‘ನೇಮಕಾತಿಗಾಗಿ ನನಗೆ ಲಂಚ ನೀಡಲಾಗಿದೆ’! ಅಸೆಂಬ್ಲಿಯಲ್ಲಿ ನೋಟುಗಳ ಬಂಡಲ್ ತೋರಿಸಿದ ಆಪ್ ಶಾಸಕ!

AAP MLA Mahender Goyal shows wads of cash: ರೋಹಿಣಿಯ ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನರ್ಸಿಂಗ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂದು ಮಹೇಂದ್ರ ಗೋಯಲ್ ತಿಳಿಸಿದ್ದಾರೆ.

Written by - Puttaraj K Alur | Last Updated : Jan 18, 2023, 03:29 PM IST
  • ದೆಹಲಿಯ ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನರ್ಸಿಂಗ್ ಸೇರಿ ಹಲವು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ
  • ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮೌನವಾಗಿರಲು ತಮಗೆ ಲಂಚ ನೀಡಲು ಪ್ರಯತ್ನಿಸಲಾಗಿದೆ
  • ದೆಹಲಿ ಅಸೆಂಬ್ಲಿಯಲ್ಲಿ ನೋಟುಗಳ ಬಂಡಲ್ ಪ್ರದರ್ಶಿಸಿದ ಆಪ್ ಶಾಸಕ ಮಹೇಂದ್ರ ಗೋಯಲ್
‘ನೇಮಕಾತಿಗಾಗಿ ನನಗೆ ಲಂಚ ನೀಡಲಾಗಿದೆ’! ಅಸೆಂಬ್ಲಿಯಲ್ಲಿ ನೋಟುಗಳ ಬಂಡಲ್ ತೋರಿಸಿದ ಆಪ್ ಶಾಸಕ! title=
ಅಸೆಂಬ್ಲಿಯಲ್ಲಿ ನೋಟುಗಳ ಬಂಡಲ್ ಪ್ರದರ್ಶನ!

ನವದೆಹಲಿ: ದೆಹಲಿಯ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಾರಿ ಆಸ್ಪತ್ರೆಯಲ್ಲಿ ತಮಗೆ ಲಂಚದ ಆಮಿಷ ಒಡ್ಡಿದ್ದಾರೆಂದು ಅಸೆಂಬ್ಲಿಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಮಹೇಂದ್ರ ಗೋಯಲ್ ನೋಟಿನ ಬಂಡಲ್‍ಗಳನ್ನು ಪ್ರದರ್ಶಿಸಿದ್ದಾರೆ. ಖಾಸಗಿ ಗುತ್ತಿಗೆದಾರರೊಬ್ಬರು ಈ ಲಂಚವನ್ನು ನೀಡಲು ಪ್ರಯತ್ನಿಸಿದ್ದಾರೆಂದು ಆರೋಪಿಸಲಾಗಿದೆ.  

ರೋಹಿಣಿಯ ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನರ್ಸಿಂಗ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿದೆ ಎಂದು ಮಹೇಂದ್ರ ಗೋಯಲ್ ತಿಳಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಬಗ್ಗೆ ದೂರಿದ ಗೋಯಲ್, ‘ಈ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮೌನವಾಗಿರಲು ತನಗೆ ಲಂಚ ನೀಡಲು ಪ್ರಯತ್ನಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

ಈಗ ಕೆಲವು ಕೆಲವು ದೊಡ್ಡ ದೊಡ್ಡ ವ್ಯಕ್ತಿಗಳಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ನನಗೆ ಯಾರ ಹೆದರಿಕೆಯೂ ಇಲ್ಲ, ನೇಮಕಾತಿಯಲ್ಲಿ ಅಕ್ರಮವೆಸಗಿರುವ ಖಾಸಗಿ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಗೋಯೆಲ್ ಹೇಳುವ ಪ್ರಕಾರ, ಈ ಗಂಭೀರ ವಿಷಯದ ಬಗ್ಗೆ ಡಿಸಿಪಿ, ಮುಖ್ಯ ಕಾರ್ಯದರ್ಶಿ ಮತ್ತು ಲೆಫ್ಟಿನೆಂಟ್ ಗವರ್ನರ್‌ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: ಮಗನ ಸಾವು ನೋಡಲಾರೆ ಎಂದು 22ನೇ ಮಹಡಿಯಿಂದ ಜಿಗಿದು ಮಹಿಳೆ ಸಾವು!

ಕೆಲಸ ಸಿಕ್ಕರೂ ನನಗೆ ಹಣ ಸಿಗುತ್ತಿಲ್ಲ

ಆಸ್ಪತ್ರೆಯಲ್ಲಿನ ನಿಯಮಗಳ ಪ್ರಕಾರ ಶೇ.80ರಷ್ಟು ಹುದ್ದೆಗಳಲ್ಲಿ ಹಳೆ ನೌಕರರನ್ನೇ ಮುಂದುವರಿಸುವ ಕಾನೂನು ಇದೆ. ಆದರೆ ಇದು ಆಗುವುದಿಲ್ಲ. ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕೆಲಸ ಖಾತ್ರಿಯಾದ ನಂತರವೂ ಜನರಿಗೆ ಹಣ ಸಿಗುತ್ತಿಲ್ಲ. ಗುತ್ತಿಗೆದಾರರು ಈಗಾಗಲೇ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿದರು.

ಈ ವಿಷಯವಾಗಿ ನೌಕರರು ಧರಣಿ ನಡೆಸಿದಾಗ ಅವರನ್ನು ಥಳಿಸಲಾಯಿತು ಎಂದು ಎಎಪಿ ಶಾಸಕ ರಿಥಾಲಾ ಮೊಹಿಂದರ್ ಗೋಯಲ್ ಹೇಳಿದ್ದಾರೆ. ಆದರೆ, ಸ್ಪೀಕರ್ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನೇಮಕಾತಿ ಅಕ್ರಮ ಮತ್ತು ಲಂಚದ ಆಮಿಷ ಕುರಿತು ದೆಹಲಿ ವಿಧಾನಸಭೆಯೊಳಗೆ ಕೋಲಾಹಲ ಉಂಟಾಯಿತು. ನಂತರ ನಾಲ್ವರು ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳ ಸಹಾಯದಿಂದ ಸದನದಿಂದ ಹೊರಹಾಕಲಾಯಿತು. ಬಿಜೆಪಿ ಶಾಸಕರಾದ ಅಭಯ್ ವರ್ಮಾ, ಅನಿಲ್ ವಾಜಪೇಯಿ, ಅಜಯ್ ಮಹಾವಾರ್ ಮತ್ತು ಒಪಿ ಶರ್ಮಾ ಅವರನ್ನು ಸದನದಿಂದ ಹೊರಹಾಕಲಾಗಿತ್ತು.

ಇದನ್ನೂ ಓದಿ: COVID-19 ಲಸಿಕೆಯ ಮಾಧ್ಯಮ ವರದಿಗೆ ಕೇಂದ್ರ ಸಚಿವಾಲಯ ಸ್ಪಷ್ಟನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News