ಗುಜರಾತ್ ಚುನಾವಣೆ: ಬಿಜೆಪಿಗೆ ಬಹುಮತ, ಬಿಜೆಪಿ 103 ಮತ್ತು ಕಾಂಗ್ರೇಸ್ 73 ಸ್ಥಾನಗಳಲ್ಲಿ ಮುನ್ನಡೆ

ರಾಜ್ಯದಲ್ಲಿ 33 ಜಿಲ್ಲೆಗಳಲ್ಲಿ ಕಠಿಣ ಭದ್ರತೆಯಲ್ಲಿ 37 ಕೇಂದ್ರಗಳಲ್ಲಿ ಗುಜರಾತ್ನಲ್ಲಿ ಮತ ಎಣಿಕೆ ನಡೆಸಲಾಗುತ್ತಿದೆ. ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ 182 ಕ್ಷೇತ್ರಗಳಲ್ಲಿ ಸರಾಸರಿ 68.41 ರಷ್ಟು ಮತದಾನ ದಾಖಲಾಗಿದೆ. 2012 ರಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದಿದೆ.

Last Updated : Dec 18, 2017, 01:21 PM IST
  • ಮೊದಲ ಹಂತದಲ್ಲಿ 19 ಜಿಲ್ಲೆಗಳಲ್ಲಿ 89 ಸ್ಥಾನಗಳಲ್ಲಿ ಶೇ. 66.75 ರಷ್ಟು ಮತದಾನವಾಗಿದೆ.
  • ಎರಡನೇ ಹಂತದಲ್ಲಿ, 14 ಜಿಲ್ಲೆಗಳಲ್ಲಿ 93 ಸ್ಥಾನಗಳಲ್ಲಿ ಶೇ. 69.99 ರಷ್ಟು ಮತದಾನ ನಡೆದಿದೆ.
  • ಗುಜರಾತ್ನಲ್ಲಿ 182 ಸ್ಥಾನಗಳಲ್ಲಿ 828 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
ಗುಜರಾತ್ ಚುನಾವಣೆ: ಬಿಜೆಪಿಗೆ ಬಹುಮತ, ಬಿಜೆಪಿ 103 ಮತ್ತು ಕಾಂಗ್ರೇಸ್ 73 ಸ್ಥಾನಗಳಲ್ಲಿ ಮುನ್ನಡೆ title=

ನವ ದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯ 182 ಸ್ಥಾನಗಳಲ್ಲಿ ಮತಗಳ ಎಣಿಕೆ ಪ್ರಾರಂಭಿಸಲಾಗಿದೆ. ಆರಂಭದಲ್ಲಿ 182 ಸ್ಥಾನಗಳ ಪ್ರವೃತ್ತಿ ಕಂಡುಬಂದಿದೆ. ಬಿಜೆಪಿ 103 ಮತ್ತು ಕಾಂಗ್ರೆಸ್ 73 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 6 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುಂದಿದ್ದಾರೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ರಾಜ್ ಕೊಟ್ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ನಾಯಕ ಅರ್ಜುನ್ ಮೊಧ್ವಾಡಿಯಾ ಅವರು ಬಿಜೆಪಿಯ ಬಾಬುಭಾಯ್ ಬೋಕ್ರಿಯಾ ಮುಂದೆ ಸೋಲೊಪ್ಪಿಕೊಂಡಿದ್ದಾರೆ. ಸ್ವತಂತ್ರ ಅಭ್ಯರ್ಥಿ ದಲಿತ ನಾಯಕ ಜಿಗ್ನೇಶ್ ಮೆವಾನಿ ವಡ್ಗಾಂವ್ ಕ್ಷೇತ್ರದಿಂದ ಗೆದ್ದಿದ್ದಾರೆ. ರಾಜಧಾನ್ಪುರ್ ಕ್ಷೇತ್ರದ ಕಾಂಗ್ರೆಸ್ ಮುಖಂಡ ಅಲ್ಪೇಶ್ ಠಾಕೂರ್ ಹಿಂದೆ ಬಿದ್ದಿದ್ದಾರೆ. ಮೆಹ್ಸಾನದಲ್ಲಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮುಂದೆ ಸಾಗಿದ್ದಾರೆ. ಹಾರ್ದಿಕ್ ಪಟೇಲ್ ಪ್ರತಿಷ್ಠೆಯ ಕ್ಷೇತ್ರವಾದ ವಾರಂಗಾಂ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ.

ಗುಜರಾತ್ ನಲ್ಲಿ GST ಯನ್ನು ಆರೋಪಿಸುತ್ತಿದ್ದ ವಿರೋಧ ಪಕ್ಷದ ಹವಾ ಕಡಿಮೆಯಾಗಿದೆ. ಗುಜರಾತಿನ ವ್ಯಾಪಾರಸ್ಥರ ಪ್ರಾಂತ್ಯವಾದ ಸೂರತ್ನ 16 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಸಾಧಿಸಿದೆ. ಕಾಂಗ್ರೇಸ್ 4 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ವಡೋದರದ 10 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ನಿರೀಕ್ಷೆ ಇದೆ. ಆ ಪ್ರದೇಶದಲ್ಲಿ ಕಾಂಗ್ರೇಸ್ ಕೇವಲಒಂದು ಸ್ಥಾನವನ್ನು ಮಾತ್ರ ಗೆಲ್ಲಬಹುದಾದ ವಾತಾವರಣ ಇದೆ.

ಫಲಿತಾಂಶ:
* ಮೊದಲ ಫಲಿತಾಂಶ ಅಹಮದಾಬಾದ್ನ ಎಲ್ಲಿಸ್ಬ್ರಿಡ್ಜ್ ಕ್ಷೇತ್ರದಿಂದ ಬಂದಿದೆ. ಈ ಸ್ಥಾನವು ಯಾವಾಗಲೂ ಬಿಜೆಪಿಯ ಭದ್ರಕೋಟೆ ಎನಿಸಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ರಾಕೇಶ್ ಷಾ ಗೆದ್ದಿದ್ದಾರೆ.
* ಅಹ್ಮದಾಬಾದ್ನಿಂದ ಎರಡನೆಯ ಫಲಿತಾಂಶವೂ ಬಂದಿದ್ದು, ಕಾಂಗ್ರೆಸ್ನ ಇಮ್ರಾನ್ ಜಮಾಲ್ಪುರ್ ಖಾಡಿಯಾ ಸೀಟನ್ನು ಗೆದ್ದುಕೊಂಡಿದೆ.
* ಅಕೋಟಾ ಕ್ಷೇತ್ರದಿಂದ ಬಿಜೆಪಿಯ ಬಾಂಧನ್ ಮೊಹಲ್ಲಾ ಜಯ ಸಾಧಿಸಿದ್ದಾರೆ.
* ರಾಜ್ಕೋಟ್ ವೆಸ್ಟ್ ಕ್ಷೇತ್ರದಿಂದ ಮುಖ್ಯಮಂತ್ರಿ ವಿಜಯ್ ರುಪಾನಿ ಗೆದ್ದಿದ್ದಾರೆ.
* ಘಾಟ್ಲೋಡಿಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಭೂಪೇಂದ್ರ ಪಟೇಲ್ ಜಯ ಸಾಧಿಸಿದ್ದಾರೆ.
* ಗೊಂಡಾಲ್ ಕ್ಷೇತ್ರದಿಂದ ಬಿಜೆಪಿಯ ಗಿಟಾಲ್ ಜಡೇಜಾ ಗೆದ್ದಿದ್ದಾರೆ.
* ಬಿಜೆಪಿಯ ಪ್ರದೀಪ್ ಭಾಯಿ ಪರ್ಮಾರ್ ಅಸ್ರ್ವಾದಿಂದ ಗೆದ್ದಿದ್ದಾರೆ.
* ಗಾಂಧಿ ಕ್ಷೇತ್ರದಿಂದ ಬಿಜೆಪಿ ನರೇಶ್ಭಾಯಿ ಪಟೇಲ್ ಗೆದ್ದಿದ್ದಾರೆ.

ಉತ್ತರ ಗುಜರಾತ್
ಉತ್ತರ ಗುಜರಾತ್ನ 32 ಕ್ಷೇತ್ರಗಳಲ್ಲಿ 17 ಕ್ಷೇತ್ರಗಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 13 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೆ, 2 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುಂದಿದ್ದಾರೆ.

ಮಧ್ಯ ಗುಜರಾತ್
ಮಧ್ಯ ಗುಜರಾತ್ನ 61 ಕ್ಷೇತ್ರಗಳಲ್ಲಿ 40 ಕ್ಷೇತ್ರಗಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 20 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೆ, 1 ಸ್ಥಾನದಲ್ಲಿ ಸ್ವತಂತ್ರ ಅಭ್ಯರ್ಥಿ ಮುಂದಿದ್ದಾರೆ.

ದಕ್ಷಿಣ ಗುಜರಾತ್ 
ದಕ್ಷಿಣ ಗುಜರಾತ್ನ 35 ಕ್ಷೇತ್ರಗಳಲ್ಲಿ ಬಿಜೆಪಿ 23, ಕಾಂಗ್ರೇಸ್ 10 ಮತ್ತು 2 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಸೌರಾಷ್ಟ
ಸೌರಾಷ್ಟ್ರದ 54 ಕ್ಷೇತ್ರಗಳಲ್ಲಿ 22 ಕ್ಷೇತ್ರಗಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 32 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು  ಮುನ್ನಡೆ ಸಾಧಿಸಿದ್ದಾರೆ. 

ರಾಜ್ಯದಲ್ಲಿ 33 ಜಿಲ್ಲೆಗಳಲ್ಲಿ ಕಠಿಣ ಭದ್ರತೆಯಲ್ಲಿ 37 ಕೇಂದ್ರಗಳಲ್ಲಿ ಗುಜರಾತ್ನಲ್ಲಿ ಮತ ಎಣಿಕೆ ನಡೆಸಲಾಗುತ್ತಿದೆ. ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ 182 ಕ್ಷೇತ್ರಗಳಲ್ಲಿ ಸರಾಸರಿ 68.41 ರಷ್ಟು ಮತದಾನ ದಾಖಲಾಗಿದೆ. 2012 ರಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದಿದೆ.

ರಾಜ್ಯದಲ್ಲಿ 33 ಜಿಲ್ಲೆಗಳಲ್ಲಿ ಕಠಿಣ ಭದ್ರತೆಯಲ್ಲಿ 37 ಕೇಂದ್ರಗಳಲ್ಲಿ ಗುಜರಾತ್ನಲ್ಲಿ ಮತ ಎಣಿಕೆ ನಡೆಸಲಾಗುತ್ತಿದೆ. ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ 182 ಕ್ಷೇತ್ರಗಳಲ್ಲಿ ಸರಾಸರಿ 68.41 ರಷ್ಟು ಮತದಾನ ದಾಖಲಾಗಿದೆ. ಇಂದು, 1828 ಅಭ್ಯರ್ಥಿಗಳ ಭವಿಷ್ಯವು ನಿರ್ಧಾರವಾಗಲಿದೆ. ಈ ಬಾರಿ, 2012 ಚುನಾವಣೆಗೆ ಹೋಲಿಸಿದರೆ ಶೇಕಡ 2.91 ರಷ್ಟು ಮತದಾನ ಕಡಿಮೆಯಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ, 71.32 ರಷ್ಟು ಮತಗಳನ್ನು ನೋಂದಾಯಿಸಲಾಗಿದೆ. 2012 ರಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದುಕೊಂಡಿತು. 61 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಬಾರಿ, ಗುಜರಾತ್ನಲ್ಲಿ ಬಿಜೆಪಿ ಸರ್ಕಾರವೆಂದು ಎಕ್ಸಿಟ್ ಪೋಲ್ ಹೇಳಿದೆ.

 

Trending News