ಹುದ್ದೆ ತ್ಯಜಿಸಲು ಸಿದ್ಧ ಎಂದ ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೊ

ಜಲಂಧರ್'ನ ರೋಮನ್ ಕ್ಯಾಥೊಲಿಕ್ ಬಿಷಪ್ ತಾತ್ಕಾಲಿಕವಾಗಿ ಹುದ್ದೆ ತ್ಯಜಿಸುವ ಬಗ್ಗೆ ಪೋಪ್ ಫ್ರಾನ್ಸಿಸ್'ಗೆ ಪತ್ರ ಬರೆದಿದ್ದಾರೆ.

Last Updated : Sep 17, 2018, 12:30 PM IST
ಹುದ್ದೆ ತ್ಯಜಿಸಲು ಸಿದ್ಧ ಎಂದ ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೊ title=

ಜಲಂಧರ್: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಜಲಂಧರ್'ನ ರೋಮನ್ ಕ್ಯಾಥೊಲಿಕ್ ಬಿಷಪ್ ತಾತ್ಕಾಲಿಕವಾಗಿ ಹುದ್ದೆ ತ್ಯಜಿಸುವ ಬಗ್ಗೆ ಪೋಪ್ ಫ್ರಾನ್ಸಿಸ್'ಗೆ ಪತ್ರ ಬರೆದಿದ್ದಾರೆ.

"ಬಿಷಪ್ ಫ್ರಾಂಕೊ ಮುಲ್ಲಕಲ್ ಅವರು ಸೆಪ್ಟಂಬರ್ 16ರಂದು ಪೋಪ್'ಗೆ ಪತ್ರ ಬರೆದಿದ್ದು, ತಾತ್ಕಾಲಿಕವಾಗಿ  ಡಿಯೋಸಿಸ್ನ ಜವಾಬ್ದಾರಿಗಳಿಂದ ಕೆಳಗಿಳಿಯಲು ಸಿದ್ಧವಾಗಿದ್ದು, ಅದಕ್ಕೆ ಅನುಮತಿ ನೀಡಬೇಕೆಂದು ಕೋರಿದ್ದಾರೆ" ಎಂದು ಜಲಂಧರ್ ಡಿಯೋಸಿಸ್ ಹೇಳಿಕೆಯಲ್ಲಿ ತಿಳಿಸಿದೆ.

ಬಿಷಪ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಹಲವರು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಬಿಷಪ್ ಪ್ಫ್ರಾಕೋ ಅವರು ಮುಲ್ಲಕಲ್ ಚರ್ಚ್ ಜವಾಬ್ದಾರಿಯನ್ನು ಫಾದರ್ ಮ್ಯಾಥ್ಯೂ ಕೊಕ್ಕಂಡ ಅವರಿಗೆ ಹಸ್ತಾಂತರಿಸಿದ್ದರು. ಅಲ್ಲದೆ, ಈ ಪ್ರಕರಣದ ಬಗ್ಗೆ ಸೆಪ್ಟೆಂಬರ್ 19 ರಂದು ಬಿಷಪ್ ಫ್ರಾಂಕೊ ತನಿಖಾ ತಂಡದ ಮುಂದೆ ಹಾಜರಾಗಬೇಕಿದೆ.

ಬಿಷಪ್ ಮುಲ್ಲಕಲ್ ಅವರು 2014 ರಿಂದ 2016ರ ವರೆಗೆ ಅನೇಕ ಬಾರಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಅನೈಸರ್ಗಿಕ ಸೆಕ್ಸ್ ನಡೆಸಿದ್ದಾರೆ ಎಂದು 46 ವರ್ಷದ ಬ್ರಹ್ಮಚಾರಿಣಿ ಜಲಂಧರ್​ ಬಿಷಪ್​ ವಿರುದ್ಧ ಈ ಹಿಂದೆಯೇ ದೂರು ನೀಡಿದ್ದರು. ಈ ಆರೋಪವನ್ನು ಬಿಷಪ್​ ತಳ್ಳಿಹಾಕಿದ್ದಾರೆ. 
 

Trending News