ತ್ರಿಪುರಾ ಫಲಿತಾಂಶದಿಂದ ವಾಮಪಂಥ ಮುಕ್ತವಾದ ಭಾರತ-ಬಿಜೆಪಿ

    

Last Updated : Mar 3, 2018, 05:15 PM IST
ತ್ರಿಪುರಾ ಫಲಿತಾಂಶದಿಂದ ವಾಮಪಂಥ ಮುಕ್ತವಾದ ಭಾರತ-ಬಿಜೆಪಿ title=

ಪಾಟ್ನಾ: ತ್ರಿಪುರಾದಲ್ಲಿ ಎಡಪಕ್ಷಗಳನ್ನು ಸೋಲಿಸುವುದರ ಮೂಲಕ ಬಿಜೆಪಿಯು ವಾಮ ಪಂಥ ಮುಕ್ತ ಭಾರತದ ಉದ್ದೇಶವನ್ನು ಸಾಧಿಸಿದೆ ಎಂದು ಬಿಜೆಪಿ ಪ್ರತಿಕ್ರಯಿಸಿದೆ.

ತ್ರಿಪುರಾದಲ್ಲಿ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಬಹುಮತಕ್ಕೆ ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್" ಈಗ ಪೂರ್ಣ ಪ್ರಮಾಣದಲ್ಲಿ ಈಶಾನ್ಯ ಭಾರತವು ಬಿಜೆಪಿಯ ಜೊತೆಗಿದೆ. ಪ್ರಾರಂಭದಲ್ಲಿ ನಾವು ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುತ್ತಿದ್ದೆವು, ಈಗ ನಾವು ವಾಮಪಂಥ ಮುಕ್ತ ಭಾರತವು ಹೌದು ಎಂದು ಹೇಳಬಹುದು ಎಂದು ಪ್ರಸಾದ್ ತಿಳಿಸಿದ್ದಾರೆ.

ಇನ್ನು ಮುಂದುವರೆದು ತ್ರಿಪುರಾದ ಗೆಲುವು ಭಾರತದಲ್ಲಿನ ಅಭಿವೃದ್ದಿ ರಾಜಕಾರಣಕ್ಕೆ ಸಂಧ ಗೆಲುವು ಎಂದು ಪ್ರತಿಕ್ರಯಿಸಿದ ಪ್ರಸಾದ, ಎಡಪಕ್ಷಗಳು ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ,  ಈಗ ತ್ರಿಪುರಾದಲ್ಲಿ ಸೋಲನ್ನು ಅನುಭವಿಸಿವೆ. ಮುಂದೆ  ಕೇರಳದ ರಾಜಕೀಯದ ಮೇಲೆಯೂ ಈ ಫಲಿತಾಂಶ ಪರಿಣಾಮ ಬೀರಬಲ್ಲದು" ಎಂದರು.

Trending News