Cyber Attack Alert On Transport System: ದೇಶದ ಸಾರಿಗೆ ವ್ಯವಸ್ಥೆ ಮೇಲೆ ಸೈಬರ್ ಕಳ್ಳರ ಕಣ್ಣು, NHAI ನೀಡಿರುವ ಎಚ್ಚರಿಕೆ ಏನು?

Cyber Attack Alert On Transport System: ದೇಶದ ಸಾರಿಗೆ ವ್ಯವಸ್ಥೆ ಇದೀಗ ಸೈಬರ್ ದಾಳಿಯ ಬೆದರಿಕೆಯನ್ನು ಎದುರಿಸುತ್ತಿದೆ.  ಈ ಕುರಿತು NHAI, NHDCL ಮತ್ತು ಅವುಗಳ ಇತರೆ  ಶಾಖೆಗಳಿಗೆ ಹಾಗೂ ವಾಹನ ತಯಾರಿಕಾ ಕಂಪನಿಗಳಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (Ministry of Road Transport and Highways) ಎಚ್ಚರಿಕೆ ನೀಡಿದೆ.

Written by - Nitin Tabib | Last Updated : Mar 22, 2021, 11:04 AM IST
  • ದೇಶದ ಸಾರಿಗೆ ವ್ಯವಸ್ಥೆ ಸೈಬರ್ ದಾಳಿಯ ಅಪಾಯದಲ್ಲಿ.
  • ಈ ಕುರಿತು CERT-In ನಿಂದ ಎಚ್ಚರಿಕೆ ಬಂದಿರುವುದಾಗಿ ಹೇಳಿದ NHAI.
  • ನಿರಂತರ ಸಿಕ್ಯೋರಿಟಿ ಸಿಸ್ಟಂನ ಆಡಿಟ್ ನಡೆಸಲು ಸೂಚನೆ.
Cyber Attack Alert On Transport System: ದೇಶದ ಸಾರಿಗೆ ವ್ಯವಸ್ಥೆ ಮೇಲೆ ಸೈಬರ್ ಕಳ್ಳರ ಕಣ್ಣು, NHAI ನೀಡಿರುವ ಎಚ್ಚರಿಕೆ ಏನು? title=
Cyber Attack Alert on Transport System (File Photo)

ನವದೆಹಲಿ: Cyber Attack Alert on Transport System - ದೇಶದ ಸಾರಿಗೆ ವ್ಯವಸ್ಥೆ ಇದೀಗ ಸೈಬರ್ ದಾಳಿಯ ಬೆದರಿಕೆಯನ್ನು ಎದುರಿಸುತ್ತಿದೆ.  ಈ ಕುರಿತು NHAI, NHDCL ಮತ್ತು ಅವುಗಳ ಇತರೆ  ಶಾಖೆಗಳಿಗೆ ಹಾಗೂ ವಾಹನ ತಯಾರಿಕಾ ಕಂಪನಿಗಳಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (Ministry of Road Transport and Highways) ಎಚ್ಚರಿಕೆ ನೀಡಿದೆ. ತಮ್ಮ ತಮ್ಮ IT ಸಿಕ್ಯೋರಿಟಿ ಸಿಸ್ಟಂಗಳನ್ನು ಬಲಪಡಿಸಲು ಈ ಕಂಪನಿಗಳಿಗೆ ಸಚಿವಾಲಯ ಸೂಚಿಸಿದೆ.
ಏಕೆಂದರೆ ಅವುಗಳ ಮೇಲೆ ಸೈಬರ್ ದಾಳಿ ನಡೆಯುವ ಸಾಧತೆ ಇದೆ ಎನ್ನಲಾಗಿದೆ.

ಅಲರ್ಟ್ ಜಾರಿಗೊಳಿಸಿದ CERT
ಸೈಬರ್ ದಾಳಿಯ ಬಗ್ಗೆ ಎಚ್ಚರವಾಗಿರಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡದ  (CERT-In) ವತಿಯಿಂದ ಸಂದೇಶ ಬಂದಿರುವದಾಗಿ ಸಚಿವಾಲಯ ಹೇಳಿದೆ. ಈ ಕುರಿತು  ಸಚಿವಾಲಯ ಹೊರಡಿಸಿರುವ ಹೇಳಿಕೆಯಲ್ಲಿ ರಸ್ತೆ ಸಾರಿಗೆ (Road Transport) ಸಚಿವಾಲಯವು CERT-In ನಿಂದ ಎಚ್ಚರಿಕೆಯನ್ನು ಬಂದಿದ್ದು, ಭಾರತೀಯ ಸಾರಿಗೆ ಕ್ಷೇತ್ರದಲ್ಲಿ ಕೆಲವು ದುರುದ್ದೇಶದಿಂದ ಕೂಡಿದ ದಾಳಿ ನಡೆಯಬಹುದು ಎಂದು ತಿಳಿಸಿದೆ.

ಇದನ್ನೂ ಓದಿ-ಎಚ್ಚರ..! ನಿಮ್ಮಲ್ಲಿರುವ FASTag ನಕಲಿಯಾಗಿರಬಹುದು..! NHAI ನೀಡಿದೆ ಎಚ್ಚರಿಕೆ

ಈ ಸಂಸ್ಥೆಗಳಿಗೆ ಅಲರ್ಟ್ ಜಾರಿ
ಟ್ರಾನ್ಸ್ಪೋರ್ಟ್ ಸಿಸ್ಟಮ್ ಅಡಿ ಬರುವ ವಿಭಾಗಗಳು ಹಾಗೂ ಸಂಸ್ಥೆಗಳಿಗೆ ಸಲಹೆ ನೀಡಿರುವ ಸಚಿವಾಲಯ, ತಮ್ಮ ತಮ್ಮ ಸಿಕ್ಯೋರಿಟಿ ಸಿಸ್ಟಂ ಅನ್ನು ಬಲಪಡಿಸಲು ಸೂಚಿಸಿದೆ. NIC, ನ್ಯಾಷನಲ್ ಹೈವೆ ಅಥಾರಿಟಿ ಆಫ್ ಇಂಡಿಯಾ (NHAI), ನ್ಯಾಷನಲ್ ಹೈವೆ ಅಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾರ್ಪೋರೇಶನ್ (NHIDCL), ಇಂಡಿಯನ್ ರೋಡ್ ಕಾಂಗ್ರೆಸ್ (IRC), ಇಂಡಿಯನ್ ಅಕಾಡೆಮಿ ಆಫ್ ಹೈವೆ ಇಂಜೀನಿಯರ್ಸ್ (IAHE), ರಾಜ್ಯಗಳ PWDಗಳು ಹಾಗೂ ವಾಹನ ತಯಾರಕ ಕಂಪನಿಗಳಿಗೆ (Auto Companies) CERT-In ನಿಂದ ಮಾನ್ಯತೆ ಪಡೆದ ಏಜೆನ್ಸಿ ಗಳಿಂದ ತಮ್ಮ ಸಂಪೂರ್ಣ IT ಸಿಸ್ಟಂನ ಆಡಿಟ್ ಮಾಡಿಸಿಕೊಳ್ಳುವಂತೆ ಸಚಿವಾಲಯ ಸೂಚಿಸಿದೆ.

ಇದನ್ನೂ ಓದಿ-FasTag : NHAI ನಿಯಮದಲ್ಲಿ ಬದಲಾವಣೆ; Minimum ಬಾಲೆನ್ಸ್ ಬಗ್ಗೆ ಇನ್ನು ಚಿಂತೆ ಬಿಟ್ಟು ಬಿಡಿ

ಇನ್ಮುಂದೆ ನಿರಂತರವಾಗಿ ಸಂಪೂರ್ಣ IT ಸಿಸ್ಟಂನ ಆಡಿಟ್ ಮಾಡಿಸಬೇಕು
ಇಂತಹ ಭದ್ರತಾ ಲೆಕ್ಕಪರಿಶೋಧನೆಯನ್ನು ನಿಯಮಿತವಾಗಿ ನಡೆಸಬೇಕೆಂದು ರಸ್ತೆ ಮತ್ತು ಸಾರಿಗೆ ಸಚಿವಾಲಯ ಸೂಚಿಸಿದೆ. ಅಲ್ಲದೆ, ಈ ಲೆಕ್ಕಪರಿಶೋಧನಾ ವರದಿಗಳು ಮತ್ತು ಆಕ್ಷನ್ ಟೇಕನ್ ವರದಿ (ATR) ಅನ್ನು ನಿಯಮಿತವಾಗಿ ಸಚಿವಾಲಯಕ್ಕೆ ಸಲ್ಲಿಸುವಂತೆ ಸಚಿವಾಲಯ ನಿರ್ದೇಶಿಸಿದೆ. ಕಳೆದ ವರ್ಷ ಜೂನ್‌ನಲ್ಲಿ, NHAI ತನ್ನ ಇಮೇಲ್ ಸರ್ವರ್‌ ಮೇಲೆ ಸೈಬರ್ ದಾಳಿ ನಡೆದ ಕುರಿತು ಉಲ್ಲೇಖಿಸಿತ್ತು, ಆದರೆ ನಂತರ ಸಮಯ ಇರುವಾಗಲೇ ತೆಗೆದುಕೊಂಡ ಕ್ರಮದಿಂದಾಗಿ ಯಾವುದೇ ಡೇಟಾ ಕಳ್ಳತನ (Data Loss) ನಡೆದಿಲ್ಲ ಎಂದೂ ಕೂಡ ತಿಳಿಸಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ NHAI ತನ್ನ ಸರ್ವರ್ ಅನ್ನು ಬಂದ್ ಮಾಡಿತ್ತು.

ಇದನ್ನೂ ಓದಿ-NHAIನಲ್ಲಿ ಉದ್ಯೋಗಾವಕಾಶ: 163 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News