ನವದೆಹಲಿ: HDFC ಬ್ಯಾಂಕ್ ಈಗ ನಿಶ್ಚಿತ ಠೇವಣಿ (FD) ಮೇಲೆ ಹೆಚ್ಚಿನ ಬಡ್ಡಿಯನ್ನು ನೀಡಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಹೆಚ್ಚಿಸಿದ ನಂತರ ಎಚ್ಡಿಎಫ್ಸಿ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ. ಈಗ FD ಮೇಲೆ 0.60% ಬಡ್ಡಿಯನ್ನು ಹೆಚ್ಚಿಗೆ ನೀಡಲಿದೆ. ಎಚ್ಡಿಎಫ್ಸಿ ಬ್ಯಾಂಕ್ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಪರಿಷ್ಕೃತ ಬಡ್ಡಿದರಗಳು ಆಗಸ್ಟ್ 6 ರಿಂದ ಜಾರಿಗೊಂಡಿದೆ. ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳ ಹೆಚ್ಚಳವೂ ಸಾಲದ ಬಡ್ಡಿ ದರಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಬ್ಯಾಂಕ್ ಆರು ತಿಂಗಳಿಂದ ಐದು ವರ್ಷಗಳವರೆಗೆ ನಿಶ್ಚಿತ ಠೇವಣಿಗಳ ಮೇಲೆ ಬಡ್ಡಿದರಗಳನ್ನು ಹೆಚ್ಚಿಸಿದೆ. ನಿಶ್ಚಿತ ಠೇವಣಿಗಳ ಮೇಲಿನ ಆರು ತಿಂಗಳಿನಿಂದ ಒಂಭತ್ತು ತಿಂಗಳವರೆಗೆ 0.40 ಪ್ರತಿಶತದಿಂದ 6.75 ರಷ್ಟು ಬಡ್ಡಿದರ ಹೆಚ್ಚಳವಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಂತರ, ಎಚ್ಡಿಎಫ್ಸಿ ಬ್ಯಾಂಕ್ ಕೂಡ ನಿಶ್ಚಿತ ಠೇವಣಿ (ಎಫ್ಡಿ) ಯ ಬಡ್ಡಿದರಗಳನ್ನು ಬದಲಿಸಿದೆ. ಬ್ಯಾಂಕ್ ಬಡ್ಡಿದರಗಳನ್ನು 60 ಬೇಸಿಸ್ ಪಾಯಿಂಟ್ ಗಳ ಆಧಾರದ ಮೇಲೆ ಹೆಚ್ಚಿಸಿದೆ.
ಬ್ಯಾಂಕಿನ ವೆಬ್ಸೈಟ್ನಲ್ಲಿ ನೀಡಿದ ಮಾಹಿತಿಯ ಪ್ರಕಾರ, ಮೂರು ತಿಂಗಳೊಳಗಿನ ಎಫ್ಡಿ ಮೇಲೆ ಬಡ್ಡಿದರದಲ್ಲಿ ಯಾವುದೇ ಹೆಚ್ಚಳವಿಲ್ಲ. ಎಫ್ಡಿ ದರಗಳನ್ನು 10 BPS(ಬೇಸಿಸ್ ಪಾಯಿಂಟ್) 60 BPS(ಬೇಸಿಸ್ ಪಾಯಿಂಟ್)ಗಳವರೆಗೆ ಹೆಚ್ಚಿಸಲಾಗಿದೆ. ಆಗಸ್ಟ್ 6, 2018 ರಿಂದ ಬ್ಯಾಂಕಿನ ನೂತನ ಬಡ್ಡಿದರ ಅನ್ವಯವಾಗುತ್ತದೆ.
6 ತಿಂಗಳಿನಿಂದ 5 ವರ್ಷಗಳವರೆಗಿನ FD ಮೇಲಿನ ಬಡ್ಡಿ
ಬ್ಯಾಂಕ್ ಆರು ತಿಂಗಳು ಒಂದು ದಿನದಿಂದ ಐದು ವರ್ಷಗಳವರೆಗೆ ಅವಧಿಯ ಮೆಚ್ಯೂರಿಟಿ (ಟರ್ಮ್ ಠೇವಣಿ) ಮೇಲೆ ಬಡ್ಡಿ ದರವನ್ನು ಹೆಚ್ಚಿಸಿದೆ. ಆರು ರಿಂದ ಒಂಬತ್ತು ತಿಂಗಳುಗಳ FD ಮೇಲಿನ ಬಡ್ಡಿ ದರವು ಶೇ 6.75 ರಷ್ಟಾಗುತ್ತದೆ, ಇದು ಹಿಂದಿನಕ್ಕಿಂತ 0.40 ರಷ್ಟು ಹೆಚ್ಚಾಗಿದೆ.
ಒಂಬತ್ತು ತಿಂಗಳಿನಿಂದ ಒಂದು ವರ್ಷದೊಳಗೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯನ್ನು ಹೊಂದಿರುವ ಠೇವಣಿಗಳ ಮೇಲಿನ ಬಡ್ಡಿ ದರವು 0.60% ನಷ್ಟು ಹೆಚ್ಚಾಗಿದೆ. ಆದರೆ ಒಂದು ವರ್ಷದ ಮೆಚ್ಯುರಿಟಿ ಠೇವಣಿಯ ಮೇಲಿನ ಬಡ್ಡಿ ದರವು 0.40% ರಿಂದ 7.25% ಕ್ಕೆ ಏರಿದೆ.
ಎರಡು ವರ್ಷ ಒಂದು ದಿನದಿಂದ ಐದು ವರ್ಷದವರೆಗಿನ ನಿಶ್ಚಿತ ಠೇವಣಿ ಮೇಲಿನ ಬಡ್ಡಿ 0.10% ಹೆಚ್ಚಾಗಿದೆ. ಏರುತ್ತಿರುವ ಹಣದುಬ್ಬರದ ದೃಷ್ಟಿಯಿಂದ, ರಿಸರ್ವ್ ಬ್ಯಾಂಕ್ ಕಳೆದ ವಾರ ರೆಪೋ ದರವನ್ನು ಶೇ 0.25 ರಿಂದ 6.5 ಕ್ಕೆ ಏರಿಸಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ FD ಬಡ್ಡಿ ದರವನ್ನು ಹೆಚ್ಚಿಸಿದೆ.