ಮೂರು ತಿಂಗಳುಗಳವರೆಗೆ ಸರ್ಕಾರವೇ ಭರಿಸಲಿದೆ ನಿಮ್ಮ PF, ಅನ್ವಯಿಸಲಿದೆ ಈ ಷರತ್ತು

ನಿಮ್ಮ ಉದ್ಯೋಗದಾತ ಸರ್ಕಾರದ ಕೆಲವು ನಿಯಮಗಳನ್ನು ಪೂರೈಸಿದರೆ ಮುಂದಿನ ಮೂರು ತಿಂಗಳವರೆಗೆ ಪಿಎಫ್ ಹಣವನ್ನು ನಿಮ್ಮ ಸಂಬಳದಿಂದ ಕಡಿತಗೊಳಿಸಲಾಗುವುದಿಲ್ಲ.  

Last Updated : Apr 13, 2020, 12:54 PM IST
ಮೂರು ತಿಂಗಳುಗಳವರೆಗೆ ಸರ್ಕಾರವೇ ಭರಿಸಲಿದೆ ನಿಮ್ಮ PF, ಅನ್ವಯಿಸಲಿದೆ ಈ ಷರತ್ತು title=

ನವದೆಹಲಿ: ನೀವು ಉದ್ಯೋಗದಲ್ಲಿದ್ದರೆ ಮತ್ತು ನಿಮ್ಮ ಉದ್ಯೋಗದಾತರು ಸರ್ಕಾರದ ಕೆಲವು ಷರತ್ತುಗಳಿಗೆ ಒಳಪಟ್ಟಿದ್ದರೆ, ಮುಂದಿನ 3 ತಿಂಗಳುಗಳವರೆಗೆ ನಿಮ್ಮ ಸಂಬಳದ ಪಿಎಫ್ ಖಾತೆಗೆ ಕೊಡುಗೆ ನೀಡುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ನಿಮ್ಮ ಉದ್ಯೋಗದಾತ ಈ ನಿಯಮಗಳನ್ನು ಪೂರೈಸಿದರೆ ಮುಂದಿನ ಮೂರು ತಿಂಗಳು ಪಿಎಫ್ ಹಣವನ್ನು ನಿಮ್ಮ ಸಂಬಳದಿಂದ ಕಡಿತಗೊಳಿಸಲಾಗುವುದಿಲ್ಲ.

ಸರ್ಕಾರ ಕೈಗೊಂಡ ನಿರ್ಣಯದಲ್ಲಿ ಏನು ಹೇಳಿದೆ?
ಮುಂದಿನ ಮೂರು ತಿಂಗಳವರೆಗೆ ಉದ್ಯೋಗದಾತ ಮತ್ತು ಉದ್ಯೋಗಿಗಳ ಕೊಡುಗೆಯನ್ನು (ತಲಾ ಶೇ.12ರಷ್ಟು ) ಪಾವತಿಸುವುದಾಗಿ ಭಾರತ ಸರ್ಕಾರ ಹೇಳಿದೆ. ಒಂದು ವೇಳೆ ನಿಮ್ಮ ಸಂಸ್ಥೆಯಲ್ಲಿ 100 ಕ್ಕಿಂತ ಅಧಿಕ ಉದ್ಯೋಗಿಗಳಿದ್ದು, ಅವರಲ್ಲಿ ಶೇ.90ರಷ್ಟು ಉದ್ಯೋಗೀಗಳ ಮಾಸಿಕ ಸಂಬಳ 15 ಸಾವಿರಕ್ಕಿಂತ ಕಡಿಮೆ ಇದ್ದರೆ, ಇದರ ಆರ್ಥಿಕ ಲಾಭ ನಿಮಗೆ ಸಿಗಲಿದ್ದು, ಪೇರೋಲ್ ಮೇಲೆಯೂ ಕೂಡ ನಿಮ್ಮ ಕೆಲಸದ ನಿರಂತರತೆ ಮುಂದುವರೆಯಲಿದೆ. ಈ ಸೌಕರ್ಯದ ಲಾಭ ಪಡೆಯಲು ಎಲ್ಲ ನೌಕರರಿಗೆ ವೇತನ ನೀಡುವಿಕೆ ಹಾಗೂ ಸಮಯಕ್ಕೆ ತಕ್ಕಂತೆ ECR ಪಾವತಿಸುವುದನ್ನು ಸುನಿಶ್ಚಿತಗೊಳಿಸಿ.

ಸರ್ಕಾರ ವಿಧಿಸಿರುವ ಶರತ್ತಿನ ಅರ್ಥವೇನು?
ಕನಿಷ್ಠ 100 ಉದ್ಯೋಗಿಗಳನ್ನು ಹೊಂದಿರುವ ಮತ್ತು 90 ಪ್ರತಿಶತದಷ್ಟು ನೌಕರರ ವೇತನವನ್ನು 15,000 ರೂ.ಗಿಂತ ಕಡಿಮೆ ಇರುವ ಸಂಸ್ಥೆಗಳ ನೌಕರರು ಸರ್ಕಾರದ ಈ ನಿರ್ಣಯದ ಲಾಭ ಪಡೆಯಬಹುದಾಗಿದೆ. ಮುಂದಿನ ಮೂರು ತಿಂಗಳುಗಳವರೆಗೆ, ನಿಮ್ಮ ಸಂಬಳದಿಂದ ಶೇ.12 ರಷ್ಟು ನಿಮ್ಮ ಕೊಡುಗೆ ಮತ್ತು ಶೇ.12 ರಷ್ಟು ನಿಮ್ಮ ನೌಕರಿದಾತರ ಕೊಡುಗೆಯನ್ನು ಸರ್ಕಾರವೇ ಭರಿಸಲಿದೆ. ಕಳೆದ ಮಾರ್ಚ್ 26 ರಂದು ಈ ಕುರಿತು ಘೋಷಣೆ ಮಾಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನೌಕರಿದಾತರ ಹಾಗೂ ನೌಕರರ PF ಕೊಡುಗೆಯನ್ನು ಮುಂದಿನ ಮೂರು ತಿಂಗಳುಗಳ ಅವಧಿಯವರೆಗೆ ಕೆಲ ಶರತ್ತುಗಳ ಆಧಾರದ ಮೇಲೆ ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದರು.

PF ನಿಯಮ ಏನು ಹೇಳುತ್ತದೆ.?
ನಿಯಮಗಳ ಅನುಸಾರ ಎಂಪ್ಲಾಯಿ ಪ್ರಾವಿಡೆಂಟ್ ಖಾತೆಯಲ್ಲಿ ನೌಕರರು ಮತ್ತು ನೌಕರಿದಾತರು ತಮ್ಮ ನೌಕರರ ಮಾಸಿಕ ಸಂಬಳದ ಶೇ.12-ಶೇ.12ರಷ್ಟು ಕೊಡುಗೆಯನ್ನು ಪಡೆಯಲಾಗುತ್ತದೆ. ಇದರ ಒಂದು ಭಾಗ ನೌಕರರ ಪೆನ್ಶನ್ ಖಾತೆಗೂ ಸಹ ಹೋಗುತ್ತದೆ.

Trending News