ಕಾಂಗ್ರೆಸ್ ಪಕ್ಷದ ಮೆಸ್ಸಿ, ಎಂಬಪ್ಪೆಯಾದ ರಾಹುಲ್ ಗಾಂಧಿ, ಖರ್ಗೆ..!

ಹೌದು, ಈಗ ವಿಶ್ವಕಪ್ ಟೂರ್ನಿಯುದ್ದಕ್ಕೂ ಅದ್ಬುತ ಪ್ರದರ್ಶನವನ್ನು ನೀಡಿದ ಲಿಯೋನೆಲ್ ಮೆಸ್ಸಿ ಮತ್ತು ಎಂಬಪ್ಪೆ ಅವರು ಈಗ ಟೂರ್ನಿ ಮುಗಿದ ನಂತರವೂ ಅವರ ಪ್ರದರ್ಶನ ಅಭಿಮಾನಿಗಳ ಮನದಲ್ಲಿ ಇನ್ನೂ ಹಚ್ಚ ಹಸಿರಾಗಿದೆ.

Written by - Zee Kannada News Desk | Last Updated : Dec 23, 2022, 08:22 PM IST
  • ರಾಹುಲ್ ಗಾಂಧಿಯವರ ಚಿತ್ರವನ್ನು ಟ್ವೀಟ್ ಮಾಡಿ ಟ್ವೀಟ್‌ನಲ್ಲಿ ಮೆಸ್ಸಿ ಎಂದು ಬಣ್ಣಿಸಿದ್ದಾರೆ.
  • ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಂಬಪ್ಪೆ ಎಂದು ಬಣ್ಣಿಸಿದ್ದಾರೆ.
  • ಸುಮಾರು 36 ವರ್ಷಗಳ ನಂತರ ಪುಟ್ಬಾಲ್ ವಿಶ್ವಕಪ್ ನ್ನು ಗೆದ್ದಿದೆ.
ಕಾಂಗ್ರೆಸ್ ಪಕ್ಷದ ಮೆಸ್ಸಿ, ಎಂಬಪ್ಪೆಯಾದ ರಾಹುಲ್ ಗಾಂಧಿ, ಖರ್ಗೆ..!        title=
Photo Courtsey: Twitter

ನವದೆಹಲಿ: ಫಿಫಾ ವಿಶ್ವಕಪ್ ಅರ್ಜೆಂಟೀನಾದ ವಿಜಯದೊಂದಿಗೆ ಕೊನೆಗೊಂಡಿತು ಆದರೆ ಉತ್ಸಾಹವು ಮಾತ್ರ ಇನ್ನೂ ಕೊನೆಗೊಂಡಿಲ್ಲ.

ಹೌದು, ಈಗ ವಿಶ್ವಕಪ್ ಟೂರ್ನಿಯುದ್ದಕ್ಕೂ ಅದ್ಬುತ ಪ್ರದರ್ಶನವನ್ನು ನೀಡಿದ ಲಿಯೋನೆಲ್ ಮೆಸ್ಸಿ ಮತ್ತು ಎಂಬಪ್ಪೆ ಅವರು ಈಗ ಟೂರ್ನಿ ಮುಗಿದ ನಂತರವೂ ಅವರ ಪ್ರದರ್ಶನ ಅಭಿಮಾನಿಗಳ ಮನದಲ್ಲಿ ಇನ್ನೂ ಹಚ್ಚ ಹಸಿರಾಗಿದೆ.

ಇದಕ್ಕೆ ಪೂರಕ ಎನ್ನುವಂತೆ ಈಗ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಇಂದು ಅರ್ಜೆಂಟೀನಾ ಜೆರ್ಸಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಚಿತ್ರವನ್ನು ಟ್ವೀಟ್ ಮಾಡಿ ಟ್ವೀಟ್‌ನಲ್ಲಿ ಮೆಸ್ಸಿ ಎಂದು ಬಣ್ಣಿಸಿದ್ದಾರೆ.ಇನ್ನೊಂದೆಡೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಂಬಪ್ಪೆ ಎಂದು ಬಣ್ಣಿಸಿದ್ದಾರೆ.

ಈಗ ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದನ್ನು ಮಾಡುತ್ತಿದ್ದು ಸುಮಾರು 120K ವೀಕ್ಷಣೆಗಳು, 120 ರೀಟ್ವೀಟ್‌ಗಳು ಮತ್ತು 500 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.

ಭಾನುವಾರದಂದು ದೋಹಾದಲ್ಲಿ ನಡೆದ ಫಿಫಾ ವಿಶ್ವಕಪ್ 2022 ರಲ್ಲಿ ಅರ್ಜೆಂಟೀನಾ ತಂಡವು ಪೆನಾಲ್ಟಿ ಗೋಲ್ ಗಳ ಮೂಲಕ ರೋಚಕ ಗೆಲುವನ್ನು ಸಾಧಿಸುವ ಮೂಲಕ ಸುಮಾರು 36 ವರ್ಷಗಳ ನಂತರ ಪುಟ್ಬಾಲ್ ವಿಶ್ವಕಪ್ ನ್ನು ಗೆದ್ದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

 

 

Trending News