ನವದೆಹಲಿ : ಪರೋಕ್ಷವಾಗಿ ನಾನು ಕೂಡ ಸಿದ್ಧಾರ್ಥ ಅವರ ಸಾಲಿಗೆ ಸೇರುತ್ತೇನೆ. ನನ್ನ ಸ್ಥಿತಿಯೂ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸ್ಥಿತಿಯಂತೆ ಇದೆ ಎಂದು ಮದ್ಯದ ದೊರೆ ವಿಜಯ್ ಮಲ್ಯ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ತನಿಖಾ ಸಂಸ್ಥೆ ಮತ್ತು ಬ್ಯಾಂಕುಗಳು ನನಗೂ ಕಿರುಕುಳ ನೀಡುತ್ತಿವೆ:
ಕೆಫೆ ಕಾಫಿ ಡೇ ವಿ.ಜಿ. ಸಿದ್ಧಾರ್ಥ್ ಸಾವಿನ ಕುರಿತು ಟ್ವೀಟ್ ಮಾಡಿರುವ, ಭಾರತೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ, ವಿದೇಶದಲ್ಲಿರುವ ವಿಜಯ್ ಮಲ್ಯ, ಪರೋಕ್ಷವಾಗಿ ನಾನು ಕೂಡ ಸಿದ್ಧಾರ್ಥ ಅವರ ಸಾಲಿಗೆ ಸೇರುತ್ತೇನೆ. ತನಿಖಾ ಸಂಸ್ಥೆ ಮತ್ತು ಬ್ಯಾಂಕುಗಳು ನನಗೂ ಕಿರುಕುಳ ನೀಡುತ್ತಿವೆ ಎಂದು ಬರೆದುಕೊಂಡಿದ್ದಾರೆ.
ವಿ.ಜಿ. ಸಿದ್ಧಾರ್ಥ ಉತ್ತಮ ಮನುಷ್ಯ ಹಾಗೂ ಅದ್ಭುತ ಉದ್ಯಮಿಯಾಗಿದ್ದರು. ಅವರ ಪತ್ರವನ್ನು ನೋಡಿ ನನಗೆ ಆಘಾತವಾಗಿದೆ. ಸರ್ಕಾರಿ ಏಜೆನ್ಸಿಗಳು ಮತ್ತು ಬ್ಯಾಂಕುಗಳು ಯಾರನ್ನಾದರೂ ಹತಾಶೆಗೆ ದೂಡಬಹುದು. ತನಿಖಾ ಸಂಸ್ಥೆ ಮತ್ತು ಬ್ಯಾಂಕುಗಳು ನನಗೂ ಕಿರುಕುಳ ನೀಡುತ್ತಿವೆ. ಸಾಲವನ್ನು ಪೂರ್ಣ ಮರುಪಾವತಿ ಮಾಡುತ್ತೇನೆ ಎಂದಿದ್ದರು ಕೂಡ ಅವರು ನನಗೆ ಏನು ಮಾಡುತ್ತಿದ್ದಾರೆಂದು ನೋಡಿ. ಇದೊಂದು ಕೆಟ್ಟ ಮತ್ತು ಪಟ್ಟುಹಿಡಿದ ವರ್ತನೆಯಾಗಿದೆ ಎಂದು ಸರ್ಕಾರದ ತನಿಖಾ ಸಂಸ್ಥೆ, ಬ್ಯಾಂಕ್ಗಳ ವಿರುದ್ಧ ವಿಜಯ್ ಮಲ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ, ಸರ್ಕಾರ ಮತ್ತು ಬ್ಯಾಂಕುಗಳು ಸಾಲಗಾರರಿಗೆ ತಮ್ಮ ಸಾಲವನ್ನು ಮರುಪಾವತಿಸಲು ಸಹಾಯ ಮಾಡುತ್ತವೆ. ನನ್ನ ವಿಷಯದಲ್ಲಿ ಅವರು ನನ್ನ ಸಾಲವನ್ನು ಮರುಪಾವತಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ತಡೆಯುತ್ತಿದ್ದಾರೆ ಮತ್ತು ನನ್ನ ಸ್ವತ್ತುಗಳಿಗಾಗಿ ಸ್ಪರ್ಧಿಸುತ್ತಿದ್ದಾರೆ. ಪ್ರೈಮಾ ಫೇಸಿ ಕ್ರಿಮಿನಲ್ ಪ್ರಕರಣವು ಮೇಲ್ಮನವಿಗಾಗಿ ಕಾಯುತ್ತದೆ ಎಂದು ಮಲ್ಯ ಟ್ವೀಟ್ ನಲ್ಲಿ ತಿಳಿಸಿದ್ದಾರೆ.