OMG: ಡಿಜೆ ಸೌಂಡ್‌ಗೆ ಹೃದಯಾಘಾತ; ಕುಸಿದು ಬಿದ್ದು ವ್ಯಕ್ತಿ ಸಾವು!

Heart Attack for DJ Sound: ಸರಸ್ವತಿ ಮೂರ್ತಿಯ ಮೆರವಣಿಗೆಯ ವೇಳೆ ಜೋರಾಗಿ ಡಿಜೆ ಹಾಡಿನ ಸೌಂಡ್‌ ಹಾಕಲಾಗಿತ್ತು. ಇದೇ ಮೆರವಣಿಗೆಯಲ್ಲಿ ಪ್ರೇಮನಾಥ್‌ ಅವರು ಸಹ ಬರುತ್ತಿದ್ದರು. ಈ ಸಂದರ್ಭದಲ್ಲಿ ಡಿಜೆ ಸೌಂಡ್‌ ಜೋರಾಗಿ ಹಾಕಿದ್ದರಿಂದ ಪ್ರೇಮನಾಥ್‌ ಅವರು ಹಠಾತ್‌ ಕುಸಿದು ಬಿದ್ದಿದ್ದಾರೆ.

Written by - Puttaraj K Alur | Last Updated : Feb 25, 2024, 07:25 PM IST
  • ಡಿಜೆ ಸೌಂಡ್‌ಗೆ ಹೃದಯಾಘಾತವಾಗಿ ವ್ಯಕ್ತಿಯೊಬ್ಬ ಕುಸಿದು ಬಿದ್ದು ಸಾವು
  • ಒಡಿಶಾದ ರೊರ್ಕೆಲಾದಲ್ಲಿ ನಡೆದಿರುವ ಆಘಾತಕಾಗಿ ಘಟನೆ
  • ಜೋರಾಗಿ ಸಂಗೀತ ಹಾಕಿದ ಡಿಜೆಯನ್ನು ಬಂಧಿಸಿದ ಪೊಲೀಸರು
OMG: ಡಿಜೆ ಸೌಂಡ್‌ಗೆ ಹೃದಯಾಘಾತ; ಕುಸಿದು ಬಿದ್ದು ವ್ಯಕ್ತಿ ಸಾವು! title=
ಡಿಜೆ ಸೌಂಡ್‌ಗೆ ಸಾವು!

ಭುವನೇಶ್ವರ್‌: ಡಿಜೆ ಸೌಂಡ್‌ಗೆ ಹೃದಯಾಘಾತವಾಗಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ಒಡಿಶಾದ ರೊರ್ಕೆಲಾದಲ್ಲಿ ನಡೆದಿದೆ. 

ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಯನ್ನು ಪ್ರೇಮನಾಥ್‌ ಬರಭಯ(50) ಎಂದು ಗುರುತಿಸಲಾಗಿದೆ. ಈತ ಟೀ ಸ್ಟಾಲ್‌ ಮಾಲೀಕರಾಗಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ: ಹೃದಯಾಘಾತದಿಂದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ 

ಘಟನೆಯ ವಿವರ:

ಸರಸ್ವತಿ ಮೂರ್ತಿಯ ಮೆರವಣಿಗೆಯ ವೇಳೆ ಜೋರಾಗಿ ಡಿಜೆ ಹಾಡಿನ ಸೌಂಡ್‌ ಹಾಕಲಾಗಿತ್ತು. ಇದೇ ಮೆರವಣಿಗೆಯಲ್ಲಿ ಪ್ರೇಮನಾಥ್‌ ಅವರು ಸಹ ಬರುತ್ತಿದ್ದರು. ಈ ಸಂದರ್ಭದಲ್ಲಿ ಡಿಜೆ ಸೌಂಡ್‌ ಜೋರಾಗಿ ಹಾಕಿದ್ದರಿಂದ ಪ್ರೇಮನಾಥ್‌ ಅವರು ಹಠಾತ್‌ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ರೊರ್ಕೆಲಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರೇಮನಾಥ್‌ ಅವರ ಸಾವಿನ ಬಳಿಕ ಸ್ಥಳೀಯರು ರಘುನಾಥಪಾಲಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಈ ಅನ್ಯಾಯದ ಸಾವಿಗೆ ನ್ಯಾಯ ಕೊಡಿಸುವಂತೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ನಂತರ ಪೊಲೀಸರು ಸಮಾರಂಭಗಳಲ್ಲಿ ಡಿಜೆ ಬಳಕೆ ಮಾಡುವುದಕ್ಕೆ ಬ್ರೇಕ್‌ ಹಾಕಿದ್ದು, ಜೋರಾಗಿ ಸಂಗೀತ ನೀಡಿದ ಡಿಜೆಯನ್ನು ಬಂಧಿಸಿದ್ದಾರೆ.  

ಇದನ್ನೂ ಓದಿ: ಬಳ್ಳಾರಿಯ SP ಸರ್ಕಲ್‌ನಲ್ಲಿ ಅಪರಿಚಿತ ವ್ಯಕ್ತಗೆ ಪಾರ್ಶ್ವವಾಯು ಅಟ್ಯಾಕ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News