ. ನಗರದ ಪ್ರಮುಖ ಕಟ್ಟಡವಾದ ಅಬುದಾಬಿ ನ್ಯಾಷನಲ್ ಆಯಿಲ್ ಕಂಪನಿ(ADNOC) ಪ್ರಧಾನ ಕಚೇರಿ ಕಟ್ಟಡವೂ ತ್ರಿವರ್ಣದಿಂದ ಕಂಗೊಳಿಸುತ್ತಿದೆ.
الوان العلم الهندي تزين #جسر_الشيخ_زايد #في_أبوظبي ترحيباً بزيارة معالي رئيس الوزراء الهندي لدولة #الإمارات العربية المتحدة@IndembAbuDhabi pic.twitter.com/1gyuqnJhUg
— بلدية مدينة أبوظبي (@AbuDhabi_ADM) February 10, 2018