ಕರ್ತಾರಪುರ್ ಕಾರಿಡಾರ್: ಮೋದಿಗೆ 'ಮುನ್ನಾಭಾಯ್ ಎಂಬಿಬಿಎಸ್' ಶೈಲಿಯ ಅಪ್ಪುಗೆ ಎಂದ ಸಿಧು..!

ನವಜೋತ್ ಸಿಂಗ್ ಸಿಧು ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕರ್ತಾರ್‌ಪುರ ಕಾರಿಡಾರ್ ಯೋಜನೆಯನ್ನು ಮುಕ್ತಗೊಳಿಸಿದ್ದಕ್ಕೆ ವಿಭಿನ್ನ ಶೈಲಿಯ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದೇ ವೇಳೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

Last Updated : Nov 9, 2019, 08:19 PM IST
ಕರ್ತಾರಪುರ್ ಕಾರಿಡಾರ್: ಮೋದಿಗೆ 'ಮುನ್ನಾಭಾಯ್ ಎಂಬಿಬಿಎಸ್' ಶೈಲಿಯ ಅಪ್ಪುಗೆ ಎಂದ ಸಿಧು..! title=
Photo courtesy: ANI

ನವದೆಹಲಿ:  ನವಜೋತ್ ಸಿಂಗ್ ಸಿಧು ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕರ್ತಾರ್‌ಪುರ ಕಾರಿಡಾರ್ ಯೋಜನೆಯನ್ನು ಮುಕ್ತಗೊಳಿಸಿದ್ದಕ್ಕೆ ವಿಭಿನ್ನ ಶೈಲಿಯ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದೇ ವೇಳೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

"ನಾನು ಮೋದಿಜಿಗೆ ಧನ್ಯವಾದ ಹೇಳುತ್ತಿದ್ದೇನೆ...ನಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಪರವಾಗಿಲ್ಲ ...ನನ್ನ ಜೀವನ ಗಾಂಧಿ ಕುಟುಂಬಕ್ಕೆ ಸಮರ್ಪಿತವಾಗಿದ್ದರೂ ಪರವಾಗಿಲ್ಲ ... ಇದಕ್ಕಾಗಿ ನಾನು ನಿಮಗೆ ಮುನ್ನಾಭಾಯ್ ಎಂಬಿಬಿಎಸ್ ಶೈಲಿಯ ಅಪ್ಪುಗೆಯನ್ನು ಕಳುಹಿಸುತ್ತಿದ್ದೇನೆ, ಮೋದಿ ಸಾಹೇಬ್ 'ಎಂದು ಸಿಧು ಹೇಳಿದರು.

ಇದೇ ವೇಳೆ ಕರ್ತಾರ್ಪುರ್ ಕಾರಿಡಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ನವಜೋತ್ ಸಿಂಗ್ ಸಿಧು 'ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಹೃದಯಗಳ ರಾಜ ಎಂದು ಕರೆದರು. ಸಿಕಂದರ್ (ಅಲೆಕ್ಸಾಂಡರ್) ಭಯದಿಂದ ಜಗತ್ತನ್ನು ಗೆದ್ದರು, ಆದರೆ ನೀವು ಪ್ರಪಂಚದಾದ್ಯಂತ ಎಲ್ಲ ಹೃದಯಗಳನ್ನು ಗೆದ್ದಿದ್ದೀರಿ ಎಂದರು.

ಇನ್ನು ಮುಂದುವರೆದು "ವಿಭಜನೆಯ ಸಮಯದಲ್ಲಿ ಪಂಜಾಬಿನ ಎರಡೂ ಕಡೆಯವರು ರಕ್ತದೋಕುಳಿಯನ್ನು ನೋಡಿದ್ದಾರೆ. ನೀವು(ಇಮ್ರಾನ್ ಖಾನ್)  ಮತ್ತು ಮೋದಿ ಕರ್ತಾರ್ ಪುರ ಕಾರ್ಯದ ಮೂಲಕ ಜನರ ಗಾಯಗಳಿಗೆ ಮುಲಾಮುವನ್ನು ಅನ್ವಯಿಸಿದ್ದೀರಿ' ಎಂದು ಹೇಳಿದರು.

Trending News