ಕರ್ತಾರ್‌ಪುರ ಕಾರಿಡಾರ್‌ನ ವಿಡಿಯೋ ಶೇರ್ ಮಾಡಿದ ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು?

ನವೆಂಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ತಾರ್ಪುರ್ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದು, ನವೆಂಬರ್ 12 ರಂದು ಗುರು ದೇವ್ ಅವರ 550 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಸಿಖ್ ಯಾತ್ರಿಕರ ಮೊದಲ ಬ್ಯಾಚ್ ಅನ್ನು ಕಳುಹಿಸಲಿದ್ದಾರೆ.

Last Updated : Nov 7, 2019, 06:35 AM IST
ಕರ್ತಾರ್‌ಪುರ ಕಾರಿಡಾರ್‌ನ ವಿಡಿಯೋ ಶೇರ್ ಮಾಡಿದ ಗೃಹ ಸಚಿವ ಅಮಿತ್ ಶಾ ಹೇಳಿದ್ದೇನು? title=

ನವದೆಹಲಿ: ಪಾಕಿಸ್ತಾನದಲ್ಲಿ ಕರ್ತಾರ್‌ಪುರ ಕಾರಿಡಾರ್(Kartarpur corridor) ಉದ್ಘಾಟನೆಗೆ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಅವರು ವಿಡಿಯೋ ಬಿಡುಗಡೆ ಮಾಡಿದ್ದು, ನವೆಂಬರ್ 9 ರಿಂದ ಸಿಖ್ ಭಕ್ತರಿಗೆ ತೆರೆಯುವ ಕಾರ್ತಾಪುರ ಕಾರಿಡಾರ್ ಒಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ. 

ಅಮಿತ್ ಶಾ ತಮ್ಮ ಟ್ವೀಟ್‌ನಲ್ಲಿ, 'ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್ ಒಂದು ಐತಿಹಾಸಿಕ ಸಾಧನೆಯಾಗಿದ್ದು, ತಲೆಮಾರಿನ ಭಕ್ತರು ಇದನ್ನು ನೆನಪಿಸಿಕೊಳ್ಳುತ್ತಾರೆ. ನಮ್ಮ ಶ್ರೀಮಂತ ಪರಂಪರೆಯನ್ನು ಕಾಪಾಡಿಕೊಳ್ಳಲು ಮತ್ತು ಶ್ರೀ ಗುರುನಾನಕ್ ದೇವ್ ಜಿ ಅವರ ಬೋಧನೆಗಳನ್ನು ಸಾರ್ವತ್ರಿಕಗೊಳಿಸಲು ಮೋದಿ ಸರ್ಕಾರದ ಬದ್ಧತೆಯನ್ನು ಇದು ತೋರಿಸುತ್ತದೆ' ಎಂದಿದ್ದಾರೆ.

ಇದರ ಬೆನ್ನಲ್ಲೇ ಇನ್ನೊಂದು ಟ್ವೀಟ್ ಮಾಡಿರುವ ಅಮಿತ್ ಶಾ, 'ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್ ತೆರೆಯುವುದರೊಂದಿಗೆ, ನಾವು ಶ್ರೀ ಗುರು ನಾನಕ್ ದೇವ್ ಜಿ ಅವರ 550 ನೇ ಪ್ರಕಾಶ್ ಪರ್ವವನ್ನು ಆಚರಿಸುತ್ತಿರುವಾಗ, ಪ್ರಧಾನಿ @narendramodi (ನರೇಂದ್ರ ಮೋದಿ) ಲಕ್ಷಾಂತರ ಜನರ ಕನಸುಗಳನ್ನು ಈಡೇರಿಸಿದ್ದಾರೆ. ನಾವೆಲ್ಲರೂ 9 ನೇ ತಾರೀಖಿನಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಗಳಾಗೋಣ, ಪ್ರಧಾನಿ @narendramodi ಅವರು ಈ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಅಮಿತ್ ಶಾ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಕರ್ತಾರ್‌ಪುರ ಕಾರಿಡಾರ್‌ ಬಗ್ಗೆ ಮಾಹಿತಿ ನೀಡಲಾಗಿದೆ.

ನವೆಂಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕರ್ತಾರ್ಪುರ್ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದು, ನವೆಂಬರ್ 12 ರಂದು ಗುರು ದೇವ್ ಅವರ 550 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಸಿಖ್ ಯಾತ್ರಿಕರ ಮೊದಲ ಬ್ಯಾಚ್ ಅನ್ನು ಕಳುಹಿಸಲಿದ್ದಾರೆ. ಇದು ಸಿಖ್ ಸಮುದಾಯದ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ.ಅಲ್ಲಿ ಮೊದಲ ಸಿಖ್ ಗುರುವಿನ 550 ನೇ ಜನ್ಮದಿನಾಚರಣೆಯನ್ನು ಆಚರಿಸಲು ಭಕ್ತರು ಬರುತ್ತಿದ್ದಾರೆ. ಗುರುದ್ವಾರ ದರ್ಬಾರ್ ಸಾಹಿಬ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕರ್ತಾರ್ಪುರ್ ಸಾಹಿಬ್ ಗುರುದ್ವಾರವು ಸಿಖ್ ಧರ್ಮದಲ್ಲಿ ವಿಶೇಷ ಮನ್ನಣೆಯನ್ನು ಹೊಂದಿದೆ. ಅಲ್ಲಿ ಗುರುನಾನಕ್ ದೇವ್ ಜಿ 18 ವರ್ಷಗಳನ್ನು ಕಳೆದಿದ್ದು ಅಲ್ಲಿಯೇ ನಿರ್ವಾಣವನ್ನು ಪಡೆದರು ಎಂದು ನಂಬಲಾಗಿದೆ.

ಗಡಿಯಿಂದ 4 ಕಿ.ಮೀ. ದೂರ:
ಭಾರತದ ಗಡಿಯಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಕರ್ತಾರ್ಪುರ ಗುರುದ್ವಾರವನ್ನು 16 ನೇ ಶತಮಾನದಲ್ಲಿ ಗುರುನಾನಕ್ ಅವರ ನಿರ್ವಾಣದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದನ್ನು 4.2 ಕಿ.ಮೀ ಉದ್ದದ ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಲಾಗುವುದು.

Trending News