ತಿಂಗಳಿಗೆ ಕೇವಲ ರೂ.500 ಹೂಡಿಕೆ ಮಾಡಿ ಲಕ್ಷಾಂತರ ಗಳಿಕೆ ಮಾಡುವ ಟ್ರಿಕ್ ಇಲ್ಲಿದೆ

ನಿಮ್ಮ ಬಳಿ ಇರುವ ಹಣದ ಹೂಡಿಕೆಗಾಗಿ ಇದುವರೆಗೆ ನೀವು ಯಾವುದೇ ವಿಕಲ್ಪವನ್ನು ಆಯ್ಕೆ ಮಾಡಿಲ್ಲವೇ. ಒಂದು ವೇಳೆ ನಿಮ್ಮ ಉತ್ತರ ಇಲ್ಲ ಎಂದಾದರೆ... ಇನ್ನೂ ತಡವಾಗಿಲ್ಲ, ಇಂದೇ ಹೂಡಿಕೆ ಆರಂಭಿಸಿ. ಹೌದು, ತಿಂಗಳಿಗೆ ಕೇವಲ ರೂ.500 ಹೂಡಿಕೆ ಮಾಡುವ ಮೂಲಕ ನೀವು ಲಕ್ಷಾಧಿಪತಿಯಾಗಬಹುದು. ಅಂತಹುದೇ ಕೆಲ ಉಪಾಯಗಳು ಇಲ್ಲಿವೆ

Last Updated : Jul 16, 2020, 06:26 PM IST
ತಿಂಗಳಿಗೆ ಕೇವಲ ರೂ.500 ಹೂಡಿಕೆ ಮಾಡಿ ಲಕ್ಷಾಂತರ ಗಳಿಕೆ ಮಾಡುವ ಟ್ರಿಕ್ ಇಲ್ಲಿದೆ title=

1. ಮ್ಯೂಚವಲ್ ಫಂಡ್
ಎಕ್ಸ್ಪರ್ಟ್ ಸ್ವಾತಿ ರೈನಾ ಹೇಳುವ ಪ್ರಕಾರ, ಮ್ಯೂಚುವಲ್ ಫಂಡ್‌ನಲ್ಲಿ ಯಾರು ಬೇಕಾದರೂ  ಹೂಡಿಕೆ ಮಾಡಬಹುದು. ಇದರಲ್ಲಿ ನೀವು ತಿಂಗಳಿಗೆ ರೂ.500ರಷ್ಟು ಹೂಡಿಕೆ ಮಾಡಿ ಶೇ.10 ರಿಟರ್ನ್ ನೊಂದಿಗೆ 15 ವರ್ಷಗಳ ಬಳಿಕ 2 ಲಕ್ಷ ರಿಟರ್ನ್ ಪಡೆಯಬಹುದು. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಇದರಲ್ಲಿ ನೀವು ನಿಮ್ಮ ಕೊಡುಗೆಯನ್ನು ಹೆಚ್ಚಿಸಬಹುದಾಗಿದೆ. 90 ಸಾವಿರ ರೂ. ಹೂಡಿಕೆಯ ಮೇಲೆ 1 ಲಕ್ಷ 10 ಸಾವಿರ ರಿಟರ್ನ್ ಪಡೆಯಬಹುದು. ಇದರಲ್ಲಿ ಹಣ ಹೂಡಿಕೆಯ ಜೊತೆಗೆ ಸಯಯವನ್ನು ಕೂಡ ಹೂಡಿಕೆ ಮಾಡಬೇಕಾಗುತ್ತದೆ. ಅಂದರೆ ದೀರ್ಘಕಾಲದ ಹೂಡಿಕೆಯ ಮೇಲೆ ನೀವು ಉತ್ತಮ ರಿಟರ್ನ್ ಕೂಡ ಪಡೆಯಬಹುದು. ಇದರಲ್ಲಿ ನೀವು ಎಲ್ಲಿಂದ ಬೇಕಾದರೂ ಕೂಡ ಆನ್ಲೈನ್ ಮೂಲಕ ಹೂಡಿಕೆ ಮಾಡಬಹುದು.

2.PPF
ಸಣ್ಣ ಉಳಿತಾಯ ಯೋಜನೆಗಳಲ್ಲಿ ಪಿಪಿಎಫ್ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಇದರಲ್ಲಿ 15 ವರ್ಷಗಳ ಲಾಕ್ ಇನ್ ಪಿರಿಯಡ್ ಇರುತ್ತದೆ. ವಾರ್ಷಿಕವಾಗಿ ಮಾಡಲಾಗುವ 1.5 ಲಕ್ಷ ರೂ. ಹೂಡಿಕೆಗಳ ಮೇಲೆ ಆದಾಯ ತೆರಿಗೆ ಕಾಯ್ದೆಯ ಅಡಿ ತೆರಿಗೆ ವಿನಾಯ್ತಿ ಲಾಭ ಕೂಡ ಸಿಗುತ್ತದೆ. ಅಲ್ಲದೆ, ನಿಮ್ಮ ಹೂಡಿಕೆಯ ಮೇಲೆ ಸಿಗುವ ಬಡ್ಡಿಯೂ ಕೂಡ ತೆರಿಗೆ ಮುಕ್ತವಾಗಿರುತ್ತದೆ. ನೀವು ನಿಮ್ಮ ಮಕ್ಕಳ ಹೆಸರಿನಲ್ಲಿಯೂ ಕೂಡ ಪಿಪಿಎಫ್ ಖಾತೆಯನ್ನು ಸಹ ತೆರೆಯಬಹುದು. ಈ ಖಾತೆಯನ್ನು ನೀವು ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ಕೂಡ ತೆರೆಯಬಹುದು. ಸದ್ಯ ಪಿಪಿಎಫ್ ಮೇಲೆ ಶೇ.7.1 ಬಡ್ಡಿ ಸಿಗುತ್ತಿದೆ ಎಂದು ಸ್ವಾತಿ ಹೇಳುತ್ತಾರೆ.

3.SSY
ಸ್ವಾತಿ ಹೇಳುವ ಪ್ರಕಾರ ಸುಕನ್ಯಾ ಸಮೃದ್ಧಿ ಯೋಜನೆ ಹಣ ಹೂಡಿಕೆ ಮತ್ತು ಉತ್ತಮ ರಿಟರ್ನ್ ಪಡೆಯುವ ಮತ್ತೊಂದು ಜನಪ್ರೀಯ ಯೋಜನೆಯಾಗಿದೆ. ಇದರಲ್ಲಿ ನೀವು ಮಾಸಿಕ ರೂ.250 ಹೂಡಿಕೆ ಕೂಡ ಮಾಡಬಹುದು. ಇದರಲ್ಲಿಯೂ ಕೂಡ ನಿಮಗೆ ವಾರ್ಷಿಕ ಹೂಡಿಕೆಯ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿ ಸಿಗುತ್ತದೆ. ಇದರಲ್ಲಿ 21 ವರ್ಷಗಳ ಮ್ಯಾಚುರಿಟಿ ಅವಧಿ ಇರುತ್ತದೆ ಹಾಗೂ ನಿಮ್ಮ ಹೂಡಿಕೆಯ ಮೇಲೆ ನೀವು ವಾರ್ಷಿಕವಾಗಿ ಶೇ.7.1ರಷ್ಟು ಬಡ್ಡಿ ಪಡೆಯಬಹುದು. ಈ ಯೋಜನೆಯಡಿ ಪೋಷಕರು ಒಂದು ಅಥವಾ ಒಂದಕ್ಕಿಂತ ಅಧಿಕ ಹೆಣ್ಣು ಮಕ್ಕಳ ಹೆಸರಿನ ಅಡಿ ಖಾತೆ ತೆರೆಯಬಹುದು. 18 ವರ್ಷಗಳ ಅವಧಿಯವರೆಗೆ ನೀವು ಇದರಲ್ಲಿ ಹೂಡಿಕೆ ಮಾಡಬೇಕು. ಯೋಜನೆಯ ನಿಯಮಗಳ ಪ್ರಕಾರ ಈ ಯೋಜನೆಗೆ ಸೇರಲು ನಿಮ್ಮ ಮಗಳ ವಯಸ್ಸು 10 ವರ್ಷಕ್ಕಿಂತ ಕಡಿಮೆಯಾಗಿರಬೇಕು. ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ನೀವು ಈ ಖಾತೆಯನ್ನು ತೆರೆದು. ಆನ್ಲೈನ್ ಮೂಲಕ ಇದನ್ನು ನಿರ್ವಹಿಸಬಹುದು.

4. NSC
ಅಂಚೆ ಕಚೇರಿಯ ಜನಪ್ರೀಯ ಯೋಜನೆಗಳಲ್ಲಿ NSC ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಸ್ವಾತಿ ರೈನಾ ಹೇಳುವ ಪ್ರಕಾರ, ಈ ಯೋಜನೆಯ ಅಡಿ ನೀವು ರೂ.100, ರೂ.500, ರೂ.1000 ಹಾಗೂ 5000 ರೂ.ಮುಖಬೆಲೆಯ ಬಾಂಡ್ ಗಳನ್ನು ಖರೀದಿಸಬಹುದು. 5 ವರ್ಷಗಳ ಅವಧಿಗೆ ನೀವು ಇದರಲ್ಲಿ ಹಣ ಹೂಡಿಕೆ ಮಾಡಬೇಕು. ನಿಮಗೆ ವಾರ್ಷಿಕವಾಗಿ ಶೇ.6.8ರಷ್ಟು ಬಡ್ಡಿ ಲಭಿಸುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಇದರಲ್ಲಿ ಖಾತೆ ತೆರೆಯಬಹುದು. ಈ ಖಾತೆಯನ್ನು ನೀವು ಜಂಟಿ ಖಾತೆಯನ್ನಾಗಿ ಕೂಡ ಪರಿವರ್ತಿಸಬಹುದು. ಇದರಲ್ಲಿಯೂ ಕೂಡ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿ ನಿಮಗೆ ತೆರಿಗೆ ವಿನಾಯ್ತಿ ಲಭಿಸುತ್ತದೆ.

5. ಪೋಸ್ಟ್ ಆಫೀಸ್ ಉಳಿತಾಯ ಖಾತೆ
ಅಂಚೆ ಕಚೇರಿಯ ಯಾವುದೇ ಶಾಖೆಯ ಮೂಲಕ ನೀವು ಉಳಿತಾಯ ಖಾತೆಯನ್ನು ತೆರೆಯಬಹುದು. ಇದರಲ್ಲಿ ನೀವು ಹೂಡಿಕೆ ಮೇಲೆ ಲಭಿಸುವ ರೂ.1000೦ ರೂಗಳ ವರೆಗಿನ ಬಡ್ಡಿಯ ಮೇಲೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ. ಆದರೆ, ನಿಮ್ಮ ಮಕ್ಕಳು 18 ವರ್ಷ ಪೂರ್ಣಗೊಳಿಸಿದ ಬಳಿಕ ಮಾತ್ರ ನೀವು ಈ ಖಾತೆಯನ್ನು ಕನ್ವರ್ಟ್ ಮಾಡಬಹುದು. ಪೋಸ್ಟಲ್ ಉಳಿತಾಯ ಖಾತೆಯ ಮೇಲೆ ಶೇ.4 ರಷ್ಟು ಬಡ್ಡಿ ಸಿಗುತ್ತದೆ. ಇದನ್ನು ನೀವು ಸಾಮಾನ್ಯ ಉಳಿತಾಯ ಖಾತೆಯ ಹಾಗೆಯೇ ನಿರ್ವಹಿಸಬಹುದು.

Trending News