Haldiram's ಮಾಲೀಕ ಮಹೇಶ್ ಅಗರ್ವಾಲ್ ಅವರ ನಿಧನ

ದೇಶ-ವಿದೇಶಗಳಲ್ಲಿ ಅಪಾರ ಖ್ಯಾತಿ ಪಡೆದಿರುವ ಪ್ರಿಮಿಯಂ ಬ್ರಾಂಡ್ ಹಲ್ದಿರಾಮ್ ಭುಜಿಯಾವಾಲಾ ಮಾಲೀಕ ಮಹೇಶ್ ಅಗರವಾಲ್ ನಿಧನರಾಗಿದ್ದಾರೆ.

Last Updated : Apr 6, 2020, 06:59 PM IST
Haldiram's ಮಾಲೀಕ ಮಹೇಶ್ ಅಗರ್ವಾಲ್ ಅವರ ನಿಧನ title=

ದೇಶ-ವಿದೇಶಗಳಲ್ಲಿ ಅಪಾರ ಖ್ಯಾತಿ ಪಡೆದಿರುವ ಪ್ರಿಮಿಯಂ ಬ್ರಾಂಡ್ ಹಲ್ದಿರಾಮ್ ಭುಜಿಯಾವಾಲಾ ಮಾಲೀಕ ಮಹೇಶ್ ಅಗರವಾಲ್ ನಿಧನರಾಗಿದ್ದಾರೆ. ಸಿಂಗಾಪುರ್ ನಲ್ಲಿ ಅವರು ತಮ್ಮ ಕೊನೆಯುಸಿರು ಎಳೆದಿದ್ದು, ಅವರಿಗೆ 57 ವರ್ಷ ವಯಸ್ಸಾಗಿತ್ತು. ಸಿಂಗಾಪುರ್ ನಲ್ಲಿ ಲಿವರ್ ಗೆ ಸಂಬಂಧಿಸಿದ ಕಾಯಿಲೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದರು. ವರದಿಗಳ ಪ್ರಕಾರ ಶುಕ್ರವಾರ ತಡರಾತ್ರಿ ಮಹೇಶ್ ಅಗರ್ವಾಲ ಅವರು ನಿಧನರಾಗಿದ್ದು, ಅವರ ಇಡೀ ಕುಟುಂಬ ಇದೀಗ ಸಿಂಗಾಪುರ್ ನಲ್ಲಿದೆ. ವಿಮಾನಯಾನ ಸೇವೆ ಸ್ಥಗಿತಗೊಂಡ ಕಾರಣ ಅವರ ಕುಟುಂಬ ಸದಸ್ಯರು ಭಾರತಕ್ಕೆ ಬರುವ ಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ.

ಲೀವರ್ ಟ್ರಾನ್ಸ್ಪ್ಲಾಂಟ್ ಬಳಿಕವೂ ಕೂಡ ಪ್ರಯೋಜನವಾಗಿಲ್ಲ
ಸಿಂಗಾಪುರ್ ನ ಆಸ್ಪತ್ರೆಯೊಂದರಲ್ಲಿ ಮಹೇಶ್ ಅಗರವಾಲ್ ಅವರ ಮೇಲೆ ಲೀವರ್ ಟ್ರಾನ್ಸ್  ಪ್ಲಾಂಟ್ ಚಿಕಿತ್ಸೆ ನಡೆಸಲಾಗಿತ್ತು. ಆದರೂ ಕೂಡ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಿಸಿಕೊಂಡಿಲ್ಲ ಮತ್ತು ಅವರು ಕೊನೆಯುಸಿರು ಎಳೆದಿದ್ದಾರೆ.

ಸದ್ಯ ದೇಶಾದ್ಯಂತ ಕೊರೊನಾ ವೈರಸ್ ಪ್ರಕೋಪವನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಎಲ್ಲ ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ವೈರಸ್ ನ ಹರಡುವಿಕೆಯನ್ನು ತಡೆಯಲು ಲಾಕ್ ಡೌನ್ ಘೋಷಿಸಲಾಗಿದ್ದು, ಜನರು ತಮ್ಮ ಮನೆಯಲ್ಲಿಯೇ ಬಂಧಿಯಾಗಿದ್ದಾರೆ.

ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಸಿಂಗಾಪುರ್ ಸರ್ಕಾರ ಕೂಡ ಲಾಕ್ ಡೌನ್ ಘೋಷಿಸಿದೆ. ಅಲ್ಲಿನ ಸರ್ಕಾರ ಏಪ್ರಿಲ್ 7 ರಿಂದ ಒಂದು ತಿಂಗಳ ಅವಧಿಯವರೆಗೆ ಲಾಕ್ ಡೌನ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮಹೇಶ್ ಅಗರವಾಲ್ ಅವರ ಕುಟುಂಬಸ್ಥರಿಗೆ ಮನೆಗೆ ಮರಳುವುದರ ಕುರಿತು ಚಿಂತೆ ಕಾಡಲಾರಂಭಿಸಿದೆ.

Trending News