ನವದೆಹಲಿ: ಜಾಧವ್ ಕುಟುಂಬ ಇತ್ತೀಚಿಗೆ ಇಸ್ಲಾಮಾಬಾದ್ ನಲ್ಲಿ ಕುಲಭೂಷನ್ ರನ್ನು ಭೇಟಿಯಾದ ಸಂದರ್ಭದಲ್ಲಿ ಜಾಧವ್ ಅವರ ತಾಯಿ ಮತ್ತು ಪತ್ನಿಗೆ ಮಂಗಳಸೂತ್ರ ತೆಗೆಯಲು ಪಾಕಿಸ್ತಾನ್ ಸೂಚಿಸಿತ್ತು. ಇದಾದ ನಂತರ ಭಾರತ ಇದಕ್ಕೆ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿತ್ತು.
ಈ ಎಲ್ಲ ಪಾಕಿಸ್ತಾನದ ಅವಾಂತರಗಳ ಮುಂದುವರಿದ ಭಾಗವಾಗಿ ಜಾಧವ್ ಪತ್ನಿಯ ಶೋ ಅನ್ನು ತನ್ನ ಬಳಿ ತಪಾಸಣೆಯ ನೆಪದಲ್ಲಿ ಇಟ್ಟುಕೊಂಡಿದೆ. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರ ಮಹಮ್ಮದ ಫೈಸಲ್ ರವರು "ಜಾಧವ್ ಪತ್ನಿ ಧರಿಸಿರುವ ಶೂ ದಲ್ಲಿ ಕಬ್ಬಿಣದ ರೀತಿಯ ವಸ್ತು ಕಂಡುಬಂದಿದ್ದು ಅದಕ್ಕೆ ಅದನ್ನು ರಕ್ಷಣೆಯ ನಿಟ್ಟಿನಲ್ಲಿ ತಮ್ಮ ಬಳಿ ಉಳಿಸಿಕೊಳ್ಳಲಾಗಿದೆ.
ಭಾರತದ ಟೀಕೆಗಳಿಗೆ ಉತ್ತರಿಸಿರುವ ಪಾಕಿಸ್ತಾನ ಜಾಧವ್ ಕುಟುಂಬವು ಕುಲಭೂಷಣ ರವನ್ನು ಭೇಟಿ ಮಾಡಿದ 24 ಗಂಟೆಯ ನಂತರ ಎಲ್ಲ ಘಟನಾವಳಿಗಳನ್ನು ತಿರಚುತ್ತಿದೆ. ಆದ್ದರಿಂದ ಆಧಾರ ರಹಿತವಾದ ಟೀಕೆಗಳಿಗೆ ನಾವು ಉತ್ತರಿಸುವುದಿಲ್ಲ ಎಂದು ಫೈಸಲ್ ಹೇಳಿದ್ದಾರೆ.