ನವದೆಹಲಿ: ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌತಲಾ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ಪುನರಾರಂಭಿಸುವಂತೆ ಒತ್ತಾಯಿಸಿದ್ದಾರೆ.
ಮೂರರಿಂದ ನಾಲ್ಕು ಕ್ಯಾಬಿನೆಟ್ ಮಂತ್ರಿಗಳ ತಂಡವು ದೆಹಲಿ ಗಡಿಯಲ್ಲಿ 100 ದಿನಗಳಿಂದ ಕ್ಯಾಂಪಿಂಗ್ ಮಾಡುತ್ತಿರುವ ರೈತರೊಂದಿಗೆ (Farmers Protest) ಚರ್ಚೆಯನ್ನು ಪುನರಾರಂಭಿಸಬೇಕೆಂದು ಎಂದು ಚೌತಲಾ ಹೇಳಿದರು.
ಇದನ್ನೂ ಓದಿ - ದೆಹಲಿ-ಯುಪಿ ಗಡಿ ಪ್ರದೇಶದಲ್ಲಿ ಮತ್ತಷ್ಟು ತೀವ್ರಗೊಂಡ ರೈತರ ಪ್ರತಿಭಟನೆ
"ಕೇಂದ್ರ ಸರ್ಕಾರದ ಹೊಸದಾಗಿ ಜಾರಿಗೆ ತಂದ ಮೂರು ಕೃಷಿ ಕಾನೂನುಗಳಿಗೆ (Agriculture Laws) ಸಂಬಂಧಿಸಿದಂತೆ ನಮ್ಮ 'ಅನ್ನದಾತರು' ದೆಹಲಿ ಗಡಿಯಲ್ಲಿ ರಸ್ತೆಗಳಲ್ಲಿದ್ದಾರೆ ಎಂದು ನಿಮ್ಮ ರೀತಿಯ ಗಮನಕ್ಕೆ ತರಲು ನಾನು ಬಯಸುತ್ತೇನೆ. ಇಂತಹ ಆಂದೋಲನಗಳು ಹೆಚ್ಚು ನಡೆಯುತ್ತಿದೆ ಎಂಬುದು ಆತಂಕದ ಸಂಗತಿಯಾಗಿದೆ.ಪರಸ್ಪರ ಚರ್ಚೆಗಳ ಮೂಲಕ ಪ್ರತಿಯೊಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು "ಎಂದು ಚೌತಲಾ ಪತ್ರದಲ್ಲಿ ಬರೆದಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರೈತ ಸಂಘದ ನಡುವಿನ ಹಿಂದಿನ ಚರ್ಚೆಯು ಸಮುಕ್ತ್ ಮೋರ್ಚಾ ಎತ್ತಿದ ಕಳವಳಗಳಿಗೆ ಕೆಲವು ಪರಿಹಾರಗಳನ್ನು ತಂದಿತು.ಈ ನಿಟ್ಟಿನಲ್ಲಿ, ಮೂರರಿಂದ ನಾಲ್ಕು ಹಿರಿಯ ಕ್ಯಾಬಿನೆಟ್ ಮಂತ್ರಿಗಳನ್ನು ಒಳಗೊಂಡ ತಂಡವು ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ನಿಯೋಗವನ್ನು ಮುನ್ನಡೆಸಬಹುದು, ಇದರಿಂದಾಗಿ ಈ ವಿಷಯದಲ್ಲಿ ಸೌಹಾರ್ದಯುತ ತೀರ್ಮಾನಕ್ಕೆ ಬರಬಹುದು" ಎಂದು ಅವರು ಏಪ್ರಿಲ್ 15 ರಂದು ಬರೆದ ಪತ್ರದಲ್ಲಿ ಬರೆದಿದ್ದಾರೆ.ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಹೆಚ್ಚಿನ ಸಂಖ್ಯೆಯ ರೈತರು ಹರಿಯಾಣದ ಗಡಿಯಲ್ಲಿವುದರಿಂದ ಆತಂಕವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ - 'ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳಿಂದ ದೇಶದ ಭವಿಷ್ಯ ಕರಾಳ'
ಕೇಂದ್ರವು ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಳೆದ ವರ್ಷ ಸೆಪ್ಟೆಂಬರ್ ನಿಂದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ದೆಹಲಿಯ ಮೂರು ಗಡಿ ಬಿಂದುಗಳಾದ ಸಿಂಗು, ಟಿಕ್ರಿ ಮತ್ತು ಘಾಜಿಪುರಗಳಲ್ಲಿ ಕ್ಯಾಂಪಿಂಗ್ ಮಾಡುತ್ತಿದ್ದಾರೆ.
ಹೊಸ ಕೃಷಿ ಕಾನೂನುಗಳು ರೈತರನ್ನು ಮಧ್ಯವರ್ತಿಗಳಿಂದ ಮುಕ್ತಗೊಳಿಸುತ್ತವೆ ಮತ್ತು ಅವರ ಬೆಳೆಗಳನ್ನು ಮಾರಾಟ ಮಾಡಲು ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ ಎಂದು ಕೇಂದ್ರ ಹೇಳುತ್ತದೆ.ಆದಾಗ್ಯೂ, ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ ಎಂದು ರೈತರು ಹೇಳುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.