ನವದೆಹಲಿ: ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಹಾರ್ನೆಟ್ 2.0 ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಾರ್ನೆಟ್ 2.0 ನೊಂದಿಗೆ ಕಂಪನಿಯು ಭಾರತದ 180-200 ಸಿಸಿ ಎಂಜಿನ್ ಸಾಮರ್ಥ್ಯದ ಮೋಟಾರ್ಸೈಕಲ್ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದರ ಶೋ ರೂಂ ಬೆಲೆ 1.26 ಲಕ್ಷ ರೂಪಾಯಿ.
ಹೊಂಡಾ ಹಾರ್ನೆಟ್ 2.0 184 ಸಿಸಿ ಸಾಮರ್ಥ್ಯದ ಬಿಎಸ್ -6 ಪವರ್‌ಟ್ರೇನ್ ಎಂಜಿನ್ ಹೊಂದಿದೆ. ಇದು ಎಂಜಿನ್ ಅನ್ನು ಸ್ಥಗಿತಗೊಳಿಸುವ ಹಾಗೂ ಪ್ರಾರಂಭಿಸುವ ವ್ಯವಸ್ಥೆ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕುರಿತು ಮಾಹಿತಿ ನೀಡಿರುವ ಕಂಪನಿಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯಕಾರಿ ಅಧಿಕಾರಿ ಆತ್ಸುಷಿ ಒಗಾತಾ, ಭಾರತದಲ್ಲಿ ವ್ಯಾಪಕ ಶ್ರೇಣಿಯ ಗ್ರಾಹಕರ ಬೇಡಿಕೆ ಪೂರೈಸಲು ಹೋಂಡಾಗೆ ಇದು ತನ್ನ ಬಂಡವಾಳವನ್ನು ವಿಸ್ತರಿಸುವ ಹೊಸ ಯುಗದ ಆರಂಭವಾಗಿದೆ ಎಂದಿದ್ದಾರೆ. ಈ ಬೈಕ್ ಅನ್ನು ಭಾರತದಿಂದ ಇತರೆ ಹಲವು ದೇಶಗಳಿಗೆ ರಫ್ತು ಕೂಡ ಮಾಡಲಾಗುವುದು ಎಬ್ಡಿ ಅವರು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಕಂಪನಿ ಪ್ರೇಮಿಯಂ ಶ್ರೇಣಿಯ ಇನ್ನೂ ಹಲವು ಮಾಡೆಲ್ ಗಳನ್ನು ಪ್ರಸ್ತುತಪಡಿಸಲಿದೆ ಎಂದು ಅವರು ಹೇಳಿದಾರೆ.
ಆರಂಭಿಕ ವರ್ಗ, ಮಧ್ಯಮ ವರ್ಗ ಮತ್ತು ಪ್ರೀಮಿಯಂ ವರ್ಗದ ನಡುವಿನ ಬಂಡವಾಳದ ಅಂತರವನ್ನು ಕಂಪನಿಯು ಕಡಿಮೆ ಮಾಡಲಿದೆ ಎಂದು MMSIನ ಸೇಲ್ಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಯದವೀರ್ ಸಿಂಗ್ ಗುಲೆರಿಯಾ ಹೇಳಿದ್ದಾರೆ.
ಇದಕ್ಕೂ ಮೊದಲು ಕಂಪನಿಯು ಭಾರತದಲ್ಲಿ 160 ಸಿಸಿ ಹಾರ್ನೆಟ್ 160 ಆರ್ ಅನ್ನು ಮಾರಾಟ ಮಾಡುತ್ತಿದೆ. ಪ್ರಸಕ್ತ ವರ್ಷದಲ್ಲಿ ಏಪ್ರಿಲ್ 1 ರಿಂದ ಬಿಎಸ್ -6 ವಾಹನಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಿದ್ದರಿಂದ, ಕಂಪನಿಯು ಅದನ್ನು ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದಿದೆ.
ಬೈಕ್ ನ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಹಾರ್ನೆಟ್ 2.0 ಯುಎಸ್ಡಿ ಫೋರ್ಕ್ ಅನ್ನು ಹೊಂದಿದೆ, ಇದು ಈ ಶ್ರೇಣಿಯ ಬೈಕುಗಳಲ್ಲಿ ಮೊದಲ ಬಾರಿಗೆ ಕಂಡುಬರುತ್ತಿದೆ. ಮೋಟಾರ್ಸೈಕಲ್ ರಿವರ್ಸ್ ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ, ಇದು ಗೇರ್ ಪೊಸಿಷನ್ ಇಂಡಿಕೇಟರ್, ಸರ್ವಿಸ್ ಡ್ಯೂ ಇಂಡಿಕೇಟರ್ ಮತ್ತು ಬ್ಯಾಟರಿ ವೋಲ್ಟ್ಮೀಟರ್ ಅನ್ನು ಒಳಗೊಂಡಿದೆ. ಇದಲ್ಲದೆ, ಹೋಂಡಾದ ಈ ಹೊಸ ಬೈಕು ಎಲ್ಇಡಿ ಸೂಚಕಗಳು, ಅಪಾಯದ ದೀಪ ಮತ್ತು ಸೀಲ್ಡ್ ಚೈನ್ ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.