ನವದೆಹಲಿ: ರೈತ ಮಸೂದೆಗಳಿಗೆ ವಿರೋಧಿಸಿ ಶಿರೋಮಣಿ ಅಕಾಲಿ ದಳದ (SAD) ಮುಖಂಡೆ ಮತ್ತು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ (Harsimrat Kaur Badal) ಮೋದಿ ಕ್ಯಾಬಿನೆಟ್ ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮೊದಲು ಪಕ್ಷದ ನಾಯಕ ಸುಖಬೀರ್ ಸಿಂಗ್ ಬಾದಲ್ ಲೋಕಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದ್ದಾರೆ. ಸಂಸತ್ತಿನಲ್ಲಿ ಮಂಡಿಸಲಾಗಿರುವ ಕೃಷಿ ಮಸೂದೆಯನ್ನು ವಿರುಧಿಸಿ ಪಕ್ಷದ ಮುಖಂಡೆ ಮತ್ತು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಕೇಂದ್ರದ ಮೋದಿ ಸರ್ಕಾರಕ್ಕೆ ರಾಜೀನಾಮೆ ಸಾಲಿಸಲಿದ್ದಾರೆ ಎಂದು ಹೇಳಿದ್ದರು.
ಕೃಷಿ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ -2020 ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಒಪ್ಪಂದ ಮತ್ತು ಕೃಷಿ ಸೇವೆಗಳ ಒಪ್ಪಂದಗಳ ಮಸೂದೆ -2020 ಕುರಿತು ಚರ್ಚೆಯಲ್ಲಿ ಭಾಗವಹಿಸಿದ ಸುಖ್ಬೀರ್ ಬಾದಲ್, “ಶಿರೋಮಣಿ ಅಕಾಲಿ ದಳ ರೈತರ ಪಕ್ಷವಾಗಿದ್ದು, ಈ ರೈತ ವಿರೋಧಿ ಕೃಷಿ ಮಸೂದೆಗಳನ್ನು ಅವರ ಪಕ್ಷ ವಿರೋಧಿಸಲಿದೆ' ಎಂದು ಹೇಳಿದ್ದರು.
Also Read- ದೇಶದ ಅನ್ನದಾತನಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ PM Modi Government
ಸಂಸತ್ತಿನ ಕೆಳಮನೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ್ದಾರೆ. "ಶಿರೋಮಣಿ ಅಕಾಲಿ ದಳ ಎಂದಿಗೂ ಯು-ಟರ್ನ್ ತೆಗೆದುಕೊಂಡಿಲ್ಲ" ಎಂದು ಹೇಳಿದ್ದಾರೆ. "ನಾವು ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟದ (ಎನ್‌ಡಿಎ) ಮಿತ್ರರಾಷ್ಟ್ರಗಳು. ರೈತರ ಮನೋಭಾವವನ್ನು ನಾವು ಸರ್ಕಾರಕ್ಕೆ ತಿಳಿಸಿದ್ದೇವೆ. ನಾವು ಪ್ರತಿ ಪ್ಲಾಟ್‌ಫಾರ್ಮ್‌ನಲ್ಲಿ ಈ ವಿಷಯವನ್ನು ಎತ್ತಿದ್ದೇವೆ. ನಾವು ರೈತರ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದೆವು, ಆದರೆ ಇದು ಸಂಭವಿಸಲಿಲ್ಲ. " ಎಂದು ಹೇಳಿದ್ದಾರೆ.