ಆಂಧ್ರಪ್ರದೇಶ(ಶ್ರೀಹರಿಕೋಟ): ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ಬುಧವಾರ ಯಶಸ್ವಿಯಾಗಿ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದೆ.
ಸೆಟಲೈಟ್ ಲಾಂಚ್ ವೆಹಿಕಲ್(GSLV-mk III) 43.4 ಮೀಟರ್ ಎತ್ತರವಿದ್ದು, 640 ಟನ್ ಭಾರ ಹೊಂದಿದೆ. ಇದು ಹತ್ತು ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದೆ ಎಂದು ಇಸ್ರೋ ಉಡಾವಣೆ ನಂತರ ತಿಳಿಸಿದ್ದಾರೆ.
📡LIVE Now: Launch of GSLV Mk-III D2/ GSAT-29 Mission from Satish Dhawan Space Centre (SHAR), Sriharikota https://t.co/nIwBVLhaBx
— PIB India (@PIB_India) November 14, 2018
"ಜಿಎಸ್ಎಲ್ವಿ-ಎಂಕೆಐಐಐ-ಡಿ 2 ಎರಡನೇ ಅಭಿವೃದ್ಧಿ ವಿಮಾನ ಇದು ಜಿಸ್ಯಾಟ್ -29 ಉಡಾವಣೆ ಮಾಡಲು ಬಳಸಲಾಗಿದೆ,ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ವಲಯದಲ್ಲಿ ಉಪಗ್ರಹವು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಸಂಪರ್ಕ ಕಲ್ಪಿಸಲು ಉಪಯುಕ್ತವಾಗಿದೆ" ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ.