ಹಿಮಾಲಯದ ತುದಿಗೆ ಮೇರು ನಾಯಕ ಅಟಲ್ ಜೀ ಹೆಸರು!

ಜಾರ್ಖಂಡ್ ಸರ್ಕಾರ ಹಲವು ಸ್ಥಳಗಳಿಗೆ ವಾಜಪೇಯಿ ಅವರ ಹೆಸರನ್ನು ಮರುನಾಮಕರಣ ಮಾಡುವುದಾಗಿ ಘೋಷಿಸಿದೆ.

Last Updated : Sep 29, 2018, 10:03 AM IST
ಹಿಮಾಲಯದ ತುದಿಗೆ ಮೇರು ನಾಯಕ ಅಟಲ್ ಜೀ ಹೆಸರು! title=

ಡೆಹರಾಡೂನ್: ಉತ್ತರಾಖಂಡದಲ್ಲಿ ಇನ್ನೂ ಪರಿಚಯವಾಗದ ಹಿಮಾಲಯ ಪರ್ವತದ ತುದಿಯೊಂದಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲು ಮುಂದಾಗಿದೆ. 

ಈ ಬಗ್ಗೆ ಮಾಹಿನಿ ನೀಡಿದ ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್, ಉತ್ತರಾಖಂಡ್ ನ ನೆಹರೂ ಇನ್ ಸ್ಟಿಟ್ಯೂಟ್ ನ ಪರ್ವತಾರೋಹಿಗಳ ತಂಡವೊಂದು ಇನ್ನೂ ಜಗತ್ತಿಗೆ ಪರಿಚಯವಾಗದ ಹಿಮಾಲಯ ಪರ್ವತದ ತುದಿಯೊಂದಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅವರು ಅದನ್ನು ತಲುಪಿದ ನಂತರ ಅದನ್ನು ಜಗತ್ತಿಗೆ ಪರಿಚಯಿಸಿ, ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಜೀ ಅವರಿಗೆ ಪರ್ವತಗಳು ಮತ್ತು ನಿಸರ್ಗದ ಬಗ್ಗೆ ಭಾರೀ ಪ್ರೀತಿ ಇತ್ತು. ಅವರ ನಿಧನಾನಂತರ ಅವರ ಅಭಿಮಾನಿಗಳು ಹಾಗು ಜನಪ್ರತಿನಿಧಿಗಳು ಹಲವು ಬಡಾವಣೆಗಳಿಗೆ, ರಸ್ತೆಗಳಿಗೆ ವಾಜಪೇಯಿ ಹೆಸರಿಟ್ಟು ಅವರಿಗೆ ಗೌರವ ಸಲ್ಲಿಸಿದ್ದಾರೆ. ಜಾರ್ಖಂಡ್ ಸರ್ಕಾರ ಹಲವು ಸ್ಥಳಗಳಿಗೆ ವಾಜಪೇಯಿ ಅವರ ಹೆಸರನ್ನು ಮರುನಾಮಕರಣ ಮಾಡುವುದಾಗಿ ಘೋಷಿಸಿದೆ. ಈ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಹಿಮಾಲಯದ ತುದಿಯೊಂದಕ್ಕೆ ವಾಜಪೇಯಿ ಹೆಸರಿಡಲು ನಿರ್ಧರಿಸಿದೆ.
 

Trending News