"ಕೊರೊನಾ ವಿರುದ್ಧ ಹೋರಾಡಿ, ಪ್ರಧಾನಿ ಮೋದಿ ವಿರುದ್ಧವಲ್ಲ"

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ತಮ್ಮ ಟ್ವೀಟ್ ನಲ್ಲಿ 'ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಮಾತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Last Updated : May 7, 2021, 03:57 PM IST
  • ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ತಮ್ಮ ಟ್ವೀಟ್ ನಲ್ಲಿ 'ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಮಾತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
"ಕೊರೊನಾ ವಿರುದ್ಧ ಹೋರಾಡಿ, ಪ್ರಧಾನಿ ಮೋದಿ ವಿರುದ್ಧವಲ್ಲ" title=
file photo

ನವದೆಹಲಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ತಮ್ಮ ಟ್ವೀಟ್ ನಲ್ಲಿ 'ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಮಾತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ (Harsh Vardhan) ಅವರು ಕೊರೊನಾ ವಿರುದ್ಧ ಹೋರಾಡಬೇಕು ಹೊರತು ಪ್ರಧಾನಿ ನರೇಂದ್ರ ಮೋದಿ ವಿರುದ್ಧವಲ್ಲ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Covid-19- ದೇಶಾದ್ಯಂತ ಇದ್ದಕ್ಕಿದ್ದಂತೆ ಕೋವಿಡ್ -19 ಪ್ರಕರಣ ಹೆಚ್ಚಳದ ಹಿಂದಿನ ಕಾರಣ ಬಿಚ್ಚಿಟ್ಟ ಕೇಂದ್ರ ಆರೋಗ್ಯ ಸಚಿವರು

ಇನ್ನೊಂದೆಡೆಗೆ ಸಿಎಂ ಸೊರೆನ್ ಅವರ ನೆರವಿಗೆ ಧಾವಿಸಿದ ಶಿವಸೇನಾ ವಕ್ತಾರೆ ಪ್ರಿಯಂಕಾ ಚತುರ್ವೇದಿ 'ಸಾಂಕ್ರಾಮಿಕ ರೋಗದ ಬಗ್ಗೆ ಸಭ್ಯವಾಗಿ ಮಾತನಾಡುವ ಸಮಯ' ಮುಗಿದಿದೆ ಮತ್ತು ಪಿಎಂ ಮೋದಿಯವರು 'ಲಸಿಕೆಗಳು ಮತ್ತು ಔಷಧಿಗಳ ಬಗ್ಗೆ ನಿರ್ಣಾಯಕ ಕ್ರಮಗಳ ಕುರಿತು ಮಾತನಾಡಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Good News: ದೇಶಾದ್ಯಂತ ಕೋವಿಡ್ ಲಸಿಕೆ ಉಚಿತವಾಗಿ ವಿತರಣೆ - ಡಾ. ಹರ್ಷವರ್ಧನ್

ಗುರುವಾರ ರಾತ್ರಿ ಪಿಎಂ ಮೋದಿ ಅವರು ಹೇಮಂತ್ ಸೊರೆನ್ ಅವರೊಂದಿಗೆ ರಾಜ್ಯದ ಕೋವಿಡ್ -19 ಪರಿಸ್ಥಿತಿ ಕುರಿತು ಮಾತನಾಡಿದರು.ಸಂಭಾಷಣೆಯ ನಂತರ, ಸೊರೆನ್ ಟ್ವಿಟ್ಟರ ನಲ್ಲಿ ಸಂಭಾಷಣೆಯ ಸಮಯದಲ್ಲಿ ಪಿಎಂ ಮೋದಿ ತಮ್ಮ "ಮನ್ ಕಿ ಬಾತ್" ಅನ್ನು ಮಾತ್ರ ಮಾಡಿದ್ದಾರೆ.ಅವರು ಪ್ರಮುಖ ವಿಷಯಗಳನ್ನು ಆಲಿಸಿ ಮಾತನಾಡಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: 24x7 Covid-19 Vaccination:ಇನ್ಮುಂದೆ ಹಗಲು-ರಾತ್ರಿ ಯಾವಾಗ ಬೇಕಾದರೂ ಲಸಿಕೆ ಹಾಕಿಸಿಕೊಳ್ಳಬಹುದು

ಅಸ್ಸಾಂನ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಸೊರೆನ್ ಅವರ ಟ್ವೀಟ್ ಅನ್ನು 'ದುರದೃಷ್ಟಕರ' ಎಂದು ಹೇಳಿದ್ದಾರೆ ಮತ್ತು ಪಿಎಂ ಮೋದಿಯವರ ಕಾಳಜಿ ಮತ್ತು ಜನರ ಕೆಲಸಗಳನ್ನು ರಾಜಕೀಯಗೊಳಿಸಲು ಸೊರೆನ್ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು."ಪ್ರಧಾನಿ ಮೋದಿ ಜಿ ಅವರ ಎಲ್ಲ ಪ್ರಯತ್ನ ಮತ್ತು ಕ್ರಮ ಜನರಿಗೆ ಮತ್ತು ರಾಷ್ಟ್ರಕ್ಕೆ ಮಾತ್ರ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News