ಅಸ್ಸಾಂ: Baghjan Oil Well ಬಳಿ ಭಾರಿ ವಿಸ್ಫೋಟ, ಮೂವರಿಗೆ ಗಂಭೀರ ಗಾಯ

ಅಸ್ಸಾಂನ ಬಾಗ್ಜನ್ ತೈಲ ಬಾವಿಸಂಖ್ಯೆ 5ರ  ಬಳಿ ಭಾರಿ ಸ್ಫೋಟ ಸಂಭವಿಸಿದೆ. ಜೂನ್ 9 ರಂದು ಅನಿಲ ಸೋರಿಕೆಯಾದ ನಂತರ ಬೆಂಕಿ ಕಾಣಿಸಿಕೊಂಡಿತ್ತು. ಅಧಿಕಾರಿಯೊಬ್ಬರು ಈ ಸ್ಫೋಟದ ಬಗ್ಗೆ ಮಾಹಿತಿ ನೀಡಿದ್ದಾರೆ.

Last Updated : Jul 22, 2020, 04:41 PM IST
ಅಸ್ಸಾಂ: Baghjan Oil Well ಬಳಿ ಭಾರಿ ವಿಸ್ಫೋಟ, ಮೂವರಿಗೆ ಗಂಭೀರ ಗಾಯ title=

ಗುವಾಹಾಟಿ:ಆಯಿಲ್ ಇಂಡಿಯಾ ಲಿಮಿಟೆಡ್‌ ಗೆ ಸೇರಿರುವ ಮತ್ತು ಅಸ್ಸಾಂನಲ್ಲಿರುವ ಒಂದು ತೈಲ ಬಾವಿಯ ಬಳಿ ದೊಡ್ಡ ಸ್ಫೋಟ ಸಂಭವಿಸಿದೆ. ಕಳೆದ ತಿಂಗಳು ಜೂನ್ 9 ರಂದು ಅನಿಲ ಸೋರಿಕೆಯಾದ ನಂತರ ಇಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಧಿಕಾರಿಯೊಬ್ಬರು ಇದನ್ನು ಖಚಿತಪಡಿಸಿದ್ದಾರೆ. ಸ್ಫೋಟದಲ್ಲಿ ಇಬ್ಬರು ವಿದೇಶಿ ತಜ್ಞರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅಸ್ಸಾಂನ ತೀನ್ಸುಖಿಯಾ ಜಿಲ್ಲೆಯಲ್ಲಿರುವ ಸಾರ್ವಜನಿಕ ವಲಯದ ಕಂಪನಿ ಆಯಿಲ್ ಇಂಡಿಯಾಗೆ ಸೇರಿದ ಬಾಗಜನ್ ವೆಲ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಅವಘಡದಲ್ಲಿ ಇಬ್ಬರು ದುರ್ಮರಣ ಹೊಂದಿದ್ದರು. ಕಳೆದ 15 ದಿನಗಳಿಂದ ಇಲ್ಲಿ ನಿರಂತರ ಅನಿಲ ಸೋರಿಕೆಯಾಗುತ್ತಿತ್ತು. ಈ ಅನಿಲ ಸೋರಿಕೆಯನ್ನು ತಡೆಯಲು ವಿದೇಶದಿಂದ ತಜ್ಞರನ್ನು ಕರೆಯಿಸಕೊಳ್ಳಲಾಗಿತ್ತು. ಘಟನೆ ನಡೆದ ವೇಳೆ ಈ ಮೂವರು ಸ್ಥಳದಲ್ಲಿಯೇ ಇದ್ದು, ಅವರಿಗೆ ತೀವ್ರವಾದ ಗಾಯಗಳಾಗಿವೆ ಎನ್ನಲಾಗಿದೆ. ಮೂವರನ್ನು ದಿಬ್ರುಗಡ್ ಆಸ್ಪತ್ರೆಗೆ ಸಾಗಿಸಲಾಗಿದೆ. 

ಈ ಕುರಿತು PTI ಸುದ್ದಿಸಂಸ್ಥೆಗೆ ಹೇಳಿಕೆ ನೀಡಿರುವ ಆಯಿಲ್ ಇಂಡಿಯಾ ಲಿಮಿಟೆಡ್ ನ ಸಿನಿಯರ್ ಮ್ಯಾನೇಜರ್ (ಪಬ್ಲಿಕ್ ಅಫೇರ್), ಜಯನತಾ ಬೋರ್ಮುಡೋಯಿ, ಗಾಯಗೊಂಡ ಮೂವರು ತಜ್ಞರನ್ನು ಅಂತೋನಿ ಸ್ಟೀವನ್ ರೆನೊಲ್ದ್ಸ್, ಡೌ ಡಲ್ಲಾಸ್ ಹಾಗೂ ಕ್ರೈಗ್ ನೀಲ್ ಡಂಕನ್ ಎಂದು ಗುರುತಿಸಲಾಗಿದೆ ಎಂದಿದ್ದಾರೆ. 

ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಬೆಂಕಿ ನಂದಿಸುವ ಕಾರ್ಯಾಚರಣೆಗೆ ವಿರಾಮ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಕಳೆದ ಸುಮಾರು 27 ದಿನಗಳಿಂದ ಬಾವಿ ಸಂಖ್ಯೆ 5 ನಿರಂತರವಾಗಿ ಅನಿಲ ಹೊರಸೂಸುತ್ತಿದ್ದು, ಜೂನ್ 9 ರಂದು ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಬೆಂಕಿ ನಂದಿಸಲು ಮುಂದಾದ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದರು.

Trending News