UAN ನಂಬರ್ ಇಲ್ಲದಿದ್ದರೂ PF ಹಣ ಡ್ರಾ ಮಾಡಬಹುದು! ಹೇಗೆ ಗೊತ್ತಾ?

ಪ್ರತಿಯೊಬ್ಬ ನೌಕರನೂ ತನ್ನ ಪಿಎಫ್ ಖಾತೆಯಲ್ಲಿರುವ ಹಣವನ್ನು ಪೂರ್ಣ ಅಥವಾ ಭಾಗಶಃ ಡ್ರಾ ಮಾಡಿಕೊಳ್ಳಲು ಅವಕಾಶವಿದೆ. ನೀವು ಸೇವೆಯಿಂದ ನಿವೃತ್ತಿಯಾದ ಸಂದರ್ಭದಲ್ಲಿ ಅಥವಾ 2 ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಗಳಾಗಿದ್ದ ಸಂದರ್ಭದಲ್ಲಿ ಪಿಎಫ್ ಹಣ ಹಿಂಪಡೆಯಬಹುದು. 

Last Updated : Jan 16, 2019, 09:01 AM IST
UAN ನಂಬರ್ ಇಲ್ಲದಿದ್ದರೂ PF ಹಣ ಡ್ರಾ ಮಾಡಬಹುದು! ಹೇಗೆ ಗೊತ್ತಾ? title=

ನವದೆಹಲಿ: ನೌಕರ ಭವಿಷ್ಯ ನಿಧಿ(EPF) ಹಣವನ್ನು ಪಡೆಯುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಸರಳಗೊಳಿಸಿದ್ದು, ನಿಮ್ಮ ಪಿಎಫ್ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಲು ಮನೆಯಲ್ಲಿಯೇ ಕುಳಿತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬಳಿಕ ಕೇವಲ 10 ದಿನಗಳಲ್ಲಿ ಪಿಎಫ್ ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲಿದೆ. 

ಆದರೆ, ಆನ್ ಲೈನ್ ಮೂಲಕ ನಿಮ್ಮ ಪಿಎಫ್ ಖಾತೆಯಿಂದ ಹಣ ಹಿಂಪಡೆಯಲು UAN (ಯುನಿವರ್ಸಲ್ ಅಕೌಂಟ್ ನಂಬರ್) ಸಂಖ್ಯೆ ಇರಲೇಬೇಕು. ಒಂದು ವೇಳೆ ನಿಮಗೆ UAN ಸಂಖ್ಯೆ ತಿಳಿದಿಲ್ಲದಿದ್ದರೆ, ಆನ್ ಲೈನ್ ಮೂಲಕ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಪಿಎಫ್ ಕಚೇರಿಯಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ. ಯಾರ ಬಳಿ UAN ಇದೆಯೋ, ಅವರು ತಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.

ಪಿಎಫ್ ಹಣವನ್ನು ಹಿಂಪಡೆಯುವ ವಿಧಾನಗಳು

ಪಿಎಫ್ ಖಾತೆಯಿಂದ ಪೂರ್ತಿ ಹಣವನ್ನು ಯಾವಾಗ ಹಿಂಪಡೆಯಬಹುದು?
ಪ್ರತಿಯೊಬ್ಬ ನೌಕರನೂ ತನ್ನ ಪಿಎಫ್ ಖಾತೆಯಲ್ಲಿರುವ ಹಣವನ್ನು ಪೂರ್ಣ ಅಥವಾ ಭಾಗಶಃ ಡ್ರಾ ಮಾಡಿಕೊಳ್ಳಲು ಅವಕಾಶವಿದೆ. ನೀವು ಸೇವೆಯಿಂದ ನಿವೃತ್ತಿಯಾದ ಸಂದರ್ಭದಲ್ಲಿ ಅಥವಾ 2 ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಗಳಾಗಿದ್ದ ಸಂದರ್ಭದಲ್ಲಿ ಪಿಎಫ್ ಹಣ ಹಿಂಪಡೆಯಬಹುದು. ನೀವು ನಿರುದ್ಯೋಗಿ ಎಂಬುದನ್ನು ಸಾಬೀತು ಪಡಿಸಲು ಗೆಜೆಟೆಡ್ ಅಧಿಕಾರಿ ಅನುಮೋದಿಸಿರುವ ಅರ್ಜಿಯನ್ನು ಸಲ್ಲಿಸಬೇಕು. 

ಪಿಎಫ್ ಖಾತೆಯಿಂದ ಭಾಗಶಃ ಹಣ ಡ್ರಾ ಮಾಡಿಕೊಳ್ಳುವುದು ಹೇಗೆ?
UAN ಇಲ್ಲದೆ ಪಿಎಫ್ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಲು ಈ ಲಿಂಕ್ https://www.epfindia.gov.in/site_en/WhichClaimForm.php#Q3 ಮೂಲಕ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಳ್ಳಿ. ಆದರೆ, ಈ ಅರ್ಜಿಯನ್ನು EPF ಕಚೇರಿಯಲ್ಲಿ ಸಲ್ಲಿಸುವ ಮುನ್ನ ನೀವು ಕೆಲಸ ಮಾಡುತ್ತಿರುವ ಕಂಪನಿಯಿಂದ ದೃಢೀಕರಣವಾಗಿರಬೇಕು. ನೀವು ಭಾಗಶಃ ಹಣವನ್ನು ಡ್ರಾ ಮಾಡಲು ಬಯಸುವಿರಾದರೆ ಅರ್ಜಿಯ ಮೇಲ್ಭಾಗದಲ್ಲಿ ನೀಡಿರುವ ಕೋಷ್ಟಕದಲ್ಲಿ ಸಂದರ್ಭಗಳಿಗೆ ಅನುಸಾರ ಪ್ರಮಾಣ ಪತ್ರಗಳನ್ನು ಮತ್ತು ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. 

Trending News