ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ನೆರವಾಗಿ- ಕೇಂದ್ರಕ್ಕೆ ಸಿಜೆಐ ಪತ್ರ

ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ನೆರವಾಗಬೇಕೆಂದು ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾದ ಎನ್‌ವಿ ರಮಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Written by - Zee Kannada News Desk | Last Updated : Jun 26, 2021, 08:31 PM IST
  • ಕೊರೊನಾದಿಂದ ಅರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ನೆರವಾಗಬೇಕೆಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಎನ್‌ವಿ ರಮಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
  • ಅಷ್ಟೇ ಅಲ್ಲದೆ ಡಿಜಿಟಲ್ ಕಂದರದಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ವಕೀಲರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಆದ್ದರಿಂದ ಅವರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಪ್ರವೇಶಕ್ಕಾಗಿ ಸೌಲಭ್ಯಗಳನ್ನು ತೆರೆಯುವಂತೆ ಕೇಂದ್ರವನ್ನು ಕೋರಿದ್ದಾರೆ.
ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ನೆರವಾಗಿ- ಕೇಂದ್ರಕ್ಕೆ ಸಿಜೆಐ ಪತ್ರ  title=
ಸಂಗ್ರಹ ಚಿತ್ರ

ನವದೆಹಲಿ: ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ನೆರವಾಗಬೇಕೆಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಾದ ಎನ್‌ವಿ ರಮಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಅಷ್ಟೇ ಅಲ್ಲದೆ ಡಿಜಿಟಲ್ ಕಂದರದಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ವಕೀಲರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಆದ್ದರಿಂದ ಅವರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಪ್ರವೇಶಕ್ಕಾಗಿ ಸೌಲಭ್ಯಗಳನ್ನು ತೆರೆಯುವಂತೆ ಕೇಂದ್ರವನ್ನು ಕೋರಿದ್ದಾರೆ.ಸಿಜೆಐ ರಮಣ (CJI NV Ramana) ಅವರು ಇತ್ತೀಚೆಗೆ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದು, ನಗರಗಳಲ್ಲಿನ ವಕೀಲರ ನಡುವೆ ಮತ್ತು ಅಧೀನ ನ್ಯಾಯಾಲಯದ ಮಟ್ಟದಲ್ಲಿರುವ ಡಿಜಿಟಲ್ ಕಂದರದ ವಿಷಯವನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಶಾಕ್ ಕೊಟ್ಟ ಸಂಜಯ್ ರೌತ್ ಹೇಳಿಕೆ!

ವಕೀಲರಿಗೆ ನ್ಯಾಯಾಲಯಗಳಿಗೆ ಸಂಪರ್ಕ ಸಾಧಿಸಲು ನಿರಂತರ ಇಂಟರ್ನೆಟ್ ಒದಗಿಸಲು ತಾಲ್ಲೂಕು ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಟೆಲಿಕಾಂ ಕಂಪನಿಗಳೊಂದಿಗೆ ಮಾತನಾಡಲು ನಾನು ಕಾನೂನು ಸಚಿವರಿಗೆ ಮನವಿ ಮಾಡಿದ್ದೇನೆ" ಎಂದು ಸಿಜೆಐ ರಮಣ ತಿಳಿಸಿದ್ದಾರೆ.ಅವರು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರ "Anomalies in Law & Justice: Writings Related to Law & Justice" ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಇದನ್ನೂ ಓದಿ: "ಗೂಂಡಾ ಎಂದು ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ, ನಾವು ಪ್ರಮಾಣೀಕರಿಸಿದ ಗೂಂಡಾಗಳು"

ಸಿಜೆಐ ರಮಣ ಅವರು ಗ್ರಾಮೀಣ, ಬುಡಕಟ್ಟು, ದೂರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿನ ಕಳಪೆ ಸಂಪರ್ಕವು ನ್ಯಾಯದ ತ್ವರಿತತೆ  ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಮತ್ತು ದೇಶಾದ್ಯಂತ ಸಾವಿರಾರು ಯುವ ವಕೀಲರನ್ನು ತಮ್ಮ ಜೀವನೋಪಾಯದಿಂದ ವಂಚಿತಗೊಳಿಸುತ್ತಿದೆ ಎಂದು ಹೇಳಿದರು.ಡಿಜಿಟಲ್ ವಿಭಜನೆಯಿಂದಾಗಿ ಇಡೀ ಪೀಳಿಗೆಯ ವಕೀಲರನ್ನು ವ್ಯವಸ್ಥೆಯಿಂದ ಹೊರಗೆ ತಳ್ಳಲಾಗುತ್ತಿದೆ ಎಂದು ರಮಣ ಹೇಳಿದರು.

ಟೆಲಿಕಾಂ ಕಂಪೆನಿಗಳಿಗೆ ನಾನೇ ಕರೆ ಮಾಡಿ ಮತ್ತು ಉತ್ತಮ ಇಂಟರ್ನೆಟ್ ಪ್ರವೇಶಕ್ಕಾಗಿ ದೂರದ ಪ್ರದೇಶಗಳಲ್ಲಿ ವರ್ಧಕ ವ್ಯವಸ್ಥೆಯನ್ನು ಒದಗಿಸುವಂತೆ ಕೇಳಿಕೊಳ್ಳಬೇಕೆಂದು ನಾನು ಯೋಚಿಸಿದ್ದೆ, ಆದರೆ ಈ ವಿಚಾರವಾಗಿ ನಾನು ಟೆಲಿಕಾಂ ಕಂಪನಿಗಳೊಂದಿಗೆ ಮಾತನಾಡಲು ಕಾನೂನು ಸಚಿವರಿಗೆ ಹೇಳಿದ್ದೇನೆ" ಎಂದು ಹೇಳಿದರು.'ಸೌಲಭ್ಯಗಳಿಲ್ಲದ ವಕೀಲರನ್ನು ನೀವು ನೋಡಿಕೊಳ್ಳದಿದ್ದರೆ, ದೂರದ ಪ್ರದೇಶಗಳಲ್ಲಿನ ಇಡೀ ತಲೆಮಾರಿನ ವಕೀಲರನ್ನು ವ್ಯವಸ್ಥೆಯಿಂದ ಹೊರಗೆ ಇಡುವಂತಾಗುತದೆ, ಇದು ಬಹಳ ಗಂಭೀರ ವಿಷಯವಾಗಿದೆ"ಅವರು ಹೇಳಿದರು.

ಇದನ್ನೂ ಓದಿ : CBSE ವಿದ್ಯಾರ್ಥಿಗಳಿಗೆ ಪ್ರಮುಖ ಸುದ್ದಿ, ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಮಹತ್ವದ ಬದಲಾವಣೆ

ಸಾಂಕ್ರಾಮಿಕ ರೋಗದಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವ ಮತ್ತು ಹಣಕಾಸಿನ ನೆರವಿನ ಅಗತ್ಯವಿರುವ ವಕೀಲರಿಗೆ ಸಹಾಯ ಮಾಡುವ ಯಾಂತ್ರಿಕ ವ್ಯವಸ್ಥೆಯನ್ನು ಸರ್ಕಾರವು ರೂಪಿಸಬೇಕೆಂದು ಅವರು ಸಚಿವರಿಗೆ ಮನವಿ ಮಾಡಿದ್ದಾರೆ.ಸಿಜೆಐ ಕಚೇರಿಯ ಪ್ರಕಾರ, ಕಾನೂನು ವೃತ್ತಿಪರರು ಮತ್ತು ಸಂಬಂಧಿತ ಕಾರ್ಯಕರ್ತರನ್ನು ಮುಂಚೂಣಿ ಕೆಲಸಗಾರರೆಂದು ಘೋಷಿಸುವ ಅವಶ್ಯಕತೆ ಮತ್ತು ಅವರೆಲ್ಲರಿಗೂ ಆದ್ಯತೆಯ ಮೇರೆಗೆ ಲಸಿಕೆ ಹಾಕುವ ಅಗತ್ಯವನ್ನು ಸಹ ಸಿಜೆಐ ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಕಾನೂನು ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಪಾತ್ರದ ಕುರಿತ ಚರ್ಚೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಪತ್ರ ಅವರು ಈ ಹೇಳಿಕೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News